ನಿಮಗೆ ಸಲ್ಯೂಟ್ ಬಾಸ್.. ನಟ ದರ್ಶನ್ ಅವರಿಗೆ ಚಿಕ್ಕಣ್ಣ ಹೀಗೆ ಹೇಳಿದ್ದು ಏಕೆ?

ನಟ ದರ್ಶನ್ & ಚಿಕ್ಕಣ್ಣ ನಡುವೆ ಅತ್ಯಂತ ಆತ್ಮೀಯ ಸಂಬಂಧ ಇದೆ. ಈಗಾಗಲೇ ಹಲವು ವಿಡಿಯೋಗಳಲ್ಲಿ ಅಭಿಮಾನಿಗಳು ಇದನ್ನು ಕಣ್ತುಂಬಿಕೊಂಡಿದ್ದಾರೆ. ಇದೀಗ ನಟ ದರ್ಶನ್ ಅವರ ಬಗ್ಗೆ ಚಿಕ್ಕಣ್ಣ ಮುಕ್ತವಾಗಿ ಮಾತನಾಡಿದ್ದಾರೆ. ಚಿಕ್ಕಣ್ಣ ಆಡಿರುವ ಮಾತುಗಳು ಈಗ ಫುಲ್ ವೈರಲ್ ಆಗುತ್ತಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗು ಭಾರಿ ಖುಷಿ ಕೊಟ್ಟಿದೆ. ಅಷ್ಟಕ್ಕೂ ಚಿಕ್ಕಣ್ಣ ಈಗ ದರ್ಶನ್ ಅವರ ಬಗ್ಗೆ ಹೇಳಿದ್ದೇನು?

ಕನ್ನಡ ಸಿನಿ ರಂಗಕ್ಕೆ 2011ರಲ್ಲಿ ನಟ ಚಿಕ್ಕಣ್ಣ ಎಂಟ್ರಿ ಕೊಟ್ಟಿದ್ದರು ಕಿರಾತಕ ಸಿನಿಮಾ ಮೂಲಕ ಕನ್ನಡಿಗರ ಬಣ್ಣದ ಲೋಕಕ್ಕೆ ಬಂದಿದ್ದರು ಚಿಕ್ಕಣ್ಣ. ಇದಾದ ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದಿದ್ದವು. ಹೀಗೆ ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿಮಾ ರಂಗದಲ್ಲಿ ಬಿಡುವೇ ಇಲ್ಲದ ನಟನಾಗಿ ಬೆಳೆದು ನಿಂತಿದ್ದಾರೆ ಚಿಕ್ಕಣ್ಣ. ಈ ನಟ ಮೊದಲನೆ ಬಾರಿಗೆ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಮಯದಲ್ಲೇ ಕಾಟೇರ ದರ್ಶನ್ ಅವರ ಬಗ್ಗೆ ಚಿಕ್ಕಣ್ಣ ಮನಸ್ಸು ತುಂಬಿ ಮಾತನಾಡಿದ್ದಾರೆ.

Chikkanna Speaks About Challenging Star Darshan

ದರ್ಶನ್ ಬಗ್ಗೆ ಚಿಕ್ಕಣ್ಣ ಹೇಳಿದ್ದೇನು?

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಕಾಟೇರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ದರ್ಶನ್‌ ಅವರಿಗೆ 'ಭೂಮಿ ಪುತ್ರ' ಬಿರುದು ಕೊಡಲಾಗಿದೆ. ರಾಜ್ಯ ರೈತ ಸಂಘ ಈ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಇದೇ ವೇದಿಕೆ ಮೇಲೆ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಟ ದರ್ಶನ್ ಅವರಿಗೆ 'ಭೂಮಿ ಪುತ್ರ' ಬಿರುದು ನೀಡಿದ್ದರು. ಹೀಗೆ ಕಾಟೇರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ದರ್ಶನ್ ಅವರ ಅಭಿಮಾನಿಗಳಿಗೆ ಡಬಲ್ ಖುಷಿಯು ಸಿಕ್ಕಂತಾಗಿದೆ. ಹೀಗಿದ್ದಾಗ ನಟ ಚಿಕ್ಕಣ್ಣ ಇದೇ ವೇದಿಕೆ ಮೇಲೆ ನಿಂತು ನಟ ದರ್ಶನ್ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಬಾಸ್.. ಬಾಸ್.. ಎಂದ ಚಿಕ್ಕಣ್ಣ!

ನಟ ದರ್ಶನ್ ಅವರು ಹಾಗೂ ಚಿಕ್ಕಣ್ಣ ಅವರ ನಡುವೆ ಅತ್ಯುತ್ತಮ ಸಂಬಂಧ ಇದೆ. ಹೀಗೆ ಹಲವು ವರ್ಷದಿಂದ ಚಿಕ್ಕಣ್ಣ & ದರ್ಶನ್ ಅವರು ಒಟ್ಟಾಗಿದ್ದಾರೆ. ಇದೀಗ ಕಾಟೇರ ಸಂಭ್ರಮ ಕಾರ್ಯಕ್ರಮದಲ್ಲಿ ನಟ ಚಿಕ್ಕಣ್ಣ ಅವರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಾಗಿ ಮಾತನಾಡಿದ್ದಾರೆ. ಹಾಗೇ ಕಾಟೇರ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹೀಗೆ ಕನ್ನಡಿಗರ ಮನಸ್ಸು ಗೆದ್ದ ದರ್ಶನ್ ಅವರನ್ನು ಹಾಡಿ ಹೊಗಳಿದ್ದಾರೆ ನಟ ಚಿಕ್ಕಣ್ಣ. ಇದೀಗ ಚಿಕ್ಕಣ್ಣ ಅವರ ಹೇಳಿಕೆ ವೈರಲ್ ಆಗುತ್ತಿದೆ.

200 ಕೋಟಿ ಕ್ಲಬ್‌ ಸೇರಿದ ಕಾಟೇರ!

ಕಾಟೇರ ಸಿನಿಮಾ ಈಗಾಗಲೇ 200 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದೆ. 'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿ, ಮತ್ತೆ 2ನೇ ದಿನ ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ ತನ್ನ ಅಬ್ಬರವನ್ನು ಇದೇ ಕನ್ನಡಿಗರ ಸಿನಿಮಾ ಮುಂದುವರಿಸಿತ್ತು.

Chikkanna Speaks About Challenging Star Darshan

6ನೇ ದಿನ 9.78 ಕೋಟಿ ಗಳಿಸುವ ಮೂಲಕ 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರನಿಗೆ, 7ನೇ ದಿನಕ್ಕೆಲ್ಲ 100 ಕೋಟಿ ರೂಪಾಯಿ ಕ್ಲಬ್ ಗರಿ ಸಿಕ್ಕಿತ್ತು. ಬಿಡುಗಡೆಯಾದ 2 ವಾರಕ್ಕೆ ನಟ ದರ್ಶನ್ ಅವರ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಇದೇ ವೇಳೆ ದರ್ಶನ್ ಅವರ ಅಭಿಮಾನಿಗಳು ಕೂಡ ಕಾಟೇರ ನೋಡಿ ಸಂಭ್ರಮವನ್ನ ವ್ಯಕ್ತಪಡಿಸುತ್ತಿದ್ದಾರೆ. ಹೀಗಿದ್ದಾಗಲೇ ನಟ ಚಿಕ್ಕಣ್ಣ ಅವರು ದರ್ಶನ್ ಅವರನ್ನು ಮನಸ್ಸು ತುಂಬಿ ಹೊಗಳಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+