Chhaava Movie Review: ಛಾವಾ ಸಿನಿಮಾ ರಿವೀವ್: ರಶ್ಮಿಕಾ- ವಿಕ್ಕಿ ಕೌಶಲ್ ಸಿನಿಮಾ ಹೇಗಿದೆ?
'ಛಾವಾ' ಸಿನಿಮಾ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ, ವಿನೀತ್ ಕುಮಾರ್ ಸಿಂಗ್ ಮತ್ತು ಡಯಾನಾ ಪೆಂಟಿ ಅಭಿನಯಿಸಿದ್ದಾರೆ. ಹಾಗಾದರೆ ಸಿನಿಮಾ ನೋಡಿ ಜನ ಏನಂದರು? ಸಿನಿಮಾ ರಿವೀವ್ ಹೇಗಿದೆ ಎಂದು ತಿಳಿಯೋಣ.
ನಿರ್ದೇಶಕ ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ, ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನದ ಕಥೆಯಾಗಿದೆ. 'ಛಾವಾ' ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ರಾಣಿ ಯೇಸುಬಾಯಿ ಪಾತ್ರದಲ್ಲಿ ಮತ್ತು ಅಕ್ಷಯ್ ಖನ್ನಾ ಮೊಘಲ್ ಚಕ್ರವರ್ತಿ ಔರಂಗಜೇಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಅಜಯ್ ದೇವಗನ್ ಅವರ ಧ್ವನಿಯೊಂದಿಗೆ ಪ್ರಾರಂಭವಾಗುತ್ತದೆ. ಛಾವಾ ಕಥೆಯು ಛತ್ರಪತಿ ಸಂಭಾಜಿ ಮಹಾರಾಜರ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಶಿವಾಜಿಯ ಮರಣದ ನಂತರ ಸಂಭಾಜಿ ಮಹಾರಾಜರು ಔರಂಗಜೇಬನ ಜೀವನವನ್ನು ಹೇಗೆ ಕಷ್ಟಕರವಾಗಿಸುತ್ತಾರೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಔರಂಗಜೇಬನ ಏಕೈಕ ಗುರಿ ಸಂಭಾಜಿಯನ್ನು ಸೆರೆಹಿಡಿಯುವುದು. ಹೀಗಾಗಿ ಸಂಭಾಜಿ ಹಾಗೂ ಔರಂಗಜೇಬ ನಡುವೆ ಯುದ್ಧ ನಡೆಯಲಿದೆ.
ಛತ್ರಪತಿ ಸಂಭಾಜಿ ಮಹಾರಾಜರ ಶೌರ್ಯದ ಕಥೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಆದರೆ ಇದೀಗ ಲಕ್ಷ್ಮಣ್ ಉಟೇಕರ್ ಅವರು ಸಂಭಾಜಿಯವರ ಶೌರ್ಯವನ್ನು ತೋರಿಸುವ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಬುರ್ಹಾನ್‌ಪುರದಿಂದ ಪ್ರಾರಂಭವಾಗುತ್ತದೆ. ಈ ಚಿತ್ರಕ್ಕೆ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಛಾವಾ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ
ಚಿತ್ರದ ಹಲವು ದೃಶ್ಯಗಳು ಬೇರೆ ಚಿತ್ರಗಳಲ್ಲಿ ಕಂಡುಬಂದಿವೆ. ದಿವ್ಯಾ ದತ್ತ ತನ್ನ ಕೈಗಳಿಂದ ದೀಪವನ್ನು ನಂದಿಸುವ, ಹೊರಬರುವ ಯೋಧರ ದೃಶ್ಯಗಳು ಬೇರೆ ಚಿತ್ರಗಳಲ್ಲಿ ಕಂಡು ಬಂದ ದೃಶ್ಯಗಳಾಗಿವೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕಥೆ ಸಂಪರ್ಕವನ್ನು ಕಲ್ಪಿಸುವಲ್ಲಿ ವಿಫಲಗೊಂಡಿದೆ. ಅಲ್ಲದೆ ಪಾತ್ರಗಳನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಜನ ಹೇಳಿಕೊಂಡಿದ್ದಾರೆ.
ನಟನೆಯ ಬಗ್ಗೆ ಹೇಳುವುದಾದರೆ, ವಿಕ್ಕಿ ಕೌಶಲ್ ಈ ಚಿತ್ರದ ಪಾತ್ರದಲ್ಲಿ ಜೀವ ತುಂಬಿದ್ದಾರೆ. ಯಾಕೆಂದರೆ ಇದು ದೊಡ್ಡ ಬಜೆಟ್ ಸಿನಿಮಾವಾಗಿದೆ. ಆದ್ದರಿಂದ ವಿಕ್ಕಿ ಕೌಶಲ್ ನಟನೆಯಲ್ಲಿ ಯಾವುದೇ ಮೋಸ ಇಲ್ಲ. ಆದರೆ ಅವರ ಸಂಭಾಷಣೆ ಒಂದು ಅಥವಾ ಎರಡು ಸಂದರ್ಭಗಳಲ್ಲಿ ಹೊರತುಪಡಿಸಿ ಬೇರೇಲ್ಲೂ ಕೂಡ ಬೆರಗುಗೊಳಿಸುವುದಿಲ್ಲ. ಅಲ್ಲದೆ ಅವರ ಸಂಭಾಷಣೆ ಕೇಳಿದಾಗ ಮರಾಠಾ ಯೋಧನ ಪಾತ್ರದಲ್ಲಿ ಈಗಾಗಲೇ ಛಾಪು ಮೂಡಿಸಿರುವ ಬಾಲಿವುಡ್ ನಟನೊಬ್ಬ ನೆನಪಿಗೆ ಬರುತ್ತಾರೆ.

ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ವಿಕಿ ಕೌಶಲ್ ಅತಿಯಾದ ಉತ್ಸಾಹದಿಂದ ಕಾಣಿಸಿಕೊಂಡರೆ, ಅಕ್ಷಯ್ ಖನ್ನಾ ಅವರ ಶಾಂತ ಮತ್ತು ಸಂಯಮದ ನಟನೆ ಹಾಗೂ ವಿನೀತ್ ಕುಮಾರ್ ಸಿಂಗ್ ಅವರ ನಟನೆ ಕೂಡ ಅದ್ಭುತವಾಗಿದೆ. ರಶ್ಮಿಕಾ ಮಂದಣ್ಣ ಅವರ ಪಾತ್ರ ಕೂಡ ಚೆನ್ನಾಗಿದೆ.
ಛಾವಾ ಎಂಬುದು ಸಂಭಾಜಿ ಮಹಾರಾಜರ ಶೌರ್ಯಕ್ಕೆ ಸಲ್ಲಿಸುವ ಗೌರವವಾಗಿದೆ. ಆದರೆ ಭಾವನಾತ್ಮಕ ಸಂಪರ್ಕವನ್ನು ಸೃಷ್ಟಿಸುವಲ್ಲಿ ಈ ಸಿನಿಮಾ ಅನೇಕ ನ್ಯೂನತೆಗಳನ್ನು ಹೊಂದಿದೆ. ಸಿನಿಮಾದಲ್ಲಿ ತೋರಿಸಬೇಕಾದ ನೋವು ಮತ್ತು ತ್ಯಾಗ ಕಾಣುತ್ತಿಲ್ಲ. ಅಲ್ಲದೆ ಸಿನಿಮಾದಲ್ಲಿ ಹಲವು ದೋಷಗಳಿವೆ. ಹೀಗಾಗಿ ಈ ಸಿನಿಮಾಕ್ಕೆ ರೇಟಿಂಗ್ ಕೂಡ 5ಕ್ಕೆ 2.5 ಬಂದಿದೆ. ಮುಂದಿನ ದಿನಗಳಲ್ಲಿ ಸಿನಿಮಾಕ್ಕೆ ಯಾವ ರೀತಿ ರೆಸ್ಪಾನ್ಸ್ ಬರಲಿದೆ ಎಂದು ಗೊತ್ತಾಗಲಿದೆ. ಒಟ್ಟಿನಲ್ಲಿ ಸಿನಿಮಾಕ್ಕೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications