ಡಿವೋರ್ಸ್ ಬೆನ್ನಲ್ಲೇ ಲೈವ್‌ ಬಂದು ಮಹತ್ವದ ಮಾಹಿತಿ ಹಂಚಿಕೊಂಡ ಚಂದನ್‌ ಶೆಟ್ಟಿ

ಬೆಂಗಳೂರು, ಜುಲೈ 18: ಕನ್ನಡದ ಗಾಯಕ ಚಂದನ್ ಶೆಟ್ಟಿ ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ನಿವೇದಿತಾ ಗೌಡ ಅವರೊಂದಿಗಿನ ಚಂದನ್ ಶೆಟ್ಟಿ ದಾಂಪತ್ಯ ಬದುಕು ಅಂತ್ಯ ಕಂಡಿದ್ದು, ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದೀಗ ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್‌ನಲ್ಲಿ ಲೈವ್‌ ಬಂದಿದ್ದು, ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

"ಆ ದೇವರು ನಮ್ಮ ಹತ್ತಿರದಿಂದ ಏನನ್ನೋ ಕಿತ್ತುಕೊಂಡಿದ್ದಾನೆ ಎಂದರೆ ಮುಂದೆ ಒಂದು ದೊಡ್ಡ ವರವನ್ನೇ ಕೊಡುತ್ತಾನೆ ಎಂದು ಹೇಳುತ್ತಾರೆ. ಈಗ ನನಗೆ ಕೊಡುವ ದೇವರುಗಳು ನೀವುಗಳು. ಇಷ್ಟು ವರ್ಷ ನೀವು ನನ್ನ ಕೈ ಬಿಟ್ಟಿಲ್ಲ. ಈಗಲೂ ಕೂಡ ನನ್ನ ಕೈ ಬಿಡೋದಿಲ್ಲ ಅಂತ ನಾನು ನಂಬಿದ್ದೇನೆ. ನಟನಾಗಿ ನನ್ನ ಮೊದಲನೇ ಪ್ರಯತ್ನ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದ ಮೂಲಕ ಮಾಡಿದ್ದೇನೆ.

Chandan Shetty Shared Important Information After The Divorce In Instagram Live

ಜುಲೈ 19ರಂದು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ಮೊದಲ ದಿನವೇ ನನ್ನ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ. ನನಗೆ ದಯವಿಟ್ಟು ಸರ್ಪೋಟ್ ಮಾಡಿ. ಇಷ್ಟು ದಿನ ನಾನು ಸಾಕಷ್ಟು ಏಳು ಬಿಳುಗಳನ್ನು ಅನುಭವಿಸಿದ್ದೇನೆ. ಅದನ್ನು ನೀವು ಕೂಡ ನೋಡಿದ್ದೀರಾ. ಹೊಸದಾಗಿ ಹೇಳುವಂತಹದ್ದು ಏನು ಇಲ್ಲ.

ನನ್ನ ಹಿಂದಿನ ಜೀವನದ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಭವಿಷ್ಯದಲ್ಲಿ ನಾನು ದೊಡ್ಡ ಮಟ್ಟಕ್ಕೆ ಹೋಗಬೇಕು ಅಂತ ಕನಸ್ಸನ್ನು ಕಂಡಿದ್ದೇನೆ. ಹೀಗಾಗಿ ನೀವೆಲ್ಲಾ ನನಗೆ ದಯವಿಟ್ಟು ಸರ್ಪೋಟ್ ಮಾಡಬೇಕು. ದಯವಿಟ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ನೋಡಿ. ಜುಲೈ 19ರಂದೇ ಸಿನಿಮಾ ನೋಡಿ. ಮುಂದಿನವಾರ ನೋಡಿದಾಯ್ತು ಅಂತಾ ಅಂದುಕೊಳ್ಳಬೇಡಿ. ಯಾಕೆಂದರೆ ಮೊದಲ ದಿನ ಒಳ್ಳೆ ಪ್ರತಿಕ್ರಿಯೆ ಬರಲಿಲ್ಲ ಎಂದರೆ ಥಿಯೇಟರ್‌ ಒಂದೊಂದೇ ಡಿಲೀಟ್‌ ಆಗುತ್ತದೆ.

ದಯವಿಟ್ಟು ಸಿನಿಮಾ ನೋಡಿ. ನೀವು ನನ್ನ ಕೈ ಬಿಡಲ್ಲ ಎಂದುಕೊಂಡಿದ್ದೇನೆ. ಥ್ಯಾಂಕ್ಯೂ ಸೋ ಮಚ್‌. ಜುಲೈ 19ರಂದು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ನೋಡಿ ನಮ್ಮ ಚಿತ್ರ ತಂಡಕ್ಕೆ ಆಶೀರ್ವಾದ ಮಾಡಿ. ಈ ಸಿನಿಮಾದಲ್ಲಿ ಒಂದು ಸ್ಪೆಷಲ್‌ ರೋಲ್‌ ಮಾಡಿದ್ದೇನೆ. ನನ್ನ ಸಹ ನಟರು ಕೂಡ ಚೆನ್ನಾಗಿ ನಟಿಸಿದ್ದಾರೆ. ಇಡೀ ಚಿತ್ರತಂಡ ತುಂಬಾ ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಸಿನಿಮಾನ ಚಿತ್ರಮಂದಿರದಲ್ಲಿ ನೋಡಿ ಒಳ್ಳೆ ರಿವ್ಯೂ ಕೊಡಿ. ಸಿನಿಮಾದಲ್ಲಿ ತಪ್ಪಿದ್ದರೆ ತಿಳಿಸಿ. ಮುಂದಿನ ಸಿನಿಮಾದಲ್ಲಿ ತಿದ್ದಿಕೊಂಡು ಒಳ್ಳೆಯ ನಟನಾಗುತ್ತೇನೆ. ಪಾಸಿಟಿವ್‌-ನೆಗೆಟಿವ್‌ ಏನೇ ಇದ್ದರೂ ಹೇಳಿ ಸ್ವೀಕರಿಸುತ್ತೇನೆ" ಎಂದು ಚಂದನ್‌ ಶೆಟ್ಟಿ ಮನವಿ ಮಾಡಿದ್ದಾರೆ.

Chandan Shetty Shared Important Information After The Divorce In Instagram Live

ಚಂದನ್ ಶೆಟ್ಟಿ, ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್ ಅಭಿನಯದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಜುಲೈ 19ರಂದು ತೆರೆಕಾಣಲಿದೆ. ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಂದನ್ ಶೆಟ್ಟಿ ನಟನಾಗಿ ಹೊಸ ಜರ್ನಿ ಆರಂಭಿಸಿದ್ದಾರೆ. ಹೀಗಾಗಿ ಎಲ್ಲರ ಬೆಂಬಲ ಕೋರಿ ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+