ಯಾರ ಜೊತೆಯೂ ಹಿಂಸೆಯಿಂದ ಇರಬಾರದು, ಬ್ಯೂಟಿನೇ ಮುಖ್ಯ ಅಲ್ಲ: ನಿವೇದಿತಾ ಬಗ್ಗೆ ಚಂದನ್‌ ಶೆಟ್ಟಿ ಹೇಳಿದ್ದೇನು?

ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದ ರ‍್ಯಾಪರ್ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಳಿಕ ಅದ್ಧೂರಿಯಾರಿ ಮದುವೆಯಾಗುವ ಮೂಲಕ ಸರ್‌ಪ್ರೈಸ್‌ ನೀಡಿದ್ದರು. ಕೆಲ ತಿಂಗಳ ಹಿಂದಷ್ಟೇ ಡಿವೋರ್ಸ್‌ ಪಡೆದು ಶಾಕ್‌ ಕೊಟ್ಟಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ಪಡೆದಿದ್ದಾಗಿ ಸ್ಪಷ್ಟನೆಯೂ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಈ ನಿರ್ಧಾರ ಎಂದು ಹೇಳಿರಲಿಲ್ಲ. ಇತ್ತೀಚಿನ ಸಂದರ್ಶನದಲ್ಲಿ ಚಂದನ್‌ ಈ ವಿಚಾರದ ಬಗ್ಗೆ ಮತ್ತೆ ಮೌನ ಮುರಿದಿದ್ದು, ಯಾರ ಜೊತೆಯಲ್ಲೂ ಹಿಂಸೆಯಿಂದ ಇರಬಾರದು ಎಂದು ಹೇಳಿಕೊಂಡಿದ್ದಾರೆ.

'ಡಿವೋರ್ಸ್‌ನಿಂದ ಒಂದು ಪಾಠ ಕಲಿತೆ. ಎಲ್ಲ ಕಳೆದುಕೊಂಡು ಲೈಫಲ್ಲಿ ಏನೂ ಇಲ್ಲ ಎನ್ನುವ ಸಮಯದಲ್ಲಿ ಅವರಿಂದ ನನಗೆ ಸ್ವಲ್ಪ ಪ್ರೀತಿ ಸಿಕ್ಕಿತ್ತು. ಹಾಗಾಗಿ ಅವರ ಹಿಂದೆ ಹೋದೆ. ಈಗ ನಮ್ಮನ್ನ ಯಾರು ಇಷ್ಟ ಪಡ್ತಾರೋ ಅವರಿಗೆ ನಾವು ಆದ್ಯತೆ ಕೊಡಬೇಕು ಅನಿಸುತ್ತೆ. ನಾನು ನಿವೇದಿತಾ ನಾಲ್ಕು ವರ್ಷ ಒಟ್ಟಿಗೆ ಇದ್ವಿ. ಇಬ್ಬರೂ ತುಂಬಾ ಇಷ್ಟಪಟ್ಟು ಮದುವೆ ಆಗಿದ್ದು, ನಾನು ಅವರನ್ನ ಎಷ್ಟು ಪ್ರೀತಿ ಮಾಡುತ್ತಿದ್ದೆ ಎಂದು ಪ್ರಪಂಚಕ್ಕೆ ತೋರಿಸಿದ್ದೆ. ಆದರೆ ಪ್ರೀತಿ ಕುರುಡು ಅಂತಾರಲ್ಲ ಹಾಗೆ ಆಯ್ತು' ಎಂದು ಚಂದನ್‌ ತಮ್ಮ ಡಿವೋರ್ಸ್‌ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ.

chandan-shetty-on-divorce-with-niveditha-gowda-no-one-should-live-with-violence

'ಲವ್‌ ಈಸ್‌ ಬ್ಲೈಂಡ್‌ ಅನ್ನೋ ಹಾಗೆ ನಾನು ಕೂಡ ಬ್ಲ್ಯಾಂಕ್‌ ಆಗೋದೆ. ನನಗೆ ಆ ಸಮಯದಲ್ಲಿ ಬೇರೇನೂ ಗೊತ್ತಾಗುತ್ತಿರಲಿಲ್ಲ. ಆ ಸಮಯಕ್ಕೆ ಅದೇ ಸರಿ ಅಂದುಕೊಳ್ಳುತ್ತಿದ್ದೆ. ನಾಲ್ಕು ವರ್ಷಗಳ ಕಾಲ ಇದೇ ನಡೆಯಿತು. ಆ ಮೇಲೆ ಅದು ವರ್ಕ್‌ ಆಗಲಿಲ್ಲ. ಬಿಗ್‌ಬಾಸ್‌ ಮುಗಿದ ಮೇಲೆ ನಮ್ಮಿಬ್ಬರ ಜೋಡಿ ಕ್ಯೂಟ್‌ ಎಂದು ಹಲವರು ಹೇಳುತ್ತಿದ್ದರು. ಜನ ನಮ್ಮನ್ನ ಇಷ್ಟು ಇಷ್ಟ ಪಡುತ್ತಿದ್ದಾರೆ ಅಂತ ಆ ನಿರ್ಧಾರ ತೆಗೆದುಕೊಂಡೆ. ನಂತರ ಮದುವೆಯೂ ಆಯ್ತು' ಎಂದಿದ್ದಾರೆ ಚಂದನ್.

'ವ್ಯಕ್ತಿಗಿಂತ ವ್ಯಕ್ತಿತ್ವ ಇಷ್ಟ ಆಗಬೇಕು'

'ಇನ್ನು ಬ್ಯೂಟಿ ಮುಖ್ಯ ಅಲ್ಲ, ಒಳಗಿನ ಸೌಂದರ್ಯ ಮುಖ್ಯವಾಗುತ್ತೆ. ಅದಕ್ಕಿಂತ ಮುಖ್ಯವಾಗಿ ಮನಸ್ಸನ್ನ ಪ್ರೀತಿಸಬೇಕು. ಒಬ್ಬರು ವ್ಯಕ್ತಿಗಿಂತ ಅವರ ವ್ಯಕ್ತಿತ್ವ ಇಷ್ಟವಾಗಬೇಕು. ಹಾಗಾಗಿ ಲುಕ್ಸ್‌ ಎಲ್ಲ ಮ್ಯಾಟರ್‌ ಆಗೋದಿಲ್ಲ. ನಮಗೆಲ್ಲ ಇರೋದು ಒಂದೇ ಒಂದು ಜೀವನ. ಒಂದೇ ಹುಟ್ಟು, ಒಂದೇ ಸಾವು. ಇದರ ನಡುವೆ ನಾವು ಯಾರೊಂದಿಗೂ ಹಿಂಸೆಯಿಂದ ಇರಬಾರದು. ಬೇರೆಯವರನ್ನ ಕಂಟ್ರೋಲ್‌ ಮಾಡೋಕೆ ನಾವ್ಯಾರು?' ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಮ್ಮ ಡಿವೋರ್ಸ್‌ ಆದ ಮೇಲೆ ಎಲ್ಲರೂ ಶಾಕ್‌ನಲ್ಲಿದ್ದರು. ನಮ್ಮ ಸೊಸೈಟಿಯಲ್ಲಿ ಡಿವೋರ್ಸ್‌ ಆಗಿದೆ ಅಂದ್ರೆ ನೆಗೆಟಿವ್‌ ಆಗಿ ನೋಡ್ತಾರೆ. ಆದರೆ ಅದು ನಮ್ಮಿಬ್ಬರಿಗೆ ತುಂಬಾ ಪಾಸಿಟಿವ್‌ ವಿಚಾರವಾಗಿತ್ತು. ಈಗಿನ ಜನರೇಷನ್‌ ಕೂಡ ಹಾಗೆ ಬದಲಾಗ್ತಿದೆ. ಈಗಿನ ಸಮಾಜದಲ್ಲಿ ಗಂಡು ಹೆಣ್ಣು ಸಮಾನರಾಗಿದ್ದಾರೆ' ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. ಸದ್ಯ ಚಂದನ್‌ ಕ್ರಿಸ್‌ ಗೇಲ್‌ ಜೊತೆ ಸೇರಿ ಹೊಸ ಹಾಡು ತರುವ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+