ನನ್ನ ಪಾಸ್ಟ್‌ ನನ್ನನ್ನ ಬಿಡುತ್ತಿಲ್ಲ! ಚಂದನ್ ಶೆಟ್ಟಿ ಮೈಮಾಟ ಸಾಂಗ್‌ಗೆ ನಿವೇದಿತಾ ಗೌಡ ರಿಯಾಕ್ಷನ್‌

ಸ್ಯಾಂಡಲ್‌ವುಡ್‌ನ ಜನಪ್ರಿಯ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ವಿಚ್ಛೇದನದ ಬಳಿಕ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಂದನ್ ಶೆಟ್ಟಿ ಅವರ ಬಹುನಿರೀಕ್ಷಿತ ಹೊಸ ಆಲ್ಬಂ ಸಾಂಗ್ 'ಮೈಮಾಟ' ಅಕ್ಟೋಬರ್ 25 ರಂದು ಬಿಡುಗಡೆಯಾಗಿದೆ.

ಇದೊಂದು ಪಕ್ಕಾ ಹಾರ್ಟ್ ಬ್ರೇಕಿಂಗ್ ಸಾಂಗ್ ಆಗಿದ್ದು, ಇದು ಪರೋಕ್ಷವಾಗಿ ನಿವೇದಿತಾ ಗೌಡ ಅವರನ್ನ ಕುರಿತೇ ಬರೆದ ಹಾಡು ಎಂಬ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ನಿವೇದಿತಾ ಗೌಡ ಅವರು ಇಂದು (ಅಕ್ಟೋಬರ್ 27) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಾಲುಗಳು ಭಾರೀ ಕುತೂಹಲ ಕೆರಳಿಸಿವೆ.

Chandan Shetty Maimata Song Vs Niveditha Gowda IG Post Is The Viral Heartbreak Anthem About Her

ನಿವೇದಿತಾ ಗೌಡ ಇನ್‌ಸ್ಟಾ ಪೋಸ್ಟ್‌ನಲ್ಲಿ ಏನಿದೆ?

ಚಂದನ್ ಹಾಡು ರಿಲೀಸ್ ಆದ ಬೆನ್ನಲ್ಲೇ ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾರ್ಮಿಕವಾಗಿ ಒಂದು ಪೋಸ್ಟ್‌ನ್ನ ಹಾಕಿದ್ದಾರೆ. "ಅದ್ಭುತ ಸ್ನೇಹಿತರ ಜೊತೆಗಿರುವ ಮಹತ್ವಾಕಾಂಕ್ಷೆಯ ಹುಡುಗಿಯ ಲವ್ ಲೈಫ್ ದುರದೃಷ್ಟಕರವಾಗಿದ್ದರೆ ಅದು 'ರಾಮ್-ಕಾಮ್' ಅಂದರೆ ರೊಮ್ಯಾಂಟಿಕ್ ಕಾಮಿಡಿ ಎಂದು ಎಲ್ಲೋ ಓದಿದ್ದೆ. ಆದರೆ, ನನ್ನ ಜೀವನ ಒಂದು ಹಾರರ್ ಸ್ಟೋರಿಯಾಗಿದೆ. ನನ್ನ ಪಾಸ್ಟ್ ನನ್ನನ್ನ ಸುಮ್ಮನೆ ಬಿಡುತ್ತಿಲ್ಲ" ಎಂದು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಚ್ಛೇದನದ ಬಳಿಕವೂ ಹಳೆಯ ವಿಚಾರಗಳು ಪದೇ ಪದೇ ಮುನ್ನೆಲೆಗೆ ಬರುತ್ತಿರುವುದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದಂತಿದೆ. ಇದು ಚಂದನ್ ಸಾಂಗ್‌ಗೆ ನೀಡಿದ ಪರೋಕ್ಷ ಟಾಂಗ್ ಎಂದೇ ನೆಟ್ಟಿಗರು ಹೇಳುತ್ತಿದ್ದಾರೆ.

ಮೈಮಾಟ ಆಲ್ಬಂ ಸಾಂಗ್ ಸಾಲುಗಳು ಹೇಗಿವೆ?

3 ನಿಮಿಷ 14 ಸೆಕೆಂಡ್‌ನ ಈ ಹಾಡು ಸಂಪೂರ್ಣವಾಗಿ ಪ್ರೀತಿಯಲ್ಲಿ ಬಿದ್ದ ಯುವಕನ ಹಾರ್ಟ್‌ ಬ್ರೇಕ್‌ ಆದ ಕಥೆಯನ್ನ ಹೇಳುತ್ತದೆ. "ನೀನು ಬರೋ ಮೊದಲು ಸಾಕಷ್ಟು ಹುಡುಗಿಯರು ಇದ್ದರು, ಆದರೆ ನೀನು ನನ್ನ ಹಾರ್ಟ್ ಕಿತ್ತೊಗೆದೆ" ಎಂಬ ಅರ್ಥದ ಸಾಲುಗಳು ಗಮನ ಸೆಳೆಯುತ್ತವೆ.

ಪ್ರೀತಿ ಸತ್ತು ಹೋಯಿತು ಎಂಬುದನ್ನ ಬಿಂಬಿಸಲು, ಚಂದನ್‌ ಈ ಹಾಡನ್ನ ಶ್ರೀರಂಗಪಟ್ಟಣದ 200 ವರ್ಷಗಳಷ್ಟು ಹಳೆಯದಾದ ಸ್ಮಶಾನದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಬ್ರಿಟಿಷರ ಕಾಲದ 300 ಗೋರಿಗಳಿವೆ. ಇದರ ಜೊತೆಗೆ ಗುಜರಿ ಯಾರ್ಡ್‌ನಲ್ಲೂ ಶೂಟಿಂಗ್ ಮಾಡಲಾಗಿದೆ.

ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಹಾಡಿನಲ್ಲಿ ಯಾವ ನಾಯಕಿಯೂ ಇಲ್ಲದಿರುವುದು ವಿಶೇಷ. ಈ ಹಾಡನ್ನು ಚಂದನ್ ಜರ್ಮನಿಯಲ್ಲಿದ್ದಾಗ ಇನ್‌ಸ್ಟಾಗ್ರಾಮ್ ಲೈವ್ ಬಂದು ರಿಲೀಸ್ ಮಾಡಿದ್ದಾರೆ.

ಇದು ನನ್ನ ರಿಯಲ್ ಲೈಫ್ ಕಥೆಯಲ್ಲ: ಚಂದನ್ ಶೆಟ್ಟಿ ಸ್ಪಷ್ಟನೆ

ನ್ಯೂಸ್-18 ಕನ್ನಡ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, "ಇದು ನನ್ನ ಪರ್ಸನಲ್ ಲೈಫ್‌ಗೆ ಕನೆಕ್ಟ್ ಆಗುವ ಹಾಡಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. "ನನಗೆ ಈಗ 37 ವರ್ಷ. ಇಷ್ಟು ವರ್ಷಗಳಲ್ಲಿ ನಾನು ಕೇಳಿದ ಇತರರ ಕಥೆಗಳನ್ನೇ ಇಟ್ಟುಕೊಂಡು ಈ ಸಾಂಗ್ ಮಾಡಿದ್ದೇನೆ. ವೀಕ್ಷಕರಿಗೆ ಇದು ನನ್ನ ಕಥೆಯೇನೋ ಅನಿಸಬಹುದು, ಅದಕ್ಕಾಗಿಯೇ ಹಾಡಿನ ಆರಂಭದಲ್ಲಿ ಡಿಸ್ಕ್ಲೈಮರ್ ಹಾಕಿದ್ದೇನೆ. ನೀನು ಬಿಟ್ಟು ಹೋದ ಜಾಗದಲ್ಲಿ ಈಗ ಕನಸುಗಳೇ ತುಂಬಿವೆ ಎಂದು ಪಾಸಿಟಿವ್ ಆಗಿಯೇ ಈ ಹಾಡನ್ನು ಮುಕ್ತಾಯ ಮಾಡಿದ್ದೇನೆ" ಎಂದು ಹೇಳಿದ್ದಾರೆ.

ಮೈಮಾಟ ಹಾಡಿನ ಬಗ್ಗೆ ನೆಟ್ಟಿಗರ ರಿಯಾಕ್ಷನ್

ಹಾಡನ್ನು ಕೇಳಿದ ಅಭಿಮಾನಿಗಳು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್‌ಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು "ಚಂದನ್ ಅವರೇ, ನೀವು ಎಷ್ಟೇ ಡಿಸ್ಕ್ಲೈಮರ್ ಹಾಕಿದ್ರೂ, ಇದು ನಿವೇದಿತಾ ಗೌಡ ಅವರಿಗೆ ಮಾಡಿದ್ದು ಅಂತ ನಮಗೆ ಗೊತ್ತಾಗುತ್ತೆ. ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಮೋಸ ಹೋದ ಹುಡುಗರ ಪಾಲಿಗೆ ಇದು ಒಂದು ಆಂಥೆಮ್ " ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು "ನಾವೆಲ್ಲರೂ ಬಯಸುತ್ತಿದ್ದ ಓಲ್ಡ್ ಚಂದನ್ ಶೆಟ್ಟಿ ಅಣ್ಣ ನಮಗೆ ಮತ್ತೆ ಸಿಕ್ಕಿದ್ದಾರೆ, ಹಾಡಿನ ಒಂದೊಂದು ಸಾಲು ಬೆಂಕಿಯಾಗಿದೆ" ಎಂದು ಖುಷಿ ಪಟ್ಟಿದ್ದಾರೆ. ಮತ್ತೊಬ್ಬ ಬಳಕೆದಾರರು, "ಮೈಮಾಟ ಅಂದ್ರೆ ಬರೀ ಮಾತಲ್ಲ, ಅದು ಪ್ರೀತಿಯಲ್ಲಿ ಬಿದ್ದ ಯುವಕರ ಎದೆಯೊಳಗಿನ ಕಿಚ್ಚು!" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಚಂದನ್ ಶೆಟ್ಟಿ ಇದು ತಮ್ಮ ಕಥೆಯಲ್ಲ ಎಂದು ಡಿಸ್ಕ್ಲೈಮರ್ ಹಾಕಿದರೂ, ಆ ಸಾಲುಗಳು ಅವರ ನಿಜ ಜೀವನಕ್ಕೆ ತೀರಾ ಹತ್ತಿರವಾಗಿವೆ ಎಂದು ನೆಟ್ಟಿಗರು ನಂಬಿದ್ದಾರೆ. ಇತ್ತ ನಿವೇದಿತಾ ಅವರ ಇನ್‌ಸ್ಟಾ ಪೋಸ್ಟ್ ಈ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+