Niveditha Gowda: ಇದಕ್ಕೇನಾ ನಿವೇದಿತಾ ಗೌಡ ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟಿದ್ದು ಅಂತಿದ್ದಾರೆ ಫ್ಯಾನ್ಸ್!
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಡಿವೋರ್ಸ್ ಬಳಿಕ ಚಂದನ್ ಗೌಡ ತಮ್ಮ ಸಿನಿ ಬದುಕಿನತ್ತ ಗಮನ ಹರಿಸಿದ್ದಾರೆ. ಅವರ ಹೊಸ ಸಿನಿಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಮತ್ತೊಂದು ಕಡೆ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದು ಹೊಸ ಹೊಸ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಿವೇದಿತಾ ಗೌಡ ಹಂಚಿಕೊಂಡಿರುವ ಹೊಸ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಬಗೆ ಬಗೆಯ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಇಂಗ್ಲಿಷ್ ಹಾಡಿನ ಹಿನ್ನಲೆ ಸಂಗೀತವಿರುವ ವಿಡಿಯೋದಲ್ಲಿ ನಿವೇದಿತಾ ಗೌಡ ಕಪ್ಪು ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಒಂದೇ ದಿನಕ್ಕೆ ಈ ವಿಡಿಯೋ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 60,000 ಮಂದಿ ಲೈಕ್ ಮಾಡಿದ್ದಾರೆ. ಇನ್ನು ಕೆಲ ಚಂದನ್ ಶೆಟ್ಟಿ ಅಭಿಮಾನಿಗಳು ಮಾತ್ರ ವಿಡಿಯೋ ನೋಡಿ ಸಿಟ್ಟಾಗಿದ್ದು ಕಾಮೆಂಟ್ ಮೂಲಕವೇ ಚಂದನವನದ ಗೊಂಬೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಡಿವೋರ್ಸ್ ಕೊಟ್ಟಿದ್ದು ಇದಕ್ಕೇನಾ?
ಕೆಲವು ಅಭಿಮಾನಿಗಳಂತೂ ಅತಿರೇಕದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇಂತಹ ವಿಡಿಯೋ ಮಾಡುವುದಕ್ಕೇನಾ ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಈಗಲಾದರೂ ಬುದ್ದಿ ಕಲಿತು ಮತ್ತೆ ಚಂದನ್ ಶೆಟ್ಟಿ ಬಾಳಿ ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಇನ್ನೂ ಕೆಲವರು ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ಟು ನೋವಿನಲ್ಲಿದ್ದರೆ ಇವರು ಮಾತ್ರ ರೀಲ್ಸ್ ಮಾಡಿಕೊಂಡು ಹಾಯಾಗಿದ್ದಾರೆ ಎಂದಿದ್ದಾರೆ.
ಯಾವ ಕೆಟ್ಟ ಕಾಮೆಂಟ್ಸ್‌ಗೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಗೌಡ, ತಮ್ಮ ಕೆಲಸದತ್ತ ಗಮನ ಹರಿಸಿದ್ದಾರೆ. ವಿವಿಧ ಬ್ರಾಂಡ್‌ಗಳ ಪ್ರಮೋಷನ್ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಹಲವು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಮತ್ತೊಂದು ಕಡೆ ಚಂದನ್ ಶೆಟ್ಟಿ ತಮ್ಮ ಕೆರಿಯರ್ ನತ್ತ ಗಮನ ಹರಿಸಿದ್ದಾರೆ. ರ್‍ಯಾಪ್ ಸಾಂಗ್ ಮೂಲಕ ಭಾರಿ ಹೆಸರು ಮಾಡಿದ ಚಂದನ್ ಶೆಟ್ಟಿ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು, ಮನೆಯವರ ಒಪ್ಪಿಗೆ ಪಡೆದೇ ಮದುವೆಯಾಗಿದ್ದ ಈ ಜೋಡಿ ಬಳಿಕ ಡಿವೋರ್ಸ್ ಪಡೆದುಕೊಂಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.












Click it and Unblock the Notifications