Chandan Shetty: ಕಾಟನ್ ಕ್ಯಾಂಡಿ ಕದ್ದ ಹಾಡು: ಚಂದನ್ ಶೆಟ್ಟಿ ಸ್ಪಷ್ಟನೆ ಏನು?
Chandan Shetty: ಕನ್ನಡದ ರ್‍ಯಾಪ್ ಸಾಂಗ್‌ಗಳ ಮೂಲಕ ಜನಮನ್ನಣೆ ಗಳಿಸಿರುವ ಚಂದನ್ ಅವರು ಇತ್ತೀಚೆಗಷ್ಟೇ ಕಾಟನ್ ಕ್ಯಾಂಡಿ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದರು. ಇದು ಈಗಲೂ ಸಹ ಸಖತ್ ಸೌಂಡ್ ಮಾಡುತ್ತಿದ್ದು, ಇದರ ನಡುವೆಯೇ ಈ ಹಾಡಿನ ತುಣುಗಳನ್ನು ಕದಿಯಲಾಗಿದೆ ಎನ್ನುವ ಆರೋಪ ಬಂದಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಚಂದನ್ ಶೆಟ್ಟಿಯವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಚಂದನ್ ಸುಶ್ಮಿತಾ ಗೋಪಿನಾಥ್ ಜೊತೆ ಕಾಟನ್ ಕ್ಯಾಂಡಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ. ಅಲ್ಲದೆ, ಬಾರ್, ಪಬ್ ಸೇರಿದಂತೆ ಅನೇಕ ಡಿಜೆ ಪಾರ್ಟಿ ಕಾರ್ಯಕ್ರಗಳಲ್ಲೂ ಕೂಡ ಇದರದ್ದೇ ಸದ್ದು ಜೋರಾಗಿದೆ. ಈ ನಡುವೆಯೇ ಈ ಹಾಡಿನ ತುಣುಕನ್ನು ಕದಿಯಲಾಗಿದೆ ಎಂಬ ಆರೋಪ ಇತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿಯವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು "ನಾನು ಯಾವುದೇ ಹಾಡು, ಹಾಡಿನ ಸಾಲನ್ನು ಕದ್ದಿಲ್ಲ. ಅಂತಹ ಪರಿಸ್ಥಿತಿ ನನಗೆ ಬಂದಿಲ್ಲ," ಎಂದು ಹೇಳುವ ಮೂಲಕ ಗಾಯಕ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, "ಈ ಕುರಿತು ಕಾನೂನು ಹೋರಾಟಕ್ಕೂ ನಾನು ಸಿದ್ಧನಿದ್ದೇನೆ. ನಾನು ತುಂಬಾ ಕಷ್ಟಪಟ್ಟು ಹಾಡು ಮಾಡಿದ್ದೇನೆಂದು," ತಿಳಿಸಿದ್ದಾರೆ.
ಇನ್ನು ಮನುಷ್ಯರ ಜೀವನದಲ್ಲಿ ಒಂದು ಕಳೆದುಕೊಂಡರೆ ಮತ್ತೊಂದು ಬಾಗಿಲು ತೆರೆಯುತ್ತದೆ ಎನ್ನುವ ಮಾತಿದೆ. ಅದರಂತೆಯೇ ಇದೀಗ ಚಂದನ ಶೆಟ್ಟಿ ಅವರು ಹೊಸ ವಿಡಿಯೋ ಸಾಂಗ್ ಕಾಟನ್ ಕ್ಯಾಂಡಿ ಮೂಲಕ ಹೊಸ ಸಾಧನೆಯತ್ತ ಹೆಜ್ಜೆ ಇರಿಸಿದ್ದಾರೆ. ಇದು ಸದ್ಯ ಸಖತ್ ಟ್ರೆಂಡ್ ಸೃಷ್ಟಿಸಿದೆ. ನಿವೇದಿತಾ ಗೌಡ ಅವರಿಗೆ ದಿವೋರ್ಸ್ ನೀಡಿದ ಬಳಿಕ ಗಾಯಕ ಚಂದನ್ ಶೆಟ್ಟಿ ಅವರು ಹೊಸ ಸಾಂಗ್‌ಗಳನ್ನು ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ.
ಈಗಾಗಲೇ ಇವರು ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಇದೀಗ ಸುಶ್ಮಿತಾ ಗೋಪಿನಾಥ್ ಜೊತೆ ಕಾಟನ್ ಕ್ಯಾಂಡಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ. ಕನ್ನಡದ ರ್‍ಯಾಪ್ ಸಾಂಗ್‌ಗಳ ಮೂಲಕ ಗಮನ ಸೆಳೆದಿರುವ ಚಂದನ್ ಅವರು, ಈಗಾಗಲೇ ಹಲವಾರು ಹಿಟ್ ಸಾಂಗ್‌ಗಳನ್ನು ಕೊಟ್ಟಿದ್ದಾರೆ.
ಅದರಲ್ಲೂ ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದಿದೆ ಎನ್ನುವ 3 ಪೆಗ್ ಹಾಡು, ಟಕಿಲಾ, ಪಕ್ಕಾ ಚಾಕೋಲೆಟ್ ಗರ್ಲ್ ಹಾಡುಗಳು ಇಂದಿಗೂ ಫೇಮಸ್ ಆಗಿವೆ. ಈ ಹಾಡುಗಳನ್ನು ಹೆಚ್ಚಾಗಿ ಈಗಲೂ ಪಬ್, ರೆಸಾರ್ಟ್ ಡಿಜೆ ಪಾರ್ಟಿ ವೇಳೆ ಹಾಕುತ್ತಾರೆ. ಅಲ್ಲದೆ, ಚಿಕ್ಕ ಮಕ್ಕಳಿಂದ ಹಿಡಿದು ಯುವಜನರ ಬಾಯಲ್ಲೂ ಈ ಹಾಡುಗಳದ್ದೇ ಸದ್ದು. ಅಷ್ಟರ ಮಟ್ಟಿಗೆ ಈ ಹಾಡುಗಳು ಫೇಮಸ್ ಆಗಿವೆ. ಇದೀಗ ಕಾಟನ್ ಕ್ಯಾಂಡಿ ಹಾಡಿನ ವಿಡಿಯೋ ಜೋರಾಗಿ ಸದ್ದು ಮಾಡುತ್ತಿದೆ.
ಕಾಟನ್ ಕ್ಯಾಂಡಿ ವಿಡಿಯೋದಲ್ಲಿ ಗಾಯಕ ಚಂದನ್ ಶೆಟ್ಟಿ ಜೊತೆ ಸುಶ್ಮಿತಾ ಗೋಪಿನಾಥ್ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಡಿಸೆಂಬರ್ 27ರಂದು ಈ ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗುದೆ. ಇದನ್ನು ಚಂದನ್ ಶೆಟ್ಟಿಯವರೇ ನಿರ್ದೇಶನ ಮಾಡಿರುವುದು ಇನ್ನೂ ವಿಶೇಷ. ಈಗಾಗಲೇ ಈ ಮ್ಯೂಸಿಕ್ ವಿಡಿಯೋ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿದ್ದರು.
"ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಯಾಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆಯಾಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆ ಕೆಲಸಗಳ ಹಿನ್ನೆಲೆ ಕೊಡಲು ಅಸಾಧ್ಯವಾಗಿತ್ತು. ಇದೀಗ ವಿಡಿಯೋ ಸಾಂಗ್ ಬಿಡುಗಡೆಯಾದ ನಂತರ ನನ್ನ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಬಹುದೆಂಬ ಬಗ್ಗೆ ಕುತೂಹಲ ಇದೆ. ಇದು ಹೊಸ ವರ್ಷಕ್ಕೆ ಗಿಫ್ಟ್" ಎಂದು ಹೇಳಿದ್ದರು.












Click it and Unblock the Notifications