Chandan Shetty: ನಿವೇದಿತಾ ಗೌಡಗೆ ಮತ್ತೊಂದು ಮದುವೆ? ಸೋಷಿಯಲ್ ಮೀಡಿಯಾ ಫೋಟೋ...
ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಮದುವೆ ಸಂಬಂಧ ಮುರಿದು ಹೋಗಿ ಹಲವಾರು ತಿಂಗಳು ಕಳೆದು ಹೋಗಿವೆ. ಚಂದನ್ ಶೆಟ್ಟಿ & ನಿವೇದಿತಾ ಗೌಡ ಜೋಡಿ ಬಿಗ್ ಬಾಸ್ ಮೂಲಕ ಲವ್ ಮಾಡಿ ಮದುವೆ ಆಗಿದ್ದರು, ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡಿ ಸಖತ್ ವೈರಲ್ ಆಗುತ್ತಿದ್ದರು. ಹೀಗಿದ್ದಾಗಲೇ ದಿಢೀರ್ ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಬೇರೆ ಆಗಿ, ದೂರವಾಗಿ ಮದುವೆ ಸಂಬಂಧ ಮುರಿದುಕೊಂಡರು. ಆದರೆ ಈಗ ಒಂದ್ಕಡೆ ಚಂದನ್ ಶೆಟ್ಟಿ 2ನೇ ಮದುವೆ & ನಿವೇದಿತಾ ಗೌಡ 2ನೇ ಮದುವೆ ಬಗ್ಗೆ ಫೋಟೋ...
ಚಂದನ್ ಶೆಟ್ಟಿ & ನಿವೇದಿತಾ ಗೌಡ ದೂರವಾದ ನಂತರ ಭಾರಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು. ಅಲ್ಲದೆ ನಿವೇದಿತಾ ಗೌಡ ಯಾಕೆ ಇಂತಹ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದರು? ಚಂದನ್ ಶೆಟ್ಟಿ ದೂರವಾಗಿದ್ದು ಯಾಕೆ? ಅನ್ನೋ ಬಗ್ಗೆ ಮಾತುಗಳು ಕೇಳಿಬಂದ ನಂತರ ಈ ಇಬ್ಬರೂ ಜಂಟಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿ, ಸ್ಪಷ್ಟನೆ ಕೊಟ್ಟರು. ಆ ನಂತರವೇ ಪರಿಸ್ಥಿತಿ ಒಂದಷ್ಟು ತಣ್ಣಗೆ ಆಗಿತ್ತು. ಆದರೆ ಇದೀಗ ಮತ್ತೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ 2ನೇ ಮದುವೆ ಬಗ್ಗೆ ದೊಡ್ಡ ಚರ್ಚೆ ಎದ್ದಿರುವಾಗಲೇ, ನಿವೇದಿತಾ ಗೌಡ ಫೋಟೋ ಫುಲ್ ವೈರಲ್ ಆಗುತ್ತಿದೆ!

ನಿವೇದಿತಾ ಗೌಡಗೆ 2ನೇ ಮದುವೆ?
ಅಂದಹಾಗೆ ಇದೀಗ ವೈರಲ್ ಆಗುತ್ತಿರುವ ಫೋಟೋ ಇಟ್ಟುಕೊಂಡು ಕೆಲವರು ಟ್ರೋಲ್‌ನ ಮಾಡುತ್ತಿದ್ದರೆ, ಮತ್ತೆ ಕೆಲವರು ಚಂದನ್ ಶೆಟ್ಟಿ ಅವರಿಗೆ ಡಿವೋರ್ಸ್ ಕೊಟ್ಟು ನಿವೇದಿತಾ ಗೌಡ 2ನೇ ಮದುವೆ ಆಗುತ್ತಿದ್ದಾರೆ ಎಂಬ ಚರ್ಚೆ ನಡೆಸುತ್ತಿದ್ದಾರೆ. ಈ ಬಗ್ಗೆ ನಿವೇದಿತಾ ಗೌಡ ಅಭಿಮಾನಿಗಳು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ಫೋಟೋ ಸತ್ಯಾಂಶ ಏನು? ಅನ್ನೋದನ್ನ ಮೊದಲು ತಿಳಿದಿಕೊಳ್ಳಿ ಅಂತಾ ಬುದ್ಧಿ ಹೇಳುತ್ತಿದ್ದಾರೆ.
ಗರಂ ಆಗಿದ್ದರು ನಿವೇದಿತಾ ಗೌಡ
ನಿವೇದಿತಾ ಗೌಡ ಅವರ ಮುಂದಿನ ಸಿನಿಮಾದ ಪೋಸ್ಟರ್ ಒಂದು ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿ ನಿವೇದಿತಾ ಗೌಡ ಸಖತ್ ರೊಮ್ಯಾಂಟಿಕ್ ಆಗಿ ನಟನೆ ಮಾಡಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಇದೇ ಫೋಟೋನ ಬೇರೆ ರೀತಿಯಾಗಿ ಬಿಂಬಿಸುವ ಕೆಲಸ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಈಗಾಗಲೇ ನಿವೇದಿತಾ ಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಮಾತನಾಡುವವರಿಗೆ ಎಚ್ಚರಿಕೆ ನೀಡಿದ್ದೂ ಇದೆ, ಇಷ್ಟಾದರೂ ಕೆಲವರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ.
ಒಟ್ನಲ್ಲಿ ನಿವೇದಿತಾ ಗೌಡ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಉದ್ದೇಶ ಇಟ್ಟುಕೊಂಡು ಮಾಡುತ್ತಿರುವ ಕೃತ್ಯ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸದ್ಯ ನಿವೇದಿತಾ ಗೌಡ ಅಭಿಮಾನಿಗಳು ಕೂಡ ಬೇಸರ ಹೊರ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇಲ್ಲಿಗೇ ನಿಲ್ಲುತ್ತಾ? ಅಥವಾ ನಿವೇದಿತಾ ಗೌಡ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಸೋಷಿಯಲ್ ಮೀಡಿಯಾದ ಕೆಲವರ ವಿರುದ್ಧ ಕ್ರಮವನ್ನ ಕೈಗೊಳ್ಳುತ್ತಾರಾ? ಅನ್ನೋದನ್ನ ಕಾದು ನೋಡಬೇಕು.
ನಿವೇದಿತಾ ಗೌಡ ಸದಾ ಟ್ರೆಂಡ್!
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಸಂಬಂಧ ಮುರಿದು ಬಿದ್ದು ಹಲವಾರು ತಿಂಗಳೇ ಕಳೆದರೂ, ಜನರು ಮಾತ್ರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯ ಮ್ಯಾಟರ್ ಬಿಟ್ಟುಕೊಡಲು ಸಿದ್ಧವಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಸಣ್ಣ ಸಣ್ಣ ಸುದ್ದಿಗೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಟ್ರೆಂಡ್ ಆಗುತ್ತಿದ್ದಾರೆ. ಈಗಲೂ ಅಷ್ಟೇ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ 2ನೇ ಮದುವೆ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ.












Click it and Unblock the Notifications