Chandan Shetty: ಚಂದನ್ ಶೆಟ್ಟಿ ಮಾಜಿ ಪತ್ನಿ 2ನೇ ಮದುವೆಗೆ ಸಿದ್ಧತೆ? ಸೀರೆಯಲ್ಲಿ ಕಂಗೊಳಿಸಿದ ನಿವೇದಿತಾ ಗೌಡಗೆ ನೆಟ್ಟಿಗರು..
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಸಂಬಂಧ ಮುರಿದು ಬಿದ್ದು ಹಲವಾರು ತಿಂಗಳೇ ಕಳೆದರೂ, ಜನರು ಮಾತ್ರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯ ಮ್ಯಾಟರ್ ಬಿಟ್ಟುಕೊಡಲು ಸಿದ್ಧವಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಸಣ್ಣ ಸಣ್ಣ ಸುದ್ದಿಗೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಟ್ರೆಂಡ್ ಆಗುತ್ತಿದ್ದಾರೆ. ಈಗಲೂ ಅಷ್ಟೇ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ 2ನೇ ಮದುವೆ ಬಗ್ಗೆ ಸಂಚಲನ ಸೃಷ್ಟಿಸುವ ಸುದ್ದಿ ಹರಿದಾಡುತ್ತಿದೆ.
ಅಷ್ಟಕ್ಕೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಮದುವೆ ಕೂಡ ಆಗಿದ್ದರು. ರಿಯಾಲಿಟಿ ಶೋನಿಂದ ಪ್ರೀತಿ ಶುರುವಾಗಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಯಲ್ಲೇ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಆಗ ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಆಗ ಸರ್ಕಾರ ಇವರ ಮೇಲೆ ನಿಷೇಧ ಕೂಡ ಹೇರಿತ್ತು. ಈ ರೀತಿ ವಿವಾದ ಮಾಡಿಕೊಂಡಿದ್ದ ಚಂದನ್ ಶೆಟ್ಟಿ ನಂತರ ತಮ್ಮ ಪತ್ನಿ ನಿವೇದಿತಾಗೆ ಡಿವೋರ್ಸ್ ಕೊಟ್ಟು ಸದ್ದು ಮಾಡಿದ್ದರು. ಈಗ ನೋಡಿದರೆ ನಿವೇದಿತಾಗೆ ಎರಡನೇ ಮದುವೆ ಆಗುತ್ತಿದೆ ಅಂತಿದ್ದಾರೆ ಜನ!

ನೀಲಿ ಕಲರ್ ಸೀರೆ ಉಟ್ಟು...
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಏನೇ ಮಾಡಿದರೂ ಟ್ರೋಲ್ ಆಗುತ್ತಿದೆ. ಯಾಕಂದ್ರೆ ಇದು ಸೋಷಿಯಲ್ ಮೀಡಿಯಾ ಜಮಾನ, ಹೀಗಾಗಿ ಇಲ್ಲಿ ಜನಗಳು ಕೂಡ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿ ಬದುಕುತ್ತಾರೆ. ಅದೇ ರೀತಿ ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ವಿಚಾರ ಕೂಡ ಚರ್ಚೆ ಆಗುತ್ತಿದೆ. ನೀಲಿ ಕಲರ್ ಸೀರೆ ಉಟ್ಟು ನಿವೇದಿತಾ ಗೌಡ ಈಗ ಮಿರ ಮಿರ ಮಿಂಚಿದ್ದಾರೆ. ಆದರೆ ಇದನ್ನೇ ನೋಡಿದ ನೆಟ್ಟಿಗರು ಮತ್ತೊಂದು ಮದುವೆಗಾಗಿ ತಯಾರಿ ನಡೆಸುತ್ತಿದ್ದೀರಾ? ಅಂತಾ ನಿವೇದಿತಾ ಗೌಡಗೆ ಪ್ರಶ್ನೆ ಕೇಳುತ್ತಿದ್ದಾರೆ.
ಆದರೆ ನಿವೇದಿತಾ ಗೌಡ ನೀಲಿ ಸೀರೆ ಉಟ್ಟಿದ್ದು ಖಾಸಗಿ ಜಾಹೀರಾತು ಒಂದಕ್ಕೆ. ಹೀಗೆ ಕಡು ನೀಲಿ ಬಣ್ಣದ ಸೀರೆ ಉಟ್ಟು ಆಭರಣ ಅಂಗಡಿಗೆ ಜಾಹೀರಾತು ನೀಡಿದ್ದಾರೆ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ. ಆದರೂ ಈ ಬಗ್ಗೆ ತಪ್ಪು ತಪ್ಪು ಮಾಹಿತಿ ನೀಡುತ್ತಿದ್ದಾರೆ ಕೆಲವರು. ಈ ಬಗ್ಗೆ ನಿವೇದಿತಾ ಗೌಡ ಬೆಂಬಲಿಗರು & ಅಭಿಮಾನಿಗಳು ಬೇಸರ ಹೊರ ಹಾಕಿ ಸೂಕ್ತ ಪ್ರತ್ಯುತ್ತರ ನೀಡುತ್ತಿದ್ದಾರೆ.
ತಂಗಿ ಅಂತಾ ಕರೆದಿದ್ದರು ಚಂದನ್!
ಬಿಗ್‌ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಸ್ಪರ್ಧೆ ಮಾಡಿದ್ದರು. ಈ ವೇಳೆ ಇಬ್ಬರು ತುಂಬಾ ಕ್ಲೋಸ್ ಆಗಿದ್ದರು. ಆಗ ಅದೇ ಬಿಗ್‌ಬಾಸ್ ಮನೆ ಒಳಗೆ ಮತ್ತೊಬ್ಬರು ಸ್ಪರ್ಧಿ ಜೊತೆಗೆ ಮಾತನಾಡುವಾಗ, ಸ್ವತಃ ಇದೇ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಬಗ್ಗೆ ಮಾತನಾಡಿದ್ರು. ಆಗ ನಾನು ಮತ್ತು ನಿವೇದಿತಾ, ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಅವರ ರೀತಿ ಎಂದಿದ್ದರು. ಆ ವಿಡಿಯೋ ವೈರಲ್ ಮಾಡಿ ಟ್ರೋಲ್ ಮಾಡಿದ್ದರು ಕೆಲವರು. ಹೀಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಕೊಟ್ಟು ದೂರವಾಗಿದ್ದರೂ ಅವರಿಬ್ಬರ ವಿಚಾರ ಮಾತ್ರ ಈಗಲೂ ಟ್ರೆಂಡ್ ಹುಟ್ಟು ಹಾಕುತ್ತಿದೆ.












Click it and Unblock the Notifications