Chandan Shetty: ಚಂದನ್ ಶೆಟ್ಟಿ & ನಿವೇದಿತಾ ಗೌಡ ಮತ್ತೆ ಒಂದಾಗ್ತಾ ಇದ್ದಾರೆ!

ಚಂದನ್ ಶೆಟ್ಟಿ & ನಿವೇದಿತಾ ಗೌಡ ದೂರ ಆಗಿ ಹಲವು ತಿಂಗಳು ಕಳೆದರೂ ಈ ಬಗ್ಗೆ ಫ್ಯಾನ್ಸ್ ಈಗಲೂ ಚರ್ಚೆ ಮಾಡುತ್ತಾ ಇದ್ದಾರೆ. ಅದರಲ್ಲೂ ಚಂದನ್ ಶೆಟ್ಟಿ ಬೇರೆ ಮದುವೆ ಆಗ್ತಾರಂತೆ & ನಿವೇದಿತಾ ಗೌಡ ಬೇರೆ ಮದುವೆಗೆ ರೆಡಿ ಆಗಿದ್ದಾರಂತೆ, ಅನ್ನೋ ಸುಳ್ಳು ಸುಳ್ಳು ಸುದ್ದಿಗಳನ್ನ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿದ್ದಾರೆ. ಹೀಗಿದ್ದಾಗಲೇ ಚಂದನ್ ಶೆಟ್ಟಿ & ನಿವೇದಿತಾ ಗೌಡ ಮತ್ತೆ ಒಂದಾಗ್ತಾ ಇದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!

ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಜೀವನ ಚೆನ್ನಾಗಿಯೇ ಇತ್ತು, ಹಾಗೇ ಇಬ್ಬರ ಮಧ್ಯೆ ಹೊಂದಾಣಿಕೆ ಕೂಡ ಇತ್ತು ಅಂತಾ ಜನರು ಅಂದುಕೊಂಡಿದ್ದರು. ಸೋಷಿಯಲ್ ಮೀಡಿಯಾ ತುಂಬಾ ಇವರದ್ದೇ ಸದ್ದು, ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದೊಂದು ವಿಡಿಯೋ & ಫೋಟೋ ಅಪ್ಲೋಡ್ ಮಾಡಿದ್ರೆ ಲಕ್ಷ ಲಕ್ಷ ಲೈಕ್ಸ್ ಸಿಗುತ್ತಿದ್ದವು. ಅದರಲ್ಲೂ ರಾತ್ರಿ ಹೊತ್ತು ತಮ್ಮ ಮುದ್ದಿನ ಹೆಂಡತಿಗೆ ಅಂತಾ ಇದೇ ಚಂದನ್ ಶೆಟ್ಟಿ ಅವರು ಹಾರ್ಟ್ ಶೇಪ್ ರೆಡ್ ಕಲರ್ ಗ್ಯಾಸ್ ಬಲೂನ್ ತಂದು ಕೊಡೋದು ಏನು. ಇಬ್ಬರು ರೊಮ್ಯಾಂಟಿಕ್ ಆಗಿ ರೀಲ್ಸ್ ಮಾಡಿ ಅಪ್ಲೋಡ್ ಮಾಡೋದು ಏನು. ಹಿಂಗೆಲ್ಲಾ ಇಬ್ಬರೂ ಪ್ರೀತಿ ತೋರಿಸುವಾಗಲೇ ಡಿವೋರ್ಸ್ ಸುದ್ದಿ ಶಾಕ್ ಕೊಟ್ಟಿತ್ತು. ಆದ್ರೆ ಈಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿದ್ದಾರಂತೆ!

Chandan Shetty And Niveditha Gowda Fans Got Good News

ಒಂದಾಗುತ್ತಿರುವ ಚಂದನ್ & ನಿವೀ!

ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿದ್ದಾರೆ ನಿಜ, ಆದ್ರೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿರುವುದು ರಿಯಲ್ ಲೈಫ್‌ನಲ್ಲಿ ಅಲ್ಲ. ಬದಲಾಗಿ ಈ ಇಬ್ಬರೂ ಸೇರಿ ನಟನೆ ಮಾಡಿರುವ ಸಿನಿಮಾದಲ್ಲಿ. ಹೌದು ರಿಯಲ್ ಲೈಫ್ ಜೋಡಿ ಆಗಿದ್ದ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ್ದ ಸಿನಿಮಾಗೆ ದೊಡ್ಡದಾಗಿ ಆಪರೇಷನ್ ಮಾಡಲಾಗಿದೆ. ಅಂದಹಾಗೆ ಈ ಇಬ್ಬರ ಸಿನಿಮಾ ಹೆಸರನ್ನೇ ಉಡೀಸ್ ಮಾಡಿ, ಹೊಸ ಹೆಸರು ಇಡಲಾಗಿದೆ.

ಡಿವೋರ್ಸ್ ಕ್ಯಾನ್ಸಲ್ ಆಗುತ್ತಾ?

'ಕ್ಯಾಂಡಿ ಕ್ರಶ್' ಎಂಬ ಹೆಸರನ್ನ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಸಿನಿಮಾಗೆ ಈ ಮೊದಲು ಇಡಲಾಗಿತ್ತು. ಆದರೆ ಇದೀಗ 'ಕ್ಯಾಂಡಿ ಕ್ರಶ್' ಟೈಟಲ್ ಬದಲಾಗಿ, ಮುದ್ದು ರಾಕ್ಷಸಿ ಎಂದು ಇಡಲಾಗಿದೆ. ಪುನೀತ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋ ಥ್ರಿಲ್ಲರ್ ಕಥಾಹಂದರದ ತಾತ್ಕಾಲಿಕ ಟೈಟಲ್ ಆಗಿದ್ದ 'ಕ್ಯಾಂಡಿ ಕ್ರಶ್' ಈಗ 'ಮುದ್ದು ರಾಕ್ಷಸಿ' ಎಂದು ಚೇಂಜ್ ಆಗಿದೆ. ಇದೀಗ 'ಮುದ್ದು ರಾಕ್ಷಸಿ' ಸಿನಿಮಾದ ಹೊಸ ಪೋಸ್ಟರ್ ವೈರಲ್ ಆಗುತ್ತಿದೆ. ಹಾಗೇ ಫ್ಯಾನ್ಸ್ ಕೂಡ ಈ ಬಗ್ಗೆ ಚರ್ಚೆ ಶುರು ಮಾಡಿದ್ದು, ಸಿನಿಮಾ ಬಿಡುಗಡೆ ಆಗುವ ಹೊತ್ತಿಗೆ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಮುನಿಸು ಮರೆತು ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.

ತಂಗಿ ಅಂತಾ ಕರೆದಿದ್ದರು ಚಂದನ್!

ಬಿಗ್‌ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಸ್ಪರ್ಧೆ ಮಾಡಿದ್ದರು. ಈ ವೇಳೆ ಇಬ್ಬರು ತುಂಬಾ ಕ್ಲೋಸ್ ಆಗಿದ್ದರು. ಆಗ ಅದೇ ಬಿಗ್‌ಬಾಸ್ ಮನೆ ಒಳಗೆ ಮತ್ತೊಬ್ಬರು ಸ್ಪರ್ಧಿ ಜೊತೆಗೆ ಮಾತನಾಡುವಾಗ, ಸ್ವತಃ ಇದೇ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಬಗ್ಗೆ ಮಾತನಾಡಿದ್ರು. ಆಗ ನಾನು ಮತ್ತು ನಿವೇದಿತಾ, ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಅವರ ರೀತಿ ಎಂದಿದ್ದರು. ಆ ವಿಡಿಯೋ ವೈರಲ್ ಮಾಡಿ ಟ್ರೋಲ್ ಮಾಡಿದ್ದರು ಕೆಲವರು. ಹೀಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಕೊಟ್ಟು ದೂರವಾಗಿದ್ದರೂ ಅವರಿಬ್ಬರ ವಿಚಾರ ಮಾತ್ರ ಈಗಲೂ ಟ್ರೆಂಡ್ ಹುಟ್ಟು ಹಾಕುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+