ಯಶ್ ರೀತಿಯೇ ದರ್ಶನ್ ಅವರಿಗೂ ವಿದೇಶದಲ್ಲಿ ಫುಲ್ ಕ್ರೇಜ್!

'ಕ್ರಾಂತಿ' ಸಿನಿಮಾದಲ್ಲಿ ಕನ್ನಡದ ಅಭಿಮಾನ ಮೆರೆದಿದ್ದ ನಟ ದರ್ಶನ್, ಕಾಟೇರ ಸಿನಿಮಾದ ಮೂಲಕ ರೈತರ ಸಂಕಷ್ಟಗಳನ್ನ ತೆರೆ ಮೇಲೆ ತಂದಿದ್ದಾರೆ. ಹಾಗೇ ಸಮಾಜದ ಸಮಸ್ಯೆಗಳ ಬಗ್ಗೆ ಕೂಡ ಆಳವಾದ ಕಥೆಯನ್ನು ಕಟ್ಟಿಕೊಟ್ಟ 'ಕಾಟೇರ' ಇದೀಗ ಎಲ್ಲೆಲ್ಲೂ ಹವಾ ಎಬ್ಬಿಸಿದೆ. ಇದೇ ಸಮಯದಲ್ಲಿ ನಟ ದರ್ಶನ್ ಅವರು ದುಬೈಗೆ ತೆರಳಿದ್ದು ಅಲ್ಲಿ ಫ್ಯಾನ್ಸ್ ಕ್ರೇಜ್ ಹೇಗೆ ಇತ್ತು ಗೊತ್ತಾ?

'ಕಾಟೇರ' ಅಬ್ಬರ ಕನ್ನಡಿಗರ ನೆಲದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಧೂಳೆಬ್ಬಿಸಿ, ಕೋಟಿ ಕೋಟಿ ಬಾಚುತ್ತಿದೆ. ಹೀಗಿದ್ದಾಗ ನಟ ದರ್ಶನ್ ಅವರು ಮತ್ತು ಕಾಟೇರ ಡೈರೆಕ್ಟರ್ ಆಗಿರುವ ತರುಣ್ ಸುಧೀರ್ ಅವರು ದುಬೈಗೆ ತೆರಳಿದ್ದಾರೆ. ದುಬೈನಲ್ಲಿ ನಟ ದರ್ಶನ್ ಅವರ ಕ್ರೇಜ್‌ಗೆ ಥಿಯೇಟರ್ ತುಂಬಿ ತುಳುಕಿದೆ. ದುಬೈನಲ್ಲಿ ನಡೆದ ಕಾಟೇರ ಸ್ಪೆಷಲ್ ಪ್ರೀಮಿಯರ್‌ ಶೋನಲ್ಲಿ ಕಾಟೇರ ಸಿನಿಮಾ ಟೀಂ ಭಾಗಿ ಆಗಿತ್ತು.

Challenging Star Darshans Movie Kaatera Creating Record In The Overseas

ಈ ವೇಳೆ ಅಭಿಮಾನಿಗಳು ಸಂಭ್ರಮದಲ್ಲಿ ಕುಣಿದು, ಕುಪ್ಪಳಿಸಿದ್ದಾರೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೈಕಾರ ಹಾಕಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ ಕಾಟೇರ. ಹಾಗಾದ್ರೆ ಈವರೆಗೆ ಈ ಸಿನಿಮಾ ದುಡಿದ ಹಣ ಎಷ್ಟು ನೂರು ಕೋಟಿ ಗೊತ್ತಾ? ವಿದೇಶದಲ್ಲಿ ಕಾಟೇರ ಸಿನಿಮಾ ಹವಾ ಹೇಗಿದೆ? ಸಿನಿಮಾ ಮಂದಿರಗಳು ತುಂಬಿ ತುಳುಕಿದ್ದು ಹೇಗೆ? ಮುಂದೆ ಓದಿ.

ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ ಕಾಟೇರ!

ಈಗಾಗಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿರುವ ಕಾಟೇರ ಸಿನಿಮಾ, ಈಗ 150 ಕೋಟಿ ಕಡೆಗೆ ತನ್ನ ಸಂಚಾರ ಆರಂಭಿಸಿದೆ. ಹೀಗಾಗಿ ಇನ್ನೇನು ಕೆಲವೇ ದಿನದಲ್ಲಿ ಕಾಟೇರ ಗುರಿಯ ತಲುಪುವ ನಿರೀಕ್ಷೆ ಕೂಡ ಇದೆ. ಅದ್ರಲ್ಲೂ ವಿದೇಶದಲ್ಲಿ ಕೂಡ ಕಾಟೇರ ಅಬ್ಬರ ಜೋರಾಗಿ ಇದ್ದು, ಎಲ್ಲೆಲ್ಲೂ ಕನ್ನಡಿಗರ ಈ ಸಿನಿಮಾ ಮಿಂಚುತ್ತಿದೆ. ಭಾರತದಿಂದ ತೆರಳಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಇದೀಗ ಕಾಟೇರ ಸಿನಿಮಾ ಕಣ್ತುಂಬಿಕೊಂಡು ಜೈಕಾರ ಹಾಕ್ತಿದ್ದಾರೆ. ಇದೇ ವೇಳೆ ಕಾಟೇರ ಟೀಂ ದುಬೈಗೆ ಹಾರಿ ಗಮನ ಸೆಳೆದಿದೆ. ಅಲ್ಲದೆ ವಿದೇಶದಲ್ಲಿ ಕೂಡ, ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಕಾಟೇರ ಸಿನಿಮಾ.

Challenging Star Darshans Movie Kaatera Creating Record In The Overseas

ಹಲವು ದಾಖಲೆಗೂ ಧೂಳ್ ಧೂಳ್!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ 'ಕಾಟೇರ' ಕರ್ನಾಟಕ ಸೇರಿದಂತೆ, ದೇಶದ ವಿವಿಧ ರಾಜ್ಯದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹಾಗೆ ಕಾಟೇರ ರಿಲೀಸ್ ಆದ ಕೇವಲ 1 ವಾರಕ್ಕೆ 100 ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಭರ್ಜರಿಯಾಗಿ ಕಲೆಕ್ಷನ್ ಮಾಡ್ತಿರುವ ಈ ಸಿನಿಮಾ ವಿದೇಶದಲ್ಲಿ ಕೂಡ ತನ್ನ ಹವಾ ತೋರಿಸುತ್ತಿದೆ. ಹೀಗಾಗಿ ಸಿನಿಮಾ ತಂಡವೂ ಫುಲ್ ಖುಷ್ ಆಗಿದ್ದು, ಅಭಿಮಾನಿಗಳ ಪ್ರತಿಕ್ರಿಯೆಗೆ ಫಿದಾ ಆಗಿದೆ. 2ನೇ ವಾರ ಕೂಡ ಈ ಸಿನಿಮಾ ಧೂಳೆಬ್ಬಿಸಿ ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+