‘ಡಿ-ಬಾಸ್’ ದರ್ಶನ್ ಮದುವೆ ಆಗಬೇಡ ಅಂತಾ ಹೇಳಿದ್ದು ಯಾರಿಗೆ?

ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಾಗಿ ದರ್ಶನ್ ಅವರ ಸಿನಿಮಾಗಳಿಗೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಾರೆ. ಇತ್ತೀಚೆಗೆ ಅವರ ಕಾಟೇರ ಸಿನಿಮಾ ರಿಲೀಸ್ ಆಗಿ ಅದ್ಧೂರಿಯಾಗಿ ಯಶಸ್ಸು ಕಂಡಿದೆ. ಆದರೆ ಇದೇ ಸಂದರ್ಭದಲ್ಲಿ ದರ್ಶನ್ ಅವರು, ಕನ್ನಡದ ಖ್ಯಾತ ಕಾಮಿಡಿ ಕಿಲಾಡಿಗೆ ಮದುವೆಯೇ ಆಗಬಾರದಿತ್ತು ಅಂತಾ ಸಲಹೆ ನೀಡಿದ್ದಾರೆ!

ಹೌದು ಹಂಪಿ ಉತ್ಸವದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ನಟ ದರ್ಶನ್ ಅವರು ಫ್ಯಾನ್ಸ್ ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಇದೇ ವೇಳೆ ಅಲ್ಲಿದ್ದ ಜಗಪ್ಪ ದಂಪತಿಯನ್ನು ಕೂಡ ನೋಡಿದ್ದಾರೆ ನಟ ದರ್ಶನ್. ಈ ವೇಳೆ ಜಗಪ್ಪ ಅವರ ಪತ್ನಿಯ ಕಾಮಿಡಿಗೆ ಫುಲ್ ಮಾರ್ಕ್ಸ್ ಕೊಟ್ಟ ನಟ ದರ್ಶನ್ ಅವರು, ಕೊನೆಗೆ ಒಂದು ಮಾತು ಹೇಳಿದ್ದಾರೆ. ಆ ಮಾತು ಇದೀಗ, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಹಾಗಾದರೆ ಜಗಪ್ಪಗೆ ದರ್ಶನ್‌ರ ಸಲಹೆ ಏನಾಗಿತ್ತು? ಈ ಡೈಲಾಗ್ ವೈರಲ್ ಆಗಿದ್ದೇಕೆ? ಮುಂದೆ ಓದಿ.

Challenging Star Darshan Suggested Not To Marry

ಮದುವೆ ಆಗಬಾರದಿತ್ತು ಅಂದ್ರು!

ಅಂದಹಾಗೆ ಜಗಪ್ಪ ದಂಪತಿ ಇತ್ತೀಚೆಗೆ ಮದುವೆ ಆಗಿದ್ದರು. ಹಾಗೇ ಈ ಜೋಡಿ ಮದುವೆ, ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಇದೀಗ ದರ್ಶನ್ ಅವರು, ಈ ದಂಪತಿಯ ಹಾಸ್ಯದ ಬಗ್ಗೆ ಮಾತನಾಡುವಾಗ ತಾವು ನೀಡಿದ್ದ ಸಲಹೆಯನ್ನ ನೆನಪಿಸಿಕೊಂಡಿದ್ದಾರೆ.

ಹಾಗಾದರೆ, ಏನಪ್ಪಾ ಅದು ಸಲಹೆ? ದರ್ಶನ್ ಅವರು ಜಗಪ್ಪಗೆ ನೀಡಿದ ಸಲಹೆ ಏನು? ಅಂದ್ರಾ. ಈ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ, ಅಷ್ಟಕ್ಕೂ ನಟ ದರ್ಶನ್ ಅವರು ಜಗಪ್ಪ ಅವರ ಪತ್ನಿಯ ಕಾಮಿಡಿಗೆ ಫಿದಾ ಆಗಿ ಹೊಗಳಿದ್ದಾರೆ. ಇದೇ ವೇಳೆ ಮೂರ್ತಿ ಚಿಕ್ಕದಾದ್ರೂ, ಬಾಯಿ ಮಾತ್ರ ತುಂಬಾ ದೊಡ್ಡದು ಎಂದಿದ್ದಾರೆ.

ಜಗಪ್ಪ ಕಾಲೆಳೆದ ನಟ ದರ್ಶನ್

ಹಾಗೇ ಜಗಪ್ಪ ಅವರ ಕಾಲು ಎಳೆಯುತ್ತಾ, ಜಗಪ್ಪ ಹೆಂಗಪ್ಪಾ ಮೈಂಟೇನ್ ಮಾಡ್ತಿದ್ದೀಯ? ಅಂತಾ ಪಶ್ನೆ ಮಾಡಿದ್ದಾರೆ. ತುಂಬಾ ಕಷ್ಟ ಅಲ್ವಾ? ಅಂತಾನೂ ಹೇಳಿದ್ದಾರೆ ನಟ ದರ್ಶನ್ ಅವರು. ಹಾಗೇ ಇದೇ ವೇಳೆ ಅದಕ್ಕೆ ನಾ ಹೇಳಿದ್ದೆ ಮದುವೆಯೇ ಮಾಡಿಕೊಳ್ಳಬೇಡ ಅಂತಾ, ಎಂದು ಕಾಲು ಎಳೆದಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಡೈಲಾಗ್ ಫುಲ್ ವೈರಲ್ ಆಗುತ್ತಿದೆ. ಹಾಗೇ ತಮ್ಮ ನೆಚ್ಚಿನ ನಟನ ಈ ಕಾಮಿಡಿ ಪಂಚ್‌ಗೆ ಫ್ಯಾನ್ಸ್‌ ಕೂಡ ಫಿದಾ ಆಗಿದ್ದಾರೆ.

ಕ್ರಿಸ್‌ಮಸ್ ರಜೆ ಸಂಭ್ರಮದಲ್ಲೇ, ಕಾಟೇರ ಸಿನಿಮಾ ಹೊಸ ವರ್ಷಕ್ಕೆ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿತ್ತು. ಡಿ. 29ಕ್ಕೆ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ಹೊಸ ದಾಖಲೆ ನಿರ್ಮಾಣ ಮಾಡಿತ್ತಿದೆ. ನೋಡ ನೋಡುತ್ತಲೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು, ತಾಕತ್ ತೋರಿಸಿದೆ. ಹಾಗೆಯೆ ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾ ಮೀರಿಸಿ ಕನ್ನಡಿಗರ 'ಕಾಟೇರ' ಫ್ಯಾನ್ಸ್‌ಗೆ ಹಬ್ಬವನ್ನೇ ಕೊಟ್ಟಿದೆ.

Challenging Star Darshan Suggested Not To Marry

200 ಕೋಟಿ ರೂಪಾಯಿ ಕ್ಲಬ್!

ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡಿದೆ. ಹೀಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿ ಸಾಧನೆ ಮಾಡಿದೆ.

ಒಟ್ನಲ್ಲಿ ನಟ ದರ್ಶನ್ ಅವರ ಫ್ಯಾನ್ಸ್, ಹೊಸ ವರ್ಷದ ಆರಂಭದಲ್ಲೇ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. ಹಾಗೇ ನಟ ದರ್ಶನ್ ಅವರ ಸಾಲು ಸಾಲು ಸಿನಿಮಾಗಳ ಸಕ್ಸಸ್ ಕೂಡ ಫ್ಯಾನ್ಸ್ ಪಾಲಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಹೀಗಾಗಿ 2024ರಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ಈ ರೀತಿ ಮತ್ತಷ್ಟು ಸಕ್ಸಸ್ ಪಡೆಯಲಿ ಅಂತಾ ಆಶಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+