‘ಡಿ-ಬಾಸ್’ ಕಾಟೇರ ಸಿನಿಮಾಗೆ 4 ನೋಟಿಸ್, ಕೋಟಿ ಕೋಟಿ ದುಡಿದಿದ್ದೇ ಸಂಕಷ್ಟ ತಂದಿದೆಯಾ?
'ಡಿ-ಬಾಸ್' ದರ್ಶನ್ ಏನನ್ನೇ ಮಾಡಿದ್ರೂ ದೊಡ್ಡ ಸುದ್ದಿಯಾಗುತ್ತೆ, ಈ ನಟನ ಸಿನಿಮಾಗಳು ನೂರಾರು ಕೋಟಿ ದುಡ್ಡು ಮಾಡುತ್ತವೆ. ಹೀಗೆ ನಟ ದರ್ಶನ್ ಅವರ ಅಬ್ಬರ ಕಂಡು ಈಗ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಆಗಿದೆ. ಹೀಗಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ 'ಕಾಟೇರ'ಗೆ ಒಟ್ಟಾರೆ 4 ನೋಟಿಸ್ ಬಂದಿದೆಯಂತೆ.
ದಾಸ ದರ್ಶನ್ ಅವರು ಕಾಟೇರ ಸಿನಿಮಾ ಮೂಲಕ ಅಬ್ಬರಿಸಿದ್ದು ಬಾಕ್ಸ್ ಆಫಿಸ್‌ನಲ್ಲೂ ಅಬ್ಬರ ತೋರಿಸಿದ್ದಾರೆ. ಈ ಸಮಯದಲ್ಲಿ ಕಾಟೇರ ಸಿನಿಮಾ ಎಷ್ಟು ದುಡ್ಡು ಮಾಡಿದೆ? ಅನ್ನೋ ಬಗ್ಗೆ ಚರ್ಚೆಯೂ ಜೋರಾಗಿದೆ. ಅದ್ರಲ್ಲೂ ಕಾಟೇರ ಸಿನಿಮಾ 200 ಕೋಟಿ ದುಡ್ಡನ್ನ ಮಾಡಿದೆ 250 ಕೋಟಿ ರೀಚ್ ಆಗುತ್ತೆ ಅಂತೆಲ್ಲಾ ಪೋಸ್ಟ್ ಹರಿದಾಡಿವೆ. ಆದರೆ ಈಗ ಅಂತಹ ಹೇಳಿಕೆ ಸಂಬಂಧ 'ಡಿ-ಬಾಸ್' ಕಾಟೇರ ಸಿನಿಮಾಗೆ 4 ನೋಟಿಸ್ ಬಂದಿದೆಯಂತೆ! ಯಾಕೆ ಗೊತ್ತಾ? ನೋಟಿಸ್ ಕೊಟ್ಟಿದ್ದು ಯಾರು ಗೊತ್ತಾ? ಬನ್ನಿ ತಿಳಿಯೋಣ.

4 ನೋಟಿಸ್ ಬಂದಿದ್ದು ಯಾಕೆ?
ಕನ್ನಡಿಗರ ಸಿನಿಮಾ ಕಾಟೇರ ಗಲ್ಲಾಪೆಟ್ಟಿಗೆಯ ತುಂಬಾ ಕಾಸು ಮಾಡಿದೆ, ಕಥೆ ಮತ್ತು ಮೇಕಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಕಾಟೇರ ಸಕ್ಸಸ್ ಕಂಡಿದೆ. ಹೀಗೆ ಕಾಸು ಮಾಡಿ ಅಭಿಮಾನಿಗಳ ಮನಸ್ಸು ಕೂಡ ಗೆದ್ದಿರುವ ಕಾಟೇರ ಬಗ್ಗೆ ದಿನಕ್ಕೊಂದು ಸುದ್ದಿಗಳು ಓಡಾಡುತ್ತಿವೆ. ಅದರಲ್ಲೂ 'ಕಾಟೇರ' ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ನೂರಾರು ಕೋಟಿ ದುಡಿದು, ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಿದ್ದಾರೆ ಕೆಲವರು. ಹೀಗೆ ಸುದ್ದಿ ಹಬ್ಬಿಸುವವರ ವಿರುದ್ಧ ಕಾಟೇರ ನಿರ್ಮಾಪಕರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗೇ ಇಂತಹ ಸುದ್ದಿಗಳಿಂದ ತಮಗೆ 4 ನೋಟಿಸ್ ಬಂದಿವೆ ಎಂದಿದ್ದಾರೆ.
200 ಕೋಟಿ ರೂಪಾಯಿ ಗಳಿಸಿಲ್ವಾ?
ಹೌದು 'ಕಾಟೇರ' ಸಿನಿಮಾ 200 ಕೋಟಿ ರೂಪಾಯಿ ದುಡಿದಿದೆ ಎಂಬ ವದಂತಿ ನಡುವೆ ತಮಗೆ 4 ನೋಟಿಸ್ ಬಂದಿವೆ ಎಂದಿದ್ದಾರೆ ಕಾಟೇರ ಸಿನಿಮಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಹೀಗೆ ಕಾಟೇರ ಸಿನಿಮಾ ಬಗ್ಗೆ ಕೆಲವರು ಏನೇನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ, ಅವರ ಇಂಥ ಸುದ್ದಿಗಳಿಂದಲೇ ನನಗೆ ಸಮಸ್ಯೆ ಆಗಿದೆ. ಇಡಿ, ಐಟಿ ಹೀಗೆ ಸಖತ್ ನೋಟಿಸ್ ಬಂದಿವೆ. ನಾನು ಹೀಗೆ ಸುದ್ದಿ ಹಬ್ಬಿಸಿದ್ದವರ ನಂಬರ್ ಕೊಟ್ಟಿದ್ದೀನಿ ಅಂತಾ ಹೇಳಿದ್ದಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಈ ಮೂಲಕ ಕಾಟೇರ ಸಿನಿಮಾ ದುಡಿದಿರುವ ಹಣ ಎಷ್ಟು? ಅನ್ನೋ ಬಗ್ಗೆ ಸುಳ್ಳು ಸುದ್ದಿ ಓಡಾಡುತ್ತಿದೆ ಅಂತಿದ್ದಾರೆ.
50 ಡೇಸ್ ಕಂಪ್ಲೀಟ್ ಆಯ್ತು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಾಗಿಯೆ ದರ್ಶನ್ ಅವರ ಸಿನಿಮಾ ನೋಡಲು ಬೇರೆ ರಾಜ್ಯದಲ್ಲೂ ಫ್ಯಾನ್ಸ್ ಕಾಯುತ್ತಾರೆ. ಇದೇ ರೀತಿ ಇದೀಗ 'ಕಾಟೇರ' ಸಿನಿಮಾ ಭರ್ಜರಿ ಅಬ್ಬರ ತೋರಲು ಶುರು ಮಾಡಿದೆ. ಇದೀಗ ಕಾಟೇರ ಬಿಡುಗಡೆ ಆಗಿ ಒಟ್ಟಾರೆ 50 ದಿನ ಕಳೆದಿದೆ. ಹೀಗೆ ಕಾಟೇರ ಸಿನಿಮಾ 50 ಡೇಸ್ ಕಂಪ್ಲೀಟ್ ಮಾಡಿದ ಕಾರಣಕ್ಕಾಗಿ ಇಂದು ಭರ್ಜರಿಯಾಗಿ ಸಂಭ್ರಮ ಆಚರಣೆ ಮಾಡಲಾಯಿತು.

ಬೆಂಗಳೂರಲ್ಲಿ ಭರ್ಜರಿ ಸೆಲೆಬ್ರೇಷನ್
ಡಿ-ಬಾಸ್ ದರ್ಶನ್ ಅಭಿನಯ ಮಾಡಿದ ಸಿನಿಮಾ ಕಾಟೇರ ಬರೋಬ್ಬರಿ 50 ದಿನ ಯಶಸ್ವಿಯಾಗಿ ಪೂರೈಸಿದ್ದು. ಕಾಟೇರ 50 ದಿನ ಪೂರೈಸಿದ ಕಾರಣಕ್ಕೆ ಇಂದು, ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಪ್ರಸನ್ನ ಸಿನಿಮಾ ಮಂದಿರದಲ್ಲಿ ಕಾಟೇರ ಸಿನಿಮಾದ 50ನೇ ದಿನದ, ಸಂಭ್ರಮಾಚರಣೆ ನಡೆಯಿತು. ಸಂಭ್ರಮ ನಡೆಯುವಾಗ ದರ್ಶನ್ ಅವರು, ತಮ್ಮ ಸೆಲೆಬ್ರಿಟಿಸ್ ಅಂದ್ರೆ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ್ರು. ಹಾಗೆ ಚಿತ್ರದ ನಟರು ಮತ್ತು ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಖುಷಿಪಟ್ಟರು.












Click it and Unblock the Notifications