200 ಕೋಟಿ ರೂಪಾಯಿ ಕ್ಲಬ್ ಸೇರಿತಾ ‘ಕಾಟೇರ’ ಸಿನಿಮಾ?
ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಸಿನಿಮಾ ಇಂಡಸ್ಟ್ರಿಗೆ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದರೂ 'ಕಾಟೇರ' ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡುತ್ತಿದೆ. ಹೀಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿತಾ? ಎಂಬ ಕುತೂಹಲ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ.
ಅಂದಹಾಗೆ ಕ್ರಿಸ್‌ಮಸ್ ರಜೆಯ ಸಂಭ್ರಮದಲ್ಲೇ 'ಕಾಟೇರ' ಸಿನಿಮಾ ಹೊಸ ವರ್ಷಕ್ಕೆ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿತ್ತು. ಡಿಸೆಂಬರ್ 29ಕ್ಕೆ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ಹೊಸ ಹೊಸ ದಾಖಲೆ ನಿರ್ಮಾಣ ಮಾಡಿತ್ತು. ನೋಡ ನೋಡುತ್ತಲೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು, ತನ್ನ ತಾಕತ್ ತೋರಿಸಿತ್ತು ಕನ್ನಡಿಗರ ಈ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾಗಳನ್ನ ಮೀರಿಸಿ ಕನ್ನಡಿಗರ 'ಕಾಟೇರ' ಅಭಿಮಾನಿಗಳಿಗೆ ಹಬ್ಬವನ್ನೇ ಕೊಟ್ಟಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ದೊಡ್ಡ ಉಡುಗೊರೆ ಆಗಿದೆ. ಹಾಗಾದರೆ ಕಾಟೇರ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿತಾ? ಮುಂದೆ ಓದಿ.

ಕಾಟೇರ ಸಿನಿಮಾ ಕಲೆಕ್ಷನ್ ರಿಪೋರ್ಟ್
ದರ್ಶನ್ ಅವರ ಈ ಸಿನಿಮಾಗೋಸ್ಕರ ಕೋಟಿ ಕೋಟಿ ಕನ್ನಡಿಗರು ಕಾಯುತ್ತಾ ಕುಳಿತಿದ್ದರು. 'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿತ್ತು. 2ನೇ ದಿನವೂ ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು. 6ನೇ ದಿನಕ್ಕೆ 9.78 ಕೋಟಿ ಗಳಿಸುವ ಮೂಲಕ 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ 7ನೇ ದಿನಕ್ಕೆಲ್ಲ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗೆ ಬಿಡುಗಡೆಯಾದ 2 ವಾರಕ್ಕೆಲ್ಲ ದರ್ಶನ್ ಅವರ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹಾಗಾದರೆ ಈಗ 200 ಕೋಟಿ ರೂಪಾಯಿ ಗಳಿಸಿದೆಯಾ ಕಾಟೇರ?
ಯೆಸ್ 'ಕಾಟೇರ' ಸದ್ಯ 25ನೇ ದಿನಕ್ಕೆ ಕಾಲಿಡುವ ವೇಳೆ ದರ್ಶನ್ ಅವರ ಸಿನಿಮಾ ಭರ್ಜರಿ 190 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿತ್ತು. ಹೀಗೆ 190 ಕೋಟಿ ರೂಪಾಯಿ ಗಳಿಸಿ ಈಗಾಗಲೇ 2 ದಿನ ಕಳೆದಿದ್ದು, ಹೀಗಿದ್ದಾಗ ಈಗಾಗಲೇ ಕಾಟೇರ 200 ಕೋಟಿ ಕ್ಲಬ್ ಸೇರಿರಬಹುದೆಂಬ ಮಾತು ಹೇಳುತ್ತಿದ್ದಾರೆ ಅಭಿಮಾನಿಗಳು. ಆದರೆ ಇದಕ್ಕೆ ಅಧಿಕೃತ ಹೇಳಿಕೆ ಬಾಕಿ ಇದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹೀಗಾಗಿ ದರ್ಶನ್ ಅವರ ಸಿನಿಮಾ ತೀವ್ರ ಕೂತೂಹಲವನ್ನ ಕೂಡ ಕೆರಳಿಸುತ್ತಿದೆ.

ಕಾಂತಾರ & ಕೆಜಿಎಫ್ ಮುರಿದ ಕಾಟೇರ?
ಕೆಜಿಎಫ್ & ಕಾಂತಾರ ಸಿನಿಮಾಗಳು ಈ ಮೊದಲು ಮಿಂಚಿದ್ದವು. 'KGF ಚಾಪ್ಟರ್-1' ಮತ್ತು 'KGF ಚಾಪ್ಟರ್ -2 & 'ಕಾಂತಾರ' ಭರ್ಜರಿ ದಾಖಲೆ ಬರೆದಿದ್ದು ಬಾಕ್ಸ್ ಆಫಿಸ್‌ನಲ್ಲು ಕೋಟಿ ಕೋಟಿ ಗಳಿಸಿದ್ದವು. ಆದರೆ ಕಾಂತಾರ & ಕೆಜಿಎಫ್ ದಾಖಲೆಯನ್ನು ಕೂಡ 'ಕಾಟೇರ' ಅಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಂಬ ಚರ್ಚೆ ನಡಿತಿದೆ. 'KGF-2' 1200 ಕೋಟಿ ರೂಪಾಯಿಯ ಗಳಿಸಿ ಅತಿಹೆಚ್ಚು ಗಳಿಸಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ, ನಿರ್ದೇಶಿಸಿ & ನಟಿಸಿದ್ದ 'ಕಾಂತಾರ' ಸಿನಿಮಾ ಇದೆ.
ಕಾಂತಾರ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್‌ನ ಮಾಡಿದೆ ಅಂತಾ ಹೇಳಲಾಗುತ್ತಿದೆ. ನಂತರದ ಸ್ಥಾನದಲ್ಲಿ 250 ಕೋಟಿ ರೂಪಾಯಿ ಬಾಚಿದ್ದ KGF-1 ಸಿನಿಮಾ ಇದೆ. ಇಷ್ಟೆಲ್ಲದರ ನಡುವೆ ಈ ಮೂರು ಸಿನಿಮಾಗಳು ಕರ್ನಾಟಕದಲ್ಲಿ ಗಳಿಸಿದ್ದು ಎಷ್ಟು? ಈಗ ಕಾಟೇರ ಎರಡೂ ಸಿನಿಮಾಗಳ ದಾಖಲೆ ಮುರಿದು ಮುಂದೆ ನುಗ್ಗಿದೆಯಾ? ಪೂರ್ತಿ ಮಾಹಿತಿ ಇಲ್ಲಿದೆ ಅದಕ್ಕೋಸ್ಕರ ಮುಂದೆ ಓದಿ.
ಹೀಗಿದೆ ನೋಡಿ ಗಲ್ಲಾಪೆಟ್ಟಿಗೆ ಲೆಕ್ಕಾಚಾರ!
ಅಷ್ಟಕ್ಕೂ 'KGF'-1 ಸಿನಿಮಾ ಕನ್ನಡ ವರ್ಷನ್ 134 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಆ ದಾಖಲೆ 'ಕಾಟೇರ' ಮುರಿದಿದೆ ಎನ್ನಲಾಗಿದೆ. 'ಕಾಂತಾರ' ಕನ್ನಡ ವರ್ಷನ್ 160 ಕೋಟಿ ರೂಪಾಯಿ & 'KGF-2' ಸಿನಿಮಾ 165 ಕೋಟಿ ರೂ. ಬಾಚಿತ್ತು. ಹೀಗೆ 'ಕಾಟೇರ' ಸಿನಿಮಾ ಸದ್ಯ ಈ ದಾಖಲೆ ಮುರಿದು 190 ಕೋಟಿ ರೂಪಾಯಿ ಸಂಪಾದಿಸಿದೆ ಅಂತಾ ಹೇಳಲಾಗುತ್ತಿದೆ. ಇಷ್ಟೆಲ್ಲದರ ಮಧ್ಯೆ 'ಜೇಮ್ಸ್' ಹಾಗೂ 'ವಿಕ್ರಾಂತ್ ರೋಣ' ಸಿನಿಮಾ ಕಲೆಕ್ಷನ್ ಅನ್ನು ಕೂಡ 'ಕಾಟೇರ' ಮೀರಿಸಿದೆ ಎನ್ನಲಾಗಿದೆ. ಹೀಗಾಗಿ, ಕಾಟೇರ ಸಿನಿಮಾ ಬಗ್ಗೆ ಕುತೂಹಲ ಇಷ್ಟು ದಿನ ಕಳೆದರು ಹೆಚ್ಚುತ್ತಿರುವುದು ವಿಶೇಷ.












Click it and Unblock the Notifications