200 ಕೋಟಿ ಕ್ಲಬ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಡಿ-ಬಾಸ್ ‘ಕಾಟೇರ’

ಕಾಟೇರ ಸಿನಿಮಾ ಅಬ್ಬರಿಸಿದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಸಿನಿಮಾ ಈ ತನಕ ಮಾಡದ ಸಾಧನೆ ಮಾಡಿದೆ. ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದ್ದ 'ಕಾಟೇರ' ಬರೋಬ್ಬರಿ 200 ಕೋಟಿ ಕ್ಲಬ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಜಗತ್ತಿನ ತಾಕತ್ತು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ. ಹಾಗಾದರೆ ಕಾಟೇರ ಒಟ್ಟಾರೆ ಕಲೆಕ್ಷನ್ ಮಾಡಿರೋದು ಎಷ್ಟು ನೂರು ಕೋಟಿ ಗೊತ್ತೆ? ಮುಂದೆ ಓದಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ದೊಡ್ಡ ಮಟ್ಟಿಗೆ ಹೈಪ್ ಇರುತ್ತೆ ಫ್ಯಾನ್ಸ್ ಕೂಡ ಕಾಯ್ತಾರೆ. ಅದೇ ರೀತಿ ಕಾಟೇರ ಕೂಡ ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಸಿನಿಮಾ ಗುರಿ ಮುಟ್ಟಿದೆ. 200 ಕೋಟಿ ರೂ. ಕ್ಲಬ್‌ಗೂ ಸೇರಿದೆ. 'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿತ್ತು. 2ನೇ ದಿನವೂ ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು.

Challenging Star Darshan Movie Kaatera Enters 200 Crore Club

ಕಾಟೇರ ಹಬ್ಬದ ಸಂಭ್ರಮ ಜೋರು

6ನೇ ದಿನಕ್ಕೆ 9.78 ಕೋಟಿ ಗಳಿಸುವ ಮೂಲಕ 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ 7ನೇ ದಿನಕ್ಕೆಲ್ಲ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗೆ ಬಿಡುಗಡೆಯಾದ 2 ವಾರಕ್ಕೆಲ್ಲ ದರ್ಶನ್ ಅವರ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಇದೀಗ ಅಧಿಕೃತವಾಗಿ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿದ್ದು, ಎಲ್ಲೆಲ್ಲೂ ಸಂಭ್ರಮ ಮೇಳೈಸಿದೆ. ಇದೇ ವೇಳೆ ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳು ಕೂಡ ಕಾಟೇರ ನೋಡಿ ಸಂಭ್ರಮವನ್ನ ವ್ಯಕ್ತಪಡಿಸುತ್ತಿದ್ದಾರೆ.

ಜಗತ್ತಿನಾದ್ಯಂತ ಕನ್ನಡ ಸಿನಿಮಾ ಅಬ್ಬರ

ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯದಲ್ಲಿ ಡಿ. 29ಕ್ಕೆ ರಿಲೀಸ್ ಆಗಿದ್ದ ಕನ್ನಡಿಗರ ಕಾಟೇರ ವಿದೇಶದಲ್ಲೂ ಅಬ್ಬರಿಸುತ್ತಿದೆ. ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಅರಬ್ ದೇಶದಲ್ಲೂ ಅಬ್ಬರಿಸುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಆಸ್ಟ್ರೇಲಿಯಾ ಮತ್ತಿತರ ಕಡೆ ಕಾಟೇರ ಸಿನಿಮಾ ಇದೇ ರೀತಿ ಅಬ್ಬರದ ಪ್ರದರ್ಶನ ನೀಡ್ತಿದೆ. ಇದರ ಜೊತೆ ಇದೀಗ 200 ಕೋಟಿ ರೂ. ಕ್ಲಬ್ ಬೇರೆ ಸೇರಿದೆ. ಇದು ದರ್ಶನ್ ಅವರ ಫ್ಯಾನ್ಸ್ ಸಂಭ್ರಮವನ್ನು ಡಬಲ್ ಮಾಡಿದೆ.

ದರ್ಶನ್‌ರ ಸಿನಿಮಾ ಕರಿಯರ್ ದಾಖಲೆ!

ನಟ ದರ್ಶನ್ ಅವರ ಇಡೀ ಸಿನಿ ಕರಿಯರ್ ಇದೀಗ ಝಗಮಗಿಸಿದೆ. ಕೋಟ್ಯಂತರ ಫ್ಯಾನ್ಸ್ ಕಾಟೇರ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಹಾಗೇ ಗಲ್ಲಾಪೆಟ್ಟಿಗೆಯಲ್ಲಿ ಕಾಟೇರ ಹೀಗೆ ಅಬ್ಬರಿಸಿದ್ದನ್ನು ಕಂಡು ಫುಲ್ ಖುಷ್ ಆಗಿದ್ದಾರೆ. ಅದರ ಜೊತೆಗೆ ಸ್ಯಾಂಡಲ್‌ವುಡ್‌ಗೆ ಈಗ ಹೊಸ ಗತ್ತು ಬಂದಿದೆ. ಈ ಹಿಂದೆ ಕೆಜಿಎಫ್, ಕಾಂತಾರ ಕೊಟ್ಟ ಶೈನಿಂಗ್ ಈಗ ಮತ್ತಷ್ಟು ಹೆಚ್ಚಾಗಿದೆ. ಹೀಗೆ ಈ ಖುಷಿ ಹೆಚ್ಚಾಗಲು ಕಾಟೇರ ಕಾರಣವಾಗಿದೆ. ಈಗಿನ ಮಾಹಿತಿಯಂತೆ ಕಾಟೇರ ಒಟ್ಟಾರೆ 206 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ.

Challenging Star Darshan Movie Kaatera Enters 200 Crore Club

ಯಾವ ಸಿನಿಮಾ ದಾಖಲೆ ಮುರಿದಿದೆ?

ಅಷ್ಟಕ್ಕೂ 'KGF'-1 ಸಿನಿಮಾ ಕನ್ನಡ ವರ್ಷನ್ 134 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು, ಆ ದಾಖಲೆ 'ಕಾಟೇರ' ಮುರಿದಿದೆ ಎನ್ನಲಾಗಿದೆ. 'ಕಾಂತಾರ' ಕನ್ನಡ ವರ್ಷನ್ 160 ಕೋಟಿ ರೂಪಾಯಿ & 'KGF-2' ಸಿನಿಮಾ 165 ಕೋಟಿ ರೂ. ಬಾಚಿತ್ತು. ಹೀಗೆ 'ಕಾಟೇರ' ಸಿನಿಮಾ ಸದ್ಯ ಈ ದಾಖಲೆ ಮುರಿದು 206 ಕೋಟಿ ರೂಪಾಯಿ ಸಂಪಾದಿಸಿದೆ. ಈಗಾಗಲೇ 'ಜೇಮ್ಸ್' & 'ವಿಕ್ರಾಂತ್‌ ರೋಣ' ಸಿನಿಮಾ ಕಲೆಕ್ಷನ್ ಅನ್ನು 'ಕಾಟೇರ' ಮೀರಿಸಿತ್ತು. ಇದೀಗ ನಂಬರ್ 1 ಸ್ಥಾನಕ್ಕೆ ಎಂಟ್ರಿ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+