ದರ್ಶನ್‌ರ ‘ಕಾಟೇರ’ 5 ದಿನಕ್ಕೆ ಗಳಿಸಿದ್ದು ಬರೋಬ್ಬರಿ ಇಷ್ಟು ಕೋಟಿ!

ಕನ್ನಡ ಸಿನಿಮಾ ರಂಗ ಈಗ 'ಕಾಟೇರ' ಮಯ ಆಗೋಗಿದೆ. ಎಲ್ಲಿ ಕೇಳಿದರೂ ಬರೀ ಇದೇ ಸಿನಿಮಾ ಬಗ್ಗೆ ಸದ್ದು ಕೇಳಿಬರುತ್ತಿದೆ. ನಟ ದರ್ಶನ್ ಅವರು ತಮ್ಮ ಮಾಸ್ ಬ್ಯಾನರ್‌ನಿಂದ ಹೊರ ಬಂದು, ತಾವೆಷ್ಟು ಕ್ಲಾಸ್ ಕೂಡ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಹಾಗೇ ಈ ನಟನ ನಟನಾ ಚಾತುರ್ಯಕ್ಕೆ ಮತ್ತೊಮ್ಮೆ ಕನ್ನಡ ಸಿನಿಮಾ ಪ್ರೇಕ್ಷಕರು, ಡಿ-ಬಾಸ್ ದರ್ಶನ್‌ರ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾದ್ರೆ ಕಾಟೇರ ಸಿನಿಮಾ 5 ದಿನದಲ್ಲಿ ಗಳಿಸಿರುವುದು ಎಷ್ಟು ಕೋಟಿ?

'ಕಾಟೇರ' ಸಿನಿಮಾ 2023ರ ಕೊನೆಯಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹೀಗೆ ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ಅಬ್ಬರ ಶುರುವಾಗಿತ್ತು. ಕನ್ನಡ ಸಿನಿಮಾ ಪ್ರೇಕ್ಷಕರಲ್ಲದೆ ಹೊರ ರಾಜ್ಯದ ಪರಭಾಷಿಕರು ಕೂಡ ಈ ಸಿನಿಮಾಗೆ ಸೋತು ಹೋಗಿದ್ದಾರೆ. ಇನ್ನು ಇದು ಪ್ರೇಕ್ಷಕರಿಗೆ ಮತ್ತು ದರ್ಶನ್ ಅವರ ಅಭಿಮಾನಿಗಳಿಗೆ ಮೀಸಲಾಗಿ ಉಳಿದಿಲ್ಲ. ಇದರ ಜೊತೆ ಸಿನಿಮಾ ವಿಮರ್ಶಕರು ಕೂಡ ಫಿದಾ ಆಗಿದ್ದಾರೆ. ಕಾಟೇರ ಸಿನಿಮಾಗೆ, ಫುಲ್ ಮಾರ್ಕ್ಸ್ ಕೂಡ ಕೊಡುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆ ಎದ್ದಿದೆ. ಈ ನಡುವೆ ಕಾಟೇರ ಸಿನಿಮಾ ಕಳೆದ 5 ದಿನದಲ್ಲಿ ಹತ್ತಿರ ಹತ್ತಿರ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ?

Challenging Star Darshan Movie Kaatera Continues Glory In Box Office Collection

ಕಾಟೇರ 5 ದಿನದಲ್ಲಿ ಗಳಿಸಿದ್ದು ಎಷ್ಟು?

ಅಂದಹಾಗೆ ಕಳೆದ 5 ದಿನದಲ್ಲಿ ಕಾಟೇರ ಸಿನಿಮಾ ಅಬ್ಬರಿಸಿ ಬೊಬ್ಬಿರಿದೆ. ಹೀಗೆ ಈ ಸಿನಿಮಾ ಕಳೆದ 5 ದಿನದಲ್ಲಿ ಹಲವು ದಾಖಲೆಗಳನ್ನ ನಿರ್ಮಾಣ ಮಾಡಿದೆ. ಮೊದಲ ದಿನವೇ 19.79 ಕೋಟಿ ರೂಪಾಯಿ ಬಾಚಿ ಬಳಿಕ 2ನೇ ದಿನವೂ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ ಮುಂದೆ ಮತ್ತಷ್ಟು ಅಬ್ಬರಿಸುತ್ತಾ ಸಾಗಿದ್ದ ಕಾಟೇರ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು.

ಈ ನಡುವೆ 3ನೇ ದಿನ 'ಕಾಟೇರ' ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೆಯ ದಿನ 18.26 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ, ಈಗ 5ನೇ ದಿನ 9.24 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಈವರೆಗೂ ಒಟ್ಟಾರೆ 86.84 ಕೋಟಿ ರೂಪಾಯಿ ಗಳಿಸಿದೆ ಕನ್ನಡಿಗರ ಕಾಟೇರ ಸಿನಿಮಾ. ಇನ್ನೇನು 100 ಕೋಟಿ ರೂಪಾಯಿ ಕ್ಲಬ್ ಸೇರೋದಕ್ಕೆ ಅತ್ಯಂತ ಸಮೀಪವೆ ಇದೆ. ಹೀಗಾಗಿ ಅಭಿಮಾನಿಗಳ ಸಂಭ್ರಮ ಕೂಡ ಡಬಲ್ ಆಗುತ್ತಿದೆ.

Challenging Star Darshan Movie Kaatera Continues Glory In Box Office Collection

ಸಾಲು ಸಾಲು ಹಿಟ್ ಸಿನಿಮಾ!

2023 ದರ್ಶನ್‌ರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದು. ಈ ವರ್ಷ ಎರಡೆರಡು ಹಿಟ್ ಸಿನಿಮಾಗಳು ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದಷ್ಟೇ ಕ್ರಾಂತಿ ರಿಲೀಸ್ ಆಗಿ, ದಾಖಲೆನ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ ಇದ್ದು. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಎಲ್ಲೆಲ್ಲೂ ಸಂಭ್ರಮಿಸಿದ್ದಾರೆ. ಇದಲ್ಲದೆ ವೀಕೆಂಡ್ ಹೊರತುಪಡಿಸಿ, ವೀಕ್ ಡೇಸ್ ಅಂದ್ರೆ ವಾರದ ದಿನದಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಕಾಟೇರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+