50 ದಿನ ಪೂರೈಸಿದ ‘ಕಾಟೇರ’ ಸಿನಿಮಾ, ಡಿ-ಬಾಸ್ ಫ್ಯಾನ್ಸ್ ಸಂಭ್ರಮ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಲು ಸಾಲು ಸವಾಲು ಗೆದ್ದು ಮುಂದೆ ಬಂದರು. ಹೀಗೆ ಅವರು ನೋಡ ನೋಡುತ್ತಲೇ ದೊಡ್ಡ ಹೀರೋ ಆಗಿ, ಕಳೆದ 25 ವರ್ಷದಲ್ಲಿ ಭಾರಿ ದೊಡ್ಡ ಹೆಸರು ಮಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ 'ಡಿ-ಬಾಸ್' ಅಂದ್ರೆ ಒಂದು ಸಂಚಲನ ಸೃಷ್ಟಿಯಾಗುತ್ತೆ. ಇಂತಹ ನಟನಿಗೆ ಈಗ ದೊಡ್ಡ ಯಶಸ್ಸು ಸಿಕ್ಕಿರುವುದು 'ಕಾಟೇರ' ಸಿನಿಮಾ ಮೂಲಕ. ಇದೇ ಕಾಟೇರ ಸಿನಿಮಾ ಈಗ 50 ದಿನ ಪೂರೈಸಿದೆ!

2023 ಡಿ-ಬಾಸ್ ದರ್ಶನ್‌ರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದ್ರೆ, ಈ ವರ್ಷ ಎರಡೆರಡು ಸಿನಿಮಾ ರಿಲೀಸ್ ಆಗಿವೆ. ಕೆಲವು ತಿಂಗಳ ಹಿಂದಷ್ಟೇ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿ ದಾಖಲೆ ಧೂಳ್ ಮಾಡಿತ್ತು. ಈಗ ಫ್ಯಾನ್ಸ್ ಪಾಲಿನ ಡಿ-ಬಾಸ್ ನಟ ದರ್ಶನ್ ಅವ್ರು, 'ಕಾಟೇರ' ಸಿನಿಮಾ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಕಾಟೇರ ಸಿನಿಮಾ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಅತಿಹೆಚ್ಚು ಹಣ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಯ ಕೂಡ ಗಳಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಿದ್ದಾಗಲೇ ಕಾಟೇರ 50 ದಿನಗಳ ಸಂಭ್ರಮ ಬಲು ಜೋರಾಗಿತ್ತು.

Challenging Star Darshan Movie Kaatera Completed 50 Days

2023ರಲ್ಲಿ 'ಕಾಟೇರ' ಅಬ್ಬರ ಜೋರು

ಈಗ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಹೆಸರು 'ಕಾಟೇರ' ಮಾತ್ರ ಇನ್ನೇನು 2023 ಮುಗಿಯುವ ಹೊತ್ತಿಗೆ ಕನ್ನಡ ನಾಡಿನ ಸಿನಿ ಮಂದಿರಗಳಲ್ಲಿ, ಅಬ್ಬರದಿಂದಲೆ ರಿಲೀಸ್ ಆಗಿತ್ತು ಕನ್ನಡಿಗರ ಸಿನಿಮಾ 'ಕಾಟೇರ'. ಗೂಳಿಯಂತೆ ಮುನ್ನುಗ್ಗಿ ದಾಖಲೆಗಳನ್ನೆಲ್ಲಾ ಧೂಳ್, ಧೂಳ್ ಮಾಡಿದ್ದ ಕಾಟೇರ ಸಿನಿಮಾ ಕೋಟಿ ಕೋಟಿ ಗಳಿಸಿದೆ. ಹಾಗೇ ಒಂದಷ್ಟು ಚರ್ಚೆಗಳ ಪ್ರಕಾರ ಕಾಟೇರ ಸಿನಿಮಾ 200 ಕೋಟಿ ರೂಪಾಯಿ ಗಳಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಕಾಟೇರ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿಲ್ಲ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ನೂರಾರು ಸುದ್ದಿ ಓಡಾಡುತ್ತಿವೆ.

50 ಡೇಸ್ ಕಂಪ್ಲೀಟ್ ಆಯ್ತು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಾಗಿಯೆ ದರ್ಶನ್ ಅವರ ಸಿನಿಮಾ ನೋಡಲು ಬೇರೆ ರಾಜ್ಯದಲ್ಲೂ ಫ್ಯಾನ್ಸ್ ಕಾಯುತ್ತಾರೆ. ಇದೇ ರೀತಿ ಇದೀಗ 'ಕಾಟೇರ' ಸಿನಿಮಾ ಭರ್ಜರಿ ಅಬ್ಬರ ತೋರಲು ಶುರು ಮಾಡಿದೆ. ಇದೀಗ ಕಾಟೇರ ಬಿಡುಗಡೆ ಆಗಿ ಒಟ್ಟಾರೆ 50 ದಿನ ಕಳೆದಿದೆ. ಹೀಗೆ ಕಾಟೇರ ಸಿನಿಮಾ 50 ಡೇಸ್ ಕಂಪ್ಲೀಟ್ ಮಾಡಿದ ಕಾರಣಕ್ಕೆ ಇಂದು ಭರ್ಜರಿಯಾಗಿ ಸಂಭ್ರಮ ಆಚರಣೆ ಮಾಡಲಾಯಿತು.

Challenging Star Darshan Movie Kaatera Completed 50 Days

ಬೆಂಗಳೂರಲ್ಲಿ ಭರ್ಜರಿ ಸೆಲೆಬ್ರೇಷನ್

ಡಿ-ಬಾಸ್ ದರ್ಶನ್ ಅಭಿನಯ ಮಾಡಿದ ಸಿನಿಮಾ ಕಾಟೇರ ಬರೋಬ್ಬರಿ 50 ದಿನ ಯಶಸ್ವಿಯಾಗಿ ಪೂರೈಸಿದ್ದು. 'ಕಾಟೇರ' 50 ದಿನ ಪೂರೈಸಿದ ಕಾರಣಕ್ಕೆ ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಪ್ರಸನ್ನ ಸಿನಿಮಾ ಮಂದಿರದಲ್ಲಿ ಕಾಟೇರ ಸಿನಿಮಾದ 50ನೇ ದಿನದ, ಸಂಭ್ರಮಾಚರಣೆ ನಡೆಯಿತು. ಸಂಭ್ರಮ ನಡೆಯುವಾಗ ದರ್ಶನ್ ಅವರು, ತಮ್ಮ ಸೆಲೆಬ್ರಿಟಿಸ್ ಅಂದ್ರೆ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ್ರು. ಹಾಗೆ ಚಿತ್ರದ ನಟರು ಮತ್ತು ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಖುಷಿಪಟ್ಟರು.

ಅಕ್ಟೋಬರ್‌ಗೆ ಮತ್ತೊಂದು ಸಿನಿಮಾ?

ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಮಾತನಾಡುತ್ತಾ, ತಮ್ಮ ಮುಂದಿನ ಸಿನಿಮಾದ ಬಗ್ಗೆಯೂ ಮಾಹಿತಿ ನೀಡಿದರು. ಇನ್ನು ಅಕ್ಟೋಬರ್ ತಿಂಗಳಲ್ಲಿ ತಮ್ಮ ಮುಂದಿನ ಚಿತ್ರದ ರಿಲೀಸ್ ಮುಹೂರ್ತ ಫಿಕ್ಸ್ ಎನ್ನುವಂತೆ ಮಾತನಾಡಿದರು. ಈ ಮೂಲಕ ಡೆವಿಲ್ ಕುರಿತು, ಈಗ ಭಾರಿ ಕುತೂಹಲ ಮೂಡಿದೆ. ಹಾಗೇ ಅಭಿಮಾನಿಗಳು ಸಿನಿಮಾ ನೋಡೋಕೆ ಕೂಡ ಕಾಯುತ್ತಿದ್ದಾರೆ. ಅವರ ಆಸೆ ಇನ್ನೇನು ಕೆಲವೇ ತಿಂಗಳಲ್ಲಿ ನೆರವೇರುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+