ನಾಗವಲ್ಲಿಯಾಗಿ ಬದಲಾದ ಚೈತ್ರಾ ಕುಂದಾಪುರ: ವಿಜಯ ರಾಜೇಂದ್ರ ಬಹದ್ದೂರ್ ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಮುಗಿದ ಬಳಿಕ ಆರಂಭವಾದ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದಲ್ಲಿ ಇತರ ನಟ-ನಟಿಯರ ಜೊತೆ ಬಿಗ್ ಬಾಸ್‌ನ ಕೆಲವರು ಸ್ಪರ್ಧಿಗಳಾಗಿದ್ದಾರೆ. ಈ ಪೈಕಿ ಚೈತ್ರಾ ಕುಂದಾಪುರ ಕೂಡ ಒಬ್ಬರು. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಫೈರ್ ಬ್ರ್ಯಾಂಡ್ ಆಗಿದ್ದ ಚೈತ್ರಾ ಕುಂದಾಪುರ ಈಗ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದಲ್ಲಿಯೂ ಮಿಂಚುತ್ತಿದ್ದಾರೆ.

ಭಾಷಣಾಗಾರ್ತಿಯಾಗಿದ್ದ ಚೈತ್ರಾ ಕುಂದಾಪುರ ಬಿಗ್ ಬಾಸ್ ಕನ್ನಡದ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಕಾಲಿಟ್ಟರು. ಇದೀಗ ಇದೇ ಕ್ಷೇತ್ರವನ್ನು ಚೈತ್ರಾ ಆಯ್ದುಕೊಂಡಂತೆ ಕಾಣುತ್ತಿದ್ದು, ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ವಾದ-ಪ್ರತಿವಾದಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ಚೈತ್ರಾ ಕುಂದಾಪುರ ಈ ಕಾರ್ಯಕ್ರಮಲ್ಲಿ ಹಾಡುವುದಕ್ಕೂ ಸೈ ಕುಣಿಯುವುದಕ್ಕೂ ಸೈ ಎನ್ನುತ್ತಿದ್ದಾರೆ.

Chaitra Kundapura Shines as Nagavalli in Boys Vs Girls Show

ಈ ವಾರಾಂತ್ಯದ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದಲ್ಲಿ ರೆಟ್ರೋ ಲುಕ್‌ ರೌಂಡ್ ಆಗಿದ್ದು, ಎಲ್ಲಾ ಸ್ಪರ್ಧಿಗಳು ಹಳೆಯ ಸಿನಿಮಾಗಳಲ್ಲಿ ಸಖತ್‌ ಫೇಮಸ್‌ ಆಗಿದ್ದ ಪಾತ್ರಗಳನ್ನು ಆಯ್ದುಕೊಂಡಿದ್ದಾರೆ. ನಿರೂಪಕಿ ಅನುಪಮಾ ಗೌಡ 80ರ ದಶಕದ ನಟಿಯರಂತೆ ಅಲಂಕಾರ ಮಾಡಿಕೊಂಡಿದ್ದು, ಮಂಜು ಪಾವಗಡ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಂತೆ, ಬಿಗ್ ಬಾಸ್ ವಿನ್ನರ್‌ ಹನುಮಂತು ಕವಿರತ್ನ ಕಾಳಿದಾಸದ ರಾಜ್‌ಕುಮಾರ್ ಅವರಂತೆ ಕುರಿಗಾಹಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Take a Poll

ಹೀಗೆ ಒಂದೊಂದು ಸ್ಪರ್ಧಿಗಳು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಯಾರೂ ಊಹಿಸದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಈ ವಾರದ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ನಾಗವಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೈತ್ರಾ ಕುಂದಾಪುರ ನಾಗವಲ್ಲಿಯಂತೆ ಅಲಂಕಾರಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನೋಡುಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಚೈತ್ರಾ ಕುಂದಾಪುರ ನಾಗವಲ್ಲಿಯಾದರೆ ರಜತ್ ವಿಜಯ ರಾಜೇಂದ್ರ ಬಹದ್ದೂರ್, ಇವರನ್ನು ಈ ಪಾತ್ರದಲ್ಲಿ ನೋಡಿದರೆ ಭಯ ಆಗುವುದಿಲ್ಲ ಯಾಕೆಂದರೆ ಅವರನ್ನು ಸಾಮಾನ್ಯವಾಗಿ ನೋಡಿದರೆ ಭಯವಾಗುತ್ತದೆ. ನಿಜವಾದ ನಾಗವಲ್ಲಿ ಬಂದರೂ ಇಷ್ಟು ಭಯವಾಗುವುದಿಲ್ಲ, ಅಕ್ಕನಿಗೆ ಹೇಳಿ ಮಾಡಿಸಿದ ಪಾತ್ರ. ಆಪ್ತರಕ್ಷಕ ಭಾಗ 2 ಬಂತು ಎಂದರೆ ಅಕ್ಕ ನಾಯಕಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+