Bigg Boss: ಮಗಳ ಬಾಯ್‌ಫ್ರೆಂಡ್ ಹೆಸರು ಹೇಳಿದರೆ ₹21 ಲಕ್ಷ ಕೊಡುತ್ತೇನೆ; ಬಿಗ್‌ ಬಾಸ್‌ಗೆ ಸ್ಪರ್ಧಿ ತಾಯಿ ಚಾಲೆಂಜ್‌!

ಬಿಗ್ ಬಾಸ್ ಅಂದ್ರೆನೆ ಹಾಗೆ, ಅದು ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುವ ಆಟ. ಇಲ್ಲಿ ತಂತ್ರ, ಪ್ರತಿತಂತ್ರ, ರಣತಂತ್ರ ಎಲ್ಲವೂ ಇರುತ್ತದೆ. ಎದುರಾಳಿಗಳನ್ನು ಕುಗ್ಗಿಸಲು ಸ್ಪರ್ಧಿಗಳು ಏನೇನೋ ಮಾಡುತ್ತಾರೆ. ಬಿಗ್ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ, ಸಂಬಂಧಗಳನ್ನು ಕಟ್ಟುವುದು ಕೂಡ ಸಾಮಾನ್ಯ ಎನ್ನುವಂತಾಗಿದೆ. ಬಿಗ್‌ ಬಾಸ್ ಬಳಿಕ ಹಲವು ಜೋಡಿಗಳು ಪ್ರೀತಿಯಲ್ಲಿ ಬಿದ್ದದ್ದೂ ಇದೆ.

ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಅನೇಕರು ಪ್ರೀತಿಸಿದ್ದು ಕೂಡ ಇದೆ. ಈ ಬಾರಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳ ಕುಟುಂಬದ ಸದಸ್ಯರನ್ನು ಮನೆಯೊಳಗೆ ಕಳಿಸಿ ಮಾತನಾಡಿಸಲಾಗಿತ್ತು, ಕನ್ನಡದಲ್ಲಿ ಮಾತ್ರವಲ್ಲಿ ಹಿಂದಿ ಬಿಗ್‌ ಬಾಸ್‌ನಲ್ಲಿ ಕೂಡ ಇದನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿಸ್ಪರ್ಧಿಯೊಬ್ಬರ ತಾಯಿಯೊಬ್ಬರು ಬಿಗ್‌ ಬಾಸ್‌ಗೆ ಚಾಲೆಂಜ್ ಹಾಕಿದ್ದಾರೆ.

Chahat pandey mother 21 lakhs open challeng bigg boss 18 boyfriend

ಚಾಹತ್ ಪಾಂಡೆ ತಾಯಿ ಚಾಲೆಂಜ್

ಹಿಂದಿ ಬಿಗ್ ಬಾಸ್ 18ನೇ ಆವೃತ್ತಿಯ ಸ್ಪರ್ಧಿಯಾಗಿರುವ ಚಾಹತ್ ಪಾಂಡೆ ಬಾಯ್ ಫ್ರೆಂಡ್ ವಿಚಾರ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಾಹತ್ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದು ಈ ವಿಚಾರವನ್ನು ಗುಟ್ಟಾಗಿಟ್ಟಿದ್ದಾರೆ ಎಂದು ಶೋ ನಿರೂಪಕ ಸಲ್ಮಾನ್ ಖಾನ್ ಹೇಳಿಕೆಗೆ ತಾಯಿ ಉತ್ತರಿಸಿದ್ದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಚಾಹತ್ ಪಾಂಡೆ ತಾಯಿ ಭಾವನಾ ಪಾಂಡೆ ಸವಾಲಾಕಿದ್ದು ಬಿಗ್ ಬಾಸ್‌ ಕಾರ್ಯಕ್ರಮ ಆಯೋಜಕರು ನನ್ನ ಮಗಳ ರಹಸ್ಯ ಗೆಳೆಯನ ಹೆಸರನ್ನು ಬಹಿರಂಗಪಡಿಸಿದರೆ 21 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಆಫರ್ ಕೊಟ್ಟಿದ್ದಾರೆ.

ಕಳೆದ ವಾರ ಸ್ಪರ್ಧಿಗಳ ಕುಟುಂಬದ ಸದಸ್ಯರು ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟು ಸಮಯ ಕಳೆದಿದ್ದರು. ಈ ಸಂದರ್ಭದಲ್ಲಿ ಚಾಹತ್ ಪಾಂಡೆ ತಾಯಿ ಭಾವನಾ ಪಾಂಡೆ ಮತ್ತು ನಿರೂಪಕ ಸಲ್ಮಾನ್ ಖಾನ್ ನಡುವೆ ಮಾತುಕತೆ ನಡೆಯುವ ಸಂದರ್ಭದಲ್ಲಿ ಚಾಹತ್ ಪಾಂಡೆ ಬಾಯ್‌ಫ್ರೆಂಡ್‌ ಬಗ್ಗೆ ಮಾತು ಬಂದಿದ್ದು ಈ ಸಂದರ್ಭದಲ್ಲಿ ಭಾವನಾ ಪಾಂಡೆ ಮಗಳ ಪರವಾಗಿ ನಿಂತಿದ್ದು ಆರೋಪಗಳನ್ನು ನಿಜವೆಂದು ಸಾಬೀತುಪಡಿಸಲು ಚಾಲೆಂಜ್ ಹಾಕಿದ್ದಾರೆ.

ಬಿಗ್‌ ಬಾಸ್‌ನ ಸ್ಪರ್ಧಿ ಅವಿನಾಶ್ ಮಿಶ್ರಾರನ್ನು ಮನೆಯೊಳಗೆ ಭೇಟಿಯಾದ ಸಂದರ್ಭದಲ್ಲಿ ಚಾಹತ್ ಪಾಂಡೆ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗಳು ಚಾಹತ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಚಾಹತ್ ಪಾಂಡೆಗೆ ಯಾವ ಬಾಯ್‌ಫ್ರೆಂಡ್ ಇಲ್ಲ, ನಾನು ಆಯ್ಕೆ ಮಾಡುವ ಯಾವುದೇ ಹುಡುಗನನ್ನು ಆಕೆ ಮದುವೆಯಾಗುತ್ತಾರೆ ಎಂದು ಹೇಳಿದ್ದರು.

ವೀಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕ ಸಲ್ಮಾನ್ ಖಾನ್ ಭಾವನಾ ಪಾಂಡೆ ಅವರ ಸಮರ್ಥನೆಯನ್ನು ಪ್ರಸ್ತಾಪಿಸಿ, ಚಾಹತ್ ದೀರ್ಘಾವಧಿಯಿಂದ ಬಾಯ್ ಫ್ರೆಂಡ್ ಹೊಂದಿರುವ ಬಗ್ಗೆ ಸುಳಿವು ನೀಡಿದರು. "5 ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು, ಮೈ ಲವ್" ಎಂದು ಬರೆದ ಕೇಕ್‌ನೊಂದಿಗೆ ಚಾಹತ್ ಪಾಂಡೆ ಪೋಸ್ ನೀಡುತ್ತಿರುವ ಚಿತ್ರವನ್ನು ಸಲ್ಮಾನ್ ಖಾನ್ ಪ್ರದರ್ಶಿಸಿದರು.

ಫೋಟೊ ನೋಡಿದ ಚಾಹತ್ ಪಾಂಡೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ ಅವಿನಾಶ್ ಮಿಶ್ರಾ ಸತ್ಯವನ್ನು ಹೇಳಿ ಎಂದು ಒತ್ತಾಯಿಸಿದರು. ಚಾಹತ್ ಪಾಂಡೆ ನಟಿಸುತ್ತಿದ್ದ ಧಾರವಾಹಿ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಇದು ಗೊತ್ತಿದೆ ಎಂದು ಹೇಳಿದರು. ಬಳಿಕ ಮಧ್ಯಪ್ರವೇಶಿಸಿದ ಸಲ್ಮಾನ್ ಖಾನ್ ನಿಮಗೆ ಬಾಯ್‌ಫ್ರೆಂಡ್ ಇದ್ದರೆ ಇದ್ದಾರೆ, ಇಲ್ಲವೆಂದರೆ ಇಲ್ಲ ಎಂದು ಚರ್ಚೆಗೆ ಅಂತ್ಯ ಹಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+