CCL 2025: ಮೈಸೂರಿನಲ್ಲಿ ಸಿಸಿಎಲ್ ಸೆಮಿಫೈನಲ್, ಫೈನಲ್ ಪಂದ್ಯ; ದಿನಾಂಕ, ಟಿಕೆಟ್ ಬೆಲೆ ಮಾಹಿತಿ!

ಸಿಸಿಎಲ್ 2025ರ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಅದ್ಭುತ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಫೆಬ್ರವರಿ 22 ರಂದು ಸೂರತ್‌ನಲ್ಲಿ ನಡೆಯುವ ಪಂದ್ಯದಲ್ಲಿ ಪಂಜಾಬ್ ಡಿ ಶೇರ್ ವಿರುದ್ಧ ಆಡಲಿದೆ. ಈ ಬೆನ್ನಲ್ಲೇ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಕರ್ನಾಟಕದ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟಿದ್ದಾರೆ.

ಹೌದು, ಈ ಬಾರಿ ಸಿಸಿಎಲ್ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ. ಮೈಸೂರಿನಲ್ಲಿರುವ ಸಿನಿಮಾ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಸಂಗತಿ ಇನ್ನೇನಿದೆ. ತಮ್ಮ ನೆಚ್ಚಿನ ಸಿನಿಮಾ ತಾರೆಯರು ಕ್ರಿಕೆಟ್ ಆಡುವುದನ್ನು ನೋಡಲು ಉತ್ತಮ ಅವಕಾಶ ಸಿಕ್ಕಂತಾಗಿದೆ.

Ccl 2025 matches playing mysuru karnataka bulldozers kiccha sudeep

ಕಿಚ್ಚ ಸುದೀಪ್ ಹೇಳಿದ್ದೇನು?

ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿಸಿಎಲ್ 2025ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ ಎಂದು ಹೇಳಿದ್ದಾರೆ. ಮಾರ್ಚ್ 1 ಮತ್ತು 2ನೇ ತಾರೀಕಿನಂದು ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲಿವೆ. ಮೈಸೂರಿನಲ್ಲಿ ಪಂದ್ಯಗಳನ್ನು ನಡೆಸಲು ಬೆಂಬಲ ನೀಡಿದ್ದಕ್ಕಾಗಿ ಸಿಸಿಎಲ್ ಮತ್ತು ಕೆಎಸ್‌ಸಿಎಗೆ ಕರ್ನಾಟಕ ಬುಲ್ಡೋಜರ್ಸ್ ನಾಯಕ ಸುದೀಪ್ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕ ಬುಲ್ಡೋಜರ್ಸ್ ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ. ಟಿಕೆಟ್‌ ಮಾರಾಟದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಸುದೀಪ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್‌ಗೆ

ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ತೆಲುಗು ವಾರಿಯರ್ಸ್, ಚೆನ್ನೈ ರ್‍ಹಿನೋಸ್ ಮತ್ತು ಮುಂಬೈ ಹೀರೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ ಭರ್ಜರಿ ಗೆಲುವು ಸಾಧಿಸಿದ್ದು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಅದರಲ್ಲೂ ಮುಂಬೈ ಹೀರೋಸ್ ವಿರುದ್ಧ ಡಾರ್ಲಿಂಗ್ ಕೃಷ್ಣ 36 ಎಸೆತಗಳಲ್ಲೇ 111 ರನ್ ಸಿಡಿಸುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಫೆಬ್ರವರಿ 22 ರಂದು ಕರ್ನಾಟಕ ಬುಲ್ಡೋಜರ್ಸ್ ಸೂರತ್ ನಲ್ಲಿ ಪಂಜಾಬ್ ಡಿ ಶೇರ್ ತಂಡವನ್ನು ಎದುರಿಸಲಿದೆ. ನಾಲ್ಕನೇ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಆತ್ಮವಿಶ್ವಾಸದಿಂದ ಪ್ರವೇಶಿಸಲು ಸುದೀಪ್ ಪಡೆ ಸಜ್ಜಾಗಿದೆ.

ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸಿಸಿಎಲ್ ಪಂದ್ಯಗಳು ಆಯೋಜನೆಯಾಗುತ್ತಿದ್ದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಜಿಲ್ಲೆಯ ಸಾವಿರಾರು ಅಭಿಮಾನಿಗಳು ಮೈಸೂರಿಗೆ ಆಗಮಿಸಿ ನೆಚ್ಚಿನ ತಾರೆಯರ ಕ್ರಿಕೆಟ್ ಆಟವನ್ನು ನೋಡಲು ಅವಕಾಶ ಸಿಕ್ಕಿದೆ. ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಆರಂಭಿಸಲಿದೆ. ಟಿಕೆಟ್ ದರ ಎಷ್ಟಿರಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+