Rocking Star Yash: ಬಸ್ ಡ್ರೈವರ್ ಮಗ ಇವತ್ತು ಹಾಲಿವುಡ್ ಲೆವೆಲ್ ಸ್ಟಾರ್!

ಬಡವರ ಮಕ್ಕಳಿಗೂ ಒಂದು ಕಾಲ ಬರುತ್ತೆ, ಬೆಳೆದು ನಿಲ್ಲಲು ಶ್ರಮ ಬೇಕು ಅನ್ನೋದನ್ನು ಹಲವು ಸಿನಿಮಾ ನಟರು ಹೇಳಿಕೊಟ್ಟಿದ್ದಾರೆ. ಕನ್ನಡ ಸಿನಿಮಾ ಜಗತ್ತಿನಲ್ಲಿ ಹೆಜ್ಜೆ ಹೆಜ್ಜೆಗೂ ಕಷ್ಟ ಅನುಭವಿಸಿ ಬೆಳೆದು ನಿಂತ ಹಲವು ಕನ್ನಡದ ಸ್ಟಾರ್‌ಗಳು ಇದ್ದಾರೆ. ವರನಟ ಮತ್ತು ಸಾರ್ವಕಾಲಿಕ ಸೂಪರ್‌ಸ್ಟಾರ್ ಡಾ.ರಾಜ್‌ಕುಮಾರ್ ಅವರು ಈ ಸಾಲಿನಲ್ಲಿ ಮೊದಲಿಗರು. ಇದೇ ಸಂದರ್ಭದಲ್ಲಿ ನಟ ಯಶ್ ಆಧುನಿಕ ಕಾಲದಲ್ಲಿ ಮಾದರಿ ಆಗುತ್ತಿದ್ದಾರೆ.

ನಟ ಯಶ್ ತಮ್ಮ ಮೊದಲನೇ ಸಿನಿಮಾದಿಂದ ಹಿಡಿದು ಕೆಜೆಎಫ್ ತನಕ ಹೊಸ ತನವನ್ನು ಕನ್ನಡ ಸಿನಿ ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಒಂದು ಸಿನಿಮಾ ಕಥೆ ಇದ್ದಂತೆ, ಇನ್ನೊಂದು ಸಿನಿಮಾ ಇರೋದಿಲ್ಲ. ಎಲ್ಲದರಲ್ಲೂ, ಚೇಂಜ್ & ಚಾಲೆಂಜ್ ತಗೊಂಡು ಮುನ್ನುಗ್ಗುತ್ತಾರೆ ಯಶ್. ಈಗ ತಮ್ಮ ಮುಂದಿನ ಸಿನಿಮಾ, ಯಶ್-19 ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ.

Bus Driver Son Creating Sound In World Cinema Industry And Discover Who

ನಾವ್ ಬರೋವರೆಗು ಮಾತ್ರ...

ಯಶ್ ಅವರ ಡೈಲಾಗ್ಸ್ ಎಂದೆಂದಿಗೂ ಫೇಮಸ್ ಕೋಟ್ಯಂತರ ಫ್ಯಾನ್ಸ್ ಅವರ ಡೈಲಾಗ್‌ನ ಹೊಡೆದು ಯಶ್ ಅವರನ್ನ ಆಗಾಗ ನೆನಪು ಮಾಡಿಕೊಳ್ತಾರೆ. ಸಾಮಾನ್ಯರ ಬದುಕಿಗೆ ಹತ್ತಿರ ಆಗುವಂಥ ಕಥೆ, ಡೈಲಾಗ್ ಮೂಲಕ ನಟ ಯಶ್ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ಹೀಗಿದ್ದಾಗ 'ಕೆಜಿಎಫ್' ಸಿನಿಮಾ ಸರಣಿ ಮೂಲಕ ಭಾರತದ ಮೂಲೆ ಮೂಲೆ ತಲುಪಿದರು. ಈಗ ರಾಕಿಂಗ್ ಸ್ಟಾರ್ ಯಶ್ ಖದರ್ ಜಗತ್ತಿಗೇ ರೀಚ್ ಆಗುತ್ತಿದ್ದು ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟು ಸಂಚಲನ ಸೃಷ್ಟಿಸಿದ್ದಾರೆ.

ಬಸ್ ಡ್ರೈವರ್ ಮಗನ ಮಹಾನ್ ಸಾಧನೆ!

'ಯಶ್-19' ಸಿನಿಮಾದ ಫಸ್ಟ್‌ಲುಕ್ ಟೀಸರ್ ರಿಲೀಸ್ ಆದ ಬಳಿಕ, ಇಂದು ಸೋಷಿಯಲ್ ಮೀಡಿಯಾ ಪೂರ್ತಿ ಯಶ್ ಅವರ ಸುದ್ದಿಯೇ ಆವರಿಸಿದೆ. ಅದ್ರಲ್ಲೂ ಬಸ್ ಡ್ರೈವರ್ ಮಗ ಇಂದು ಭಾರತದ ನೆಲದಿಂದ ಹಾಲಿವುಡ್ ನಡುಗಿಸುವ ಲೆವೆಲ್‌ಗೆ ಬೆಳೆದು ನಿಂತಿದ್ದು ಇಡೀ ಭಾರತ ಸಿನಿಮಾ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ.

'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ, ಕನ್ನಡಿಗರಿಗೆ ಚಿರ ಪರಿಚಿತರಾದ ಯಶ್ ನಂತರ ಕಿರಾತಕ ಮೂಲಕ ಹೊಸದಾಗಿ ಸದ್ದು ಮಾಡಿದ್ದರು. ಅಲ್ಲಿಂದ ಮುಂದೆ ಯಶ್ ನಡೆದಿದ್ದೇ ಹಾದಿ ಎನ್ನುವಂತಾಗಿದೆ. ಮಿಸ್ಟರ್ & ಮಿಸ್ಸಸ್ ರಾಮಚಾರಿ ಬಳಿಕ ಯಶ್ ಖದರ್ ಬೇರೆನೇ ಲೆವೆಲ್‌ಗೆ ರೀಚ್ ಆಗಿ ಹೋಗಿತ್ತು. 'ಕೆಜಿಎಫ್' ಬಂದ ನಂತರ, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು ಯಶ್, ಈಗ ತಮ್ಮ ಮತ್ತೊಂದು ಅವತಾರ ತೋರಿಸುತ್ತಿದ್ದಾರೆ!

Bus Driver Son Creating Sound In World Cinema Industry And Discover Who

ಹಾಲಿವುಡ್ ಲೆವೆಲ್ ಸಿನಿಮಾ ಪಕ್ಕಾ?

ಈಗಿನ ಲೆಕ್ಕಾಚಾರಗಳ ಪ್ರಕಾರ ಹಾಗೂ ಯಶ್-19 'ಟಾಕ್ಸಿಕ್' ಫಸ್ಟ್ ಲುಕ್‌ನ ನೋಡುತ್ತಿದ್ರೆ ನಟ ಯಶ್ ಬೇರೆ ಏನೋ ದೊಡ್ಡದಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ, ಈಗ ಹಾಲಿವುಡ್ ರಣರಂಗದಲ್ಲಿ ತಮ್ಮ ಖದರ್ ತೋರಿಸಲು ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಜಾಗತಿಕವಾಗಿ ಖ್ಯಾತಿಯನ್ನ ಪಡೆಯುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಅಭಿಮಾನಿಗಳ ಸಹಿತ, ಭಾರತೀಯ ಸಿನಿಮಾ ಪ್ರೇಮಿಗಳು 'ಟಾಕ್ಸಿಕ್' ಫಸ್ಟ್‌ಲುಕ್‌ಗೆ ಫಿದಾ ಆಗಿದ್ದಾರೆ.

ಹೇಗಿರುತ್ತೆ 'ಟಾಕ್ಸಿಕ್' ಸಿನಿಮಾ ಕಥೆ?

ಏನೇ ಹೇಳಿ, ಇಲ್ಲೊಂದು ವಿಚಾರ ಖಂಡಿತಾ ಇದೆ. ಯಶ್ ತಮ್ಮ ಕೆಲಸದ ಮೇಲೆ ಎಷ್ಟು ಶ್ರದ್ಧೆ ವಹಿಸಿದ್ದಾರೆ ಅಂದ್ರೆ, ಎಲ್ಲವನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಜೊತೆಯಲ್ಲೆ ಕನ್ನಡ ಸಿನಿಮಾಗಳಿಗೂ ಹೊಸ ಗತ್ತು ತಂದುಕೊಡುತ್ತಿದ್ದಾರೆ. ಈಗ, ತಮ್ಮ 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕ, ಗೋವಾ ಡ್ರಗ್ಸ್ ಲೋಕದ 1960-70ರ ಕಥೆಯನ್ನ ಯಶ್ ಹೇಳಲು ಹೊರಟಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+