Monalisa: ಮಹಾ ಕುಂಭದ ಚೆಲುವೆ ಮೊನಾಲಿಸಾಗೆ ಬಾಲಿವುಡ್ ಆಫರ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳೆ ಆರಂಭವಾಗಿ ಒಂದು ವಾರ ಪೂರ್ಣಗೊಂಡಿದೆ. ಈ ಒಂದು ವಾರದಲ್ಲಿ ಕೋಟ್ಯಾಂತರ ಜನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇಲ್ಲಿಗೆ ಆಗಮಿಸುವ ಅನೇಕ ಚಿತ್ರ ವಿಚಿತ್ರ ಭಕ್ತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇವೆ. ಅಲ್ಲದೆ ಇಲ್ಲಿ ರುದ್ರಾಕ್ಷಿ ಹಾಗೂ ಮಣಿ ಮಾರುವ ಹುಡುಗಿ ಮೊನಾಲಿಸಾ ಕೂಡ ರಾತ್ರೋರಾತ್ರಿ ಸ್ಟಾರ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ವಿಷಯ ಅದಲ್ಲ. ಮಹಾ ಕುಂಭದ ಚೆಲುವೆ ಈ ಮೊನಾಲಿಸಾಗೆ ಇದೀಗ ಬಾಲಿವುಡ್ ಆಫರ್ ಬಂದಿದೆಯಂತೆ. ಹಾಗಾದರೆ ಆಫರ್ ಕೊಟ್ಟಿದ್ದು ಯಾರು?
ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ 16 ವರ್ಷದ ಹುಡುಗಿ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಮಹಾಕುಂಭದಲ್ಲಿ ಹಾರ ಮಾರುವ ಈ ಹುಡುಗಿಯ ಕಣ್ಣುಗಳು ಮತ್ತು ನಗು ಎಷ್ಟು ಆಕರ್ಷಕವಾಗಿದೆ ಅಂದರೆ ಆಕೆ ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಆಗಿದ್ದಾಳೆ.

ಮೊನಾಲಿಸಾಳ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಲಕ್ಷಾಂತರ ಲೈಕ್ಸ್ ಬಂದಿದೆ. ಅಲ್ಲದೆ ಜನರು ಆಕೆಯನ್ನು ನೋಡಲು ಮಹಾಕುಂಭಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ. ಮೊನಾಲಿಸಾಳ ಸುಂದರ ಕಣ್ಣುಗಳು ಮತ್ತು ಹೃದಯಸ್ಪರ್ಶಿ ನಗು ಲಕ್ಷಾಂತರ ಜನರ ಗಮನ ಸೆಳೆಯುತ್ತಿದೆ. ಜನಸಂದಣಿಯ ನಡುವೆ ಅವಳು ಹೂಮಾಲೆಗಳನ್ನು ಮಾರುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಯಾರೋ ಒಬ್ಬ ವ್ಯಕ್ತಿ ಆಕೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಷ್ಟೇ ರಾತ್ರೋ ರಾತ್ರಿ ಈಕೆ ಸೋಶಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸಿದ್ದಾಳೆ.
ಮಹಾ ಕುಂಭದ ಚೆಲುವೆ ಮೊನಾಲಿಸಾಗೆ ಬಾಲಿವುಡ್ ಆಫರ್
ಮೊನಾಲಿಸಾ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಕೂಡ ಆಕೆಯನ್ನು ಗಮನಿಸಿದ್ದಾರೆ. ವರದಿಗಳ ಪ್ರಕಾರ ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ತಮ್ಮ ಮುಂಬರುವ ಚಿತ್ರದಲ್ಲಿ ಮೊನಾಲಿಸಾಗೆ ಪ್ರಮುಖ ಪಾತ್ರವನ್ನು ನೀಡಿದ್ದಾರೆ. ಚಿತ್ರದ ಹೆಸರು "ಡೈರಿ ಆಫ್ ಮಣಿಪುರ" ಎಂದು ಹೇಳಲಾಗಿದ್ದು, ಇದರಲ್ಲಿ ಮೊನಾಲಿಸಾ ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಬಹುದು. ಮೊನಾಲಿಸಾಗೂ ನಟನಾ ಅನುಭವವಿಲ್ಲ, ಆದರೆ ಚಲನಚಿತ್ರ ನಿರ್ಮಾಪಕರು ಅವರಿಗೆ ಸಂಪೂರ್ಣ ನಟನಾ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ನಟನಾ ಜಗತ್ತಿಗೆ ಕಾಲಿಡುವ ಈ ಅವಕಾಶ ಮೊನಾಲಿಸಾಗೆ ಕನಸಿಗಿಂತ ಕಡಿಮೆಯಿಲ್ಲ. ಇದು ಸಾಕಾರವಾದರೆ, ಮೊನಾಲಿಸಾ ಅವರ ಬಾಲಿವುಡ್ ವೃತ್ತಿಜೀವನ ಹೊಸ ದಿಕ್ಕನ್ನು ಪಡೆಯಬಹುದು.
ಮೊನಾಲಿಸಾಳಿಗೆ ಹೆಚ್ಚುತ್ತಿರುವ ಜನಪ್ರಿಯತೆಯು ಆಕೆಯನ್ನು ಮಹಾಕುಂಭದಲ್ಲಿ ಸ್ಟಾರ್ ಅನ್ನಾಗಿ ಮಾಡಿದೆ. ಆದರೆ ಈಗ ಆಕೆ ಈ ಜನಸಂದಣಿಯಿಂದ ಬೇಸತ್ತು ಹೋಗಿದ್ದಾಳೆ. ಮಹಾಕುಂಭದಲ್ಲಿ ಅವಳನ್ನು ನೋಡಲು ಜನರು ಸೇರುತ್ತಿದ್ದು, ಆಕೆ ನಿತ್ಯ ಮಣಿ ಮಾರಿ ಗಳಿಸುತ್ತಿದ್ದ 1000 ರೂಪಾಯಿ ಹಣ ಗಳಿಸದಂತಾಗಿದೆ. ಮೊನಾಲಿಸಾ ಸಾರ್ವಜನಿಕ ದೃಷ್ಟಿಯಿಂದ ತನ್ನನ್ನು ಮರೆಮಾಡಿಕೊಳ್ಳಲು ಸ್ಕಾರ್ಫ್ ಹಾಕಿಕೊಳ್ಳಬೇಕಾಗುತ್ತಿದೆ.
ಮೊನಾಲಿಸಾಳ ಅನೇಕ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ ಮತ್ತು ಆಕೆಯ ಸೌಂದರ್ಯವನ್ನು ಎಲ್ಲರೂ ಹೊಗಳುತ್ತಿದ್ದಾರೆ. ಅವರ ಮುಖದಲ್ಲಿನ ಮುಗ್ಧತೆ ಮತ್ತು ನಗು ಜನರ ಹೃದಯವನ್ನು ಗೆದ್ದಿದೆ. ಈಗ ಅವರ ಬಾಲಿವುಡ್ ವೃತ್ತಿಜೀವನದ ಪ್ರಯಾಣ ಪ್ರಾರಂಭವಾಗಲಿದೆ.
ವಿದೇಶಗಳಿಂದಲೂ ಜನರು ಅವರನ್ನು ನೋಡಲು ಮಹಾಕುಂಭಕ್ಕೆ ಬರುತ್ತಿದ್ದಾರೆ. ಮಹಾಕುಂಭದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಮೊನಾಲಿಸಾ ಅವರ ತಾರಾಪಟ್ಟ ಅವರು ಎಂದಿಗೂ ಮರೆಯಲಾಗದ ಪ್ರಯಾಣದ ಆರಂಭವಾಗಬಹುದು. ಈ ಚಿತ್ರದ ಆಫರ್ ಸಾಕಾರವಾದರೆ, ಅದು ಮೊನಾಲಿಸಾಗೆ ಐತಿಹಾಸಿಕ ಕ್ಷಣವಾಗುವುದರಲ್ಲಿ ಅನುಮಾನವೇ ಇಲ್ಲ.
ಸಲ್ಮಾನ್ ಖಾನ್ ಜೊತೆ ನಟಿಸುವ ಆಸೆ
ಜಪಮಾಲಿ ಮಾರುತ್ತಿರುವ ಈ ನೀಲಿ ಕಣ್ಣ ಚಲುವೆ ಮೊನಾಲಿಸಾಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಂದರೆ ತುಂಬಾ ಇಷ್ಟ. ಹೀಗಾಗಿ ಸಲ್ಮಾನ್ ಖಾನ್ ಜೊತೆ ನಟಿಸುವ ಆಸೆಯನ್ನು ಮೊನಾಲಿಸಾ ವ್ಯಕ್ತಪಡಿಸಿದ್ದಾಳೆ. ಐಶ್ವರ್ಯ ಅವರದ್ದೂ ನೀಲಿ ಕಣ್ಣು. ಐಶ್ವರ್ಯ ಅವರ ಕಣ್ಣ ನೋಟಕ್ಕೆ ಮಾರು ಹೋಗದವರಿಲ್ಲ. ಹೀಗೇ ಜಿಪ್ಸಿ ಜನಾಂಗದ ಇಂಧೋರ್ ಸುಂದರಿ ಮೊನಾಲಿಸಾ ಕೂಡ ಮುಂದೆ ಸ್ಟಾರ್ ಆಗಲಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಮೊನಾಲಿಸಾ ಎಮದಿಗೂ ಕೂಡ ಶಾಲೆಗೆ ಹೋಗಿಲ್ಲ. ವಿದ್ಯಾಭ್ಯಾಸ ಇಲ್ಲದ ಹುಡುಕಿ ಮೊನಾಲಿಸಾ. ಈಕೆಯಿಂದ ಸಿನಿಮಾ ಹೇಗೆ ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications