Varun Dhawan: ಹೆಣ್ಣು ಮಗುವಿನ ತಂದೆಯಾದ ಬಾಲಿವುಡ್ ನಟ ವರುಣ್ ಧವನ್
ಬಾಲಿವುಡ್ನ ಸೆಲೆಬ್ರಿಟಿ ಜೋಡಿ ವರುಣ್ ಧವನ್ ಹಾಗೂ ನತಾಶಾ ದಲಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರುಣ್ ಧವನ್ ತಂದೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು, 'ವರುಣ್ಗೆ ಹೆಣ್ಣು ಮಗು ಜನಿಸಿದ್ದು ನಿಜವೇ..?' ಎನ್ನುವ ಪ್ರಶ್ನೆಗೆ 'ಹೌದು' ಎಂದು ಉತ್ತರಿಸಿದ್ದಾರೆ. ಅಲ್ಲದೇ ವರುಣ್ ಧವನ್ ಹಾಗೂ ನತಾಶಾ ದಲಾಲ್ ದಂಪತಿಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಕೊರೊನಾ ಸಮಯದಲ್ಲಿ 2021ರ ಜನವರಿ 24ರಂದು ಮದುವೆ ಆಗಿದ್ದರು.

ವರುಣ್ ಧವನ್ ಮತ್ತು ನತಾಶಾ ದಲಾಲ್ ದಂಪತಿ ಕಳೆದ ಫೆಬ್ರವರಿ 18 ರಂದು ತಂದೆ-ತಾಯಿಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದರು. ವರುಣ್ ದವನ್ ನತಾಶಾ ಅವರ ಬೇಬಿ ಬಂಪ್‌ಗೆ ಮುತ್ತು ಕೊಡುವ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡುವ ಮೂಲಕ ವರುಣ್ ಧವನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.
ಸದ್ಯ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ವರುಣ್ ತಂದೆ ಡೇವಿಡ್ ಧವನ್ ತಾತನಾದ ಬಗ್ಗೆ ಖುಷಿ ಹಂಚಿಕೊಂಡಿದ್ದು, ಸದ್ಯ ವರುಣ್ ಹಾಗೂ ಪತ್ನಿ ನತಾಶಾಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ವರುಣ್ ಧವನ್ ಮತ್ತು ನತಾಶಾ ದಲಾಲ್ ದಂಪತಿಗೆ ಕರಣ್ ಜೋಹರ್ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಈ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕರಣ್ ಜೋಹರ್ 'ನನ್ನ ಮಗುವಿಗೆ ಹೆಣ್ಣು ಮಗುವಾಗಿದೆ. ಶುಭಾಶಯಗಳು ವರುಣ್ ಧವನ್ ಹಾಗೂ ನತಾಶಾ ದಲಾಲ್' ಎಂದಿದ್ದಾರೆ.












Click it and Unblock the Notifications