ಮತ್ತೊಂದು ಸೆಲೆಬ್ರೆಟಿ ಡಿವೋರ್ಸ್: 37 ವರ್ಷದ ದಾಂಪತ್ಯ ಜೀವನ ಅಂತ್ಯ?
ಇತ್ತೀಚಿಗೆ ಸೆಲೆಬ್ರೆಟಿಗಳ ಡಿವೋರ್ಸ್ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೂ ನಟ, ನಟಿಯರ ಡಿವೋರ್ಸ್ ಸುದ್ದಿ ಒಂದಲ್ಲಾ ಒಂದು ಇದ್ದೇ ಇರುತ್ತದೆ. ಇದೀಗ ಹಿರಿಯ ನಟ ಡಿವೋರ್ಸ್ ಪಡೆಯಲು ಮುಂದಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಅವರತ್ತು ವರ್ಷ ದಾಟಿರುವ ನಟ ತಮ್ಮ 37 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.
ಬಾಲಿವುಡ್ ನಟ ಗೋವಿಂದ ಮತ್ತು ಸುನೀತಾ ಅಹುಜಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಜೋಡಿ ವಿಚ್ಛೇದನ ಪಡೆಯಲು ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದ ಗೋವಿಂದ ಮತ್ತು ಸುನೀತಾ 37 ವರ್ಷದ ತುಂಬು ದಾಂಪತ್ಯ ಜೀವನ ಒಟ್ಟಿಗೆ ನಡೆಸಿದ್ದಾರೆ. ಇವರಿಗೆ ಟಿನಾ ಅಜುಜಾ ಮತ್ತು ಯಶವರ್ಧನ್ ಅಹುಜಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.

37 ವರ್ಷ ಸುನೀತಾ ಅಹುಜಾ ಜೊತೆ ಸಂಸಾರ ಮಾಡಿರುವ ಬಾಲಿವುಡ್ ನಟ ಗೋವಿಂದ ಇದೀಗ ಈ ಸಂಬಂಧದಿಂದ ಹೊರಬರಲು ಬಯಸಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಪರಸ್ಪರ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗಿದೆ. ಆದರೆ ನಟನಾಗಲೀ, ಆತನ ಪತ್ನಿಯಾಗಲೀ ಈ ಬಗ್ಗೆ ಅಧೀಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.
ಇನ್ನು ಗೋವಿಂದ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲು ಈ ದಂಪತಿ ಮುಂದಾಗಿರುವ ಬಗ್ಗೆ ಅನೇಕ ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಇದೀಗ ಇದಕ್ಕೆ ಬಲವಾದ ಸಾಕ್ಷಿ ಎನ್ನುವಂತೆ ಅನೇಕ ವಿಚಾರಗಳು ಹೊರ ಬಿದ್ದಿದೆ. ಕೆಲ ತಿಂಗಳ ಹಿಂದೆ ಸುನೀತಾ ಅಹುಜಾ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು. ಈ ವೇಳೆ ತಮಗೆ ನಟ ಗೋವಿಂದ ಅಂತಹ ಪತಿ ಮುಂದಿನ ಯಾವ ಜನ್ಮಕ್ಕೂ ಬೇಡ ಎಂದಿದ್ದರು. ಸುನೀತಾ ಅಹುಜಾ ಅವರ ಈ ಮಾತುಗಳಲ್ಲಿ ಅನೇಕ ಅರ್ಥಗಳಿದ್ದವು.
ಇದಲ್ಲದೇ ಸುನೀತಾ ಅಹುಜಾ ತಮ್ಮ ದಾಂಪತ್ಯ ಬಗ್ಗೆ ಮತ್ತೊಂದು ಮಹತ್ವದ ವಿಚಾರವನ್ನು ಬಿಟ್ಟುಕೊಟ್ಟಿದ್ದರು. ನಾನು ಮತ್ತು ನನ್ನ ಮಕ್ಕಳು ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದೇವೆ. ಪತಿ ಗೋವಿಂದ ಬೇರೆಯಾಗಿ ಒಬ್ಬರೇ ನಮ್ಮದೇ ಇನ್ನೊಂದು ಬಂಗಲೆಯಲ್ಲಿ ವಾಸವಿದ್ದಾರೆ ಎಂದು ತಾವು ದೂರ ದೂರ ಇರುವುದಾಗಿ ಹೇಳಿಕೊಂಡಿದ್ದರು. ಇದರಿಂದ ಗೋವಿಂದ ಮತ್ತು ಸುನೀತಾ ಅಹುಜಾ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಸದ್ಯ 60 ವಯಸ್ಸು ದಾಟಿರುವ ನಟ ಗೋವಿಂದ ಈಗ ವಿಚ್ಛೇದನ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications