Toxic Teaser: ಯಶ್ ಜತೆ ಹಾಟ್ ಅವತಾರದಲ್ಲಿ ಮಿಂಚಿದ ನಟಿ ಯಾರು? ಫ್ಯಾನ್ಸ್ ಹುಡುಕಾಟಕ್ಕೆ ಸಿಕ್ತು ಉತ್ತರ
ಬೆಂಗಳೂರು: ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ಹಾಗೂ ಕರುನಾಡನ್ನು ದೇಶ ವಿದೇಶಗಳಲ್ಲಿ ಸದ್ದು ಮಾಡುವಂತೆ ಮಾಡಿದ, ಪ್ಯಾನ್ ವರ್ಲ್ಡ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರ ಹೊಸ 'ಟಾಕ್ಸಿಕ್' ಸಿನಿಮಾದ ಟೀಸರ್ (Toxic Teaser) ಇಂದು ರಿಲೀಸ್ ಆಗಿದೆ. ಇದರಲ್ಲಿನ ಹಾಟ್ ದೃಶ್ಯದಲ್ಲಿ ಯಶ್ ಜೊತೆಯಾಗಿ ಕಾಣಿಸಿಕೊಂಡ ನಟಿ ಯಾರೆಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ತಡಕಾಡಿದ್ದಾರೆ. ಕೊನೆಗೂ ಈ ನಟಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಐವರು ನಟಿಯರಿದ್ದಾರೆ. ನಟಿಮಣಿಯರು ನೆಗಟಿವ್ ಹಾಗೂ ಪಾಸಿಟಿವ್ ಪಾತ್ರಗಳಿಗೆ ಬಣ್ಣ ಹಚ್ಚಿಸಿದ್ದಾರೆ ಎನ್ನಲಾಗಿದೆ. ಐವರು ನಟಿಯರ ಪೋಸ್ಟರ್‌ಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಆದರೆ ಯಶ್ ಹುಟ್ಟು ಹಬ್ಬ ಪ್ರಯುಕ್ತ (Yash Birthday) ಇಂದು ಜನವರಿ 8ಕ್ಕೆ ಟೀಸರ್ ರಿಲೀಸ್ ಆಗುತ್ತಿದ್ದಂತೆ ಅದರಲ್ಲಿ ಯಶ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡ ಗ್ಲಾಮರ್ ಗೊಂಬೆಯ ಯಾರೆಂಬುದರ ಬಗ್ಗೆಯೇ ಅಭಿಮಾನಿಗಳು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಐವರಿಗಿಂತ ಈ ನಟಿಯ ಮೇಲೆ ಫ್ಯಾನ್ಸ್‌ಗೆ ಆಸಕ್ತಿ ಹೆಚ್ಚಾಗಿದ್ದು ಕಂಡು ಬಂದಿದೆ. ಕೊನೆಗೂ ಉತ್ತರ ಸಿಕ್ಕಿದ್ದು, ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ನಟಿಯ ಹೆಸರು 'ನಟಾಲಿ ಬರ್ನ್' (Natali Burn).

2.51 ನಿಮಿಷಗಳ 'ಟಾಕ್ಸಿಕ್' ಟೀಸರ್ ಅನ್ನು ಪದೇ ಪದೇ ಅಭಿಮಾನಿಗಳು ವೀಕ್ಷಿಸುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಏಳು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಸಾಕಷ್ಟು ಕುತೂಹಲ ಸೃಷ್ಟಿಸಿರುವ ಟೀಸರ್‌ನಲ್ಲಿ ಯಶ್ ಜೊತೆ ಆ ದೃಶ್ಯದಲ್ಲಿರುವುದು ಉಕ್ರೇನಿಯನ್-ಅಮೇರಿಕನ್ ನಟಿ ನಟಾಲಿ ಬರ್ನ್. ಇವರು ಸಹ ಮಾಡೆಲ್ ಆಗಿದ್ದಾರೆ. ಹಲವು ನಿಯಕಾಲಿಕೆಗಳಿಗೆ ಮಾಡೆಲ್ ಆಗಿ ಸಹ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ದಿ ಆಕ್ಟರ್ಸ್ ಸ್ಟುಡಿಯೋ ಆಂಡ್ ದಿ ಟೆಲಿವಿಷನ್ ಅಕಾಡೆಮಿಯ ಸದಸ್ಯೆ ಅಂತಲೂ ಮಾಹಿತಿ ಲಭ್ಯವಾಗಿದೆ.
ಟೀಸರ್‌ನಲ್ಲಿ ಕಾಮೋತ್ತೇಜಕ ದೃಶ್ಯ
ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ 'ಟಾಕ್ಸಿಕ್' (Toxic) ಟೀಸರ್‌ನಲ್ಲಿ ಕಾಮೋತ್ತೇಜಕ ದೃಶ್ಯ ಕಾಣಿಸುತ್ತದೆ. ಯಶ್ (Yash) ಜೊತೆ ಧೈರ್ಯದಿಂದ ಕಾಣಿಸಿಕೊಳ್ಳುವ ಗ್ಲಾಮರ್ ನಟಿ ನಟಾಲಿ ಬರ್ನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಟಾಕ್ಸಿಕ್ ಟೀಸರ್ ಲಿಂಕ್ ಹಂಚಿಕೊಂಡಿದ್ದಾರೆ. ಈ ಹಿಂದೆಯು ಟಾಕ್ಸಿಕ್ ನಲ್ಲಿ ತಾವು ನಟಿಸುವ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದರು. ಸದ್ಯ ನಟಿಯು ಬೋಲ್ಡ್‌ನೆಸ್, ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ ಅಗಿದ್ದಾರೆ.
'ಟಾಕ್ಸಿಕ್' ನಟಿಯರ ಕ್ರೇಜ್
ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್‌ಸ್ಟಾರ್ ಮೈಂಡ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿದ್ಧವಾಗುತ್ತಿದೆ. ಕಳೆದೊಂದು ವಾರದಿಂದ ಚಿತ್ರತಂಡವು ಟಾಕ್ಸಿಕ್‌ನ ನಟಿಸಿದ ಐವರು ನಟಿಯ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು. ಪಾತ್ರ ಹೆಸರುಗಳನ್ನು ಪರಿಚಯಿಸಿತು. ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ನಟಿಯರ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಅವರ ಫಾಲೋವರ್ಸ್ ಸಂಖ್ಯೆ ಸಹ ಹೆಚ್ಚಾಗಿದೆ. ಐವರಾದ 'ತಾರಾ ಸುತಾರಿಯಾ, ಕನ್ನಡದ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ' ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರೊಂದಿಗೆ ಟೀಸರ್‌ನಲ್ಲಿನ ಕಾಮಪ್ರಚೋದಕ ಸುಂದರಿ ನಟಾಲಿ ಬರ್ನ್ ಅವರು ಸಹ ಸಖತ್ ಸದ್ದು ಮಾಡುತ್ತಿದ್ದಾರೆ.
ಸದ್ಯ ಟೀಸರ್ ರಿಲೀಸ್ ಆಗಿದ್ದು, ಶೀಘ್ರವೇ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಒಂದರ ಹಿಂದೊಂದರಂತೆ ಹಾಡುಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ. ಟಾಕ್ಸಿಕ್ ಸಿನಿಮಾ ಇದೇ ವರ್ಷ 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.












Click it and Unblock the Notifications