ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನಿಮಾಗಳ ದರ್ಬಾರ್: ಕಾಂತಾರಾ, ಕೆಜಿಎಫ್‌ಗೆ ವಿಜಯೇಂದ್ರ ಸ್ಪೆಷಲ್ ವಿಶ್
ಬೆಂಗಳೂರು, ಆಗಸ್ಟ್ 16: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಒಂದಲ್ಲಾ, ಎರಡಲ್ಲಾ ಮೂರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಎರಡು ಪ್ರಶಸ್ತಿಗಳು ಕಾಂತಾರ ತಂಡದ ಪಾಲಾಗಿದೆ. ಮತ್ತೊಂದು ಪ್ರಶಸ್ತಿ ಕೆಜಿಎಫ್ ತಂಡಕ್ಕೆ ಸಿಕ್ಕಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ಕಾಂತಾರ ಸಿನಿಮಾಗೆ ಮನರಂಜನಾ ಸಿನಿಮಾ ಪ್ರಶಸ್ತಿಗೆ ದೊರೆತಿದೆ.
ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಎರಡೂ ಚಿತ್ರಗಳಿಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟವಾಗಿದ್ದು ಕನ್ನಡದ ಕಾಂತಾರ ಎಲ್ಲ ಭಾಷೆಗಳ ಚಿತ್ರಗಳನ್ನೂ ಮೀರಿ, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅದೇ ರೀತಿ ಇದೇ ಚಿತ್ರದ ನಟನೆಗೆ ನಟ ರಿಶಬ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ವಿಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು, ಈ ಇಬ್ಬರೂ ಭರವಸೆಯ ನಟರಿಗೆ ಹಾಗೂ ನಿರ್ದೇಶಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾಡಿನ ಪ್ರಕೃತಿ, ಸ್ಥಳೀಯ ಸೊಗಡು ದೈವಾರಾಧನೆಯ ಶ್ರೀಮಂತ ಪರಂಪರೆಯನ್ನು ಅದ್ಭುತವಾಗಿ ಚಿತ್ರೀಕರಿಸಿ, ವಿಶ್ವದೆಲ್ಲೆಡೆ ತನ್ನ ಕೀರ್ತಿ ಪಸರಿಸಿರುವ ಕಾಂತಾರ ಚಿತ್ರತಂಡಕ್ಕೆ ಹಾಗೂ ಕನ್ನಡಿಗರ ಕೀರ್ತಿ ಹೆಚ್ಚಿಸಿದ ಕೆಜಿಎಫ್ -2 ಚಿತ್ರತಂಡಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬಿ.ವೈ ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡಕ್ಕೆ ಮೂರು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ
ಪ್ರಶಾಂತ್ ನೀಲ್ ನಿರ್ದೇಶನದ ನಟ ಯಶ್ ಅಭಿನಯದ ಕೆಜಿಎಫ್ ಸರಣಿ ಸಿನಿಮಾಗಳ ಪೈಕಿ ಕೆಜಿಎಫ್ 2ಗೆ ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ' ವಿಭಾಗದಲ್ಲಿ ಹಾಗೂ ಅತ್ಯತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ. ಇನ್ನು ಕರಾವಳಿ ಸಂಸ್ಕೃತಿ ಅಲ್ಲಿನ ಧೈವಾರಾಧನೆ ಕುರಿತು ಕಾಂತಾರ ಸಿನಿಮಾ ನಿರ್ದೇಶಿಸಿ, ತಾವೇ ನಟಿಸಿರುವ ರಿಷಬ್ ಶೆಟ್ಟಿ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿಪಡೆದುಕೊಂಡಿದ್ದಾರೆ. ಇನ್ನೂ ಕನ್ನಡದ ಅತ್ಯುತ್ತಮ ಮನರಂಜನಾ ಚಿತ್ರ ಎಂದು ಕಾಂತಾರಗೆ ಪ್ರಶಸ್ತಿ ಘೋಷಿಸಲಾಗಿದೆ. ಅತ್ಯುತ್ತಮ ತಮಿಳು ಸಿನಿಮಾ ವಿಭಾಗದಲ್ಲಿ ಪೊನ್ನಿಯಿನ್ ಸೆಲ್ವನ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಡೆದ ಇತರ ಪ್ರಮುಖರ ವಿವರ ಇಲ್ಲಿವೆ
ಉತ್ತಮ ನಿರ್ದೇಶಕ: ಸೂರಜ್ ಭರ್ಜತ್ಯ (ಉಂಚಯ್)
ಅತ್ಯುತ್ತಮ ನಟಿ: ನಿತ್ಯ ಮೆನನ್ (ತಿರುಚಿತ್ರಂಬಲಂ), ಮಾನಸಿ ಪರೇಖ್ (ಕಲ್ ಎಕ್ಸ್‌ಪ್ರೆಸ್)
ಅತ್ಯುತ್ತಮ ಚಲನಚಿತ್ರ: ಆಟ್ಟಂ (ಮಲಯಾಳ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್ ಭಾರಧ್ವಜ್ (ಪುರ್ಸತ್)
ಅತ್ಯುತ್ತಮ ಪೋಷಕ ನಟ: ನೀನಾ ಗುಪ್ತಾ (ಉಂಚಯ್), ಪವನ್ ಮಲ್ಲೋತ್ರಾ (ಪೌಜಾ)
ಅತ್ಯುತ್ತಮ ಸಾಕ್ಷ್ಯಚಿತ್ರ: ಮರ್ಮಸ್್ರ ಆಫ್ ದಿ ಜಂಗಲ್ (ಸೋಹಿಲ್ ವೈದ್ಯ)
ಅತ್ಯುತ್ತಮ ಸಂಕಲನ: ಸುರೇಶ್ ಅರಸ್ (ಮಧ್ಯಂತರ)












Click it and Unblock the Notifications