ನಟಿ ರಚಿತಾ ರಾಮ್‌ಗೆ ವೇದಿಕೆ ಮೇಲೆ ತಿರುಗೇಟು ಕೊಟ್ಟ ಹನುಮಂತ: ಆಗಿದ್ದೇನು?
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಜನ್ 11ರ ವಿನ್ನರ್ ಹನುಮಂತ ಮೊದಲಿನಿಂದಲೂ ಕನ್ನಡ ಕಿರುತೆರೆಯ ಚಿರಪರಿಚಿತ ಮುಖ. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಹಾಡುಗಾರನಾಗಿ ಬಂದ ಹನುಮಂತ ಬಳಿಕ ಸಾಲು ಸಾಲು ಕನ್ನಡ ಕಿರುತೆರೆ ಶೋಗಳಲ್ಲಿ ಭಾಗಿಯಾಗಿ ಇದೀಗ ಬಿಗ್ ಬಾಸ್ ಕನ್ನಡ ಸೀಜನ್ 11ರ ವಿನ್ನರ್ ಆಗಿದ್ದಾರೆ. ಅಲ್ಲದೇ ಹೊಸ ಕಾರ್ಯಕ್ರಮ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ಸ್ಪರ್ಧಿಯಾಗಿದ್ದಾರೆ.
ಹನುಮಂತ ಈ ಬಾರಿಯ ಬಿಗ್ ಬಾಸ್ ಕನ್ನಡ ಗೆಲ್ಲಲು ಪ್ರಮುಖ ಕಾರಣ ಎಂದರೆ ಆತನ ವ್ಯಕ್ತಿತ್ವ. ನೇರ ನುಡಿ, ಸಾದ-ಸೀದ ಹಳ್ಳಿ ಹುಡುಗನ ಮುಗ್ಧತೆಗೆ ಮನಸೋತ ಕನ್ನಡಿಗರು ಸಂಪೂರ್ಣ ಬೆಂಬಲ ನೀಡಿ ಬರೋಬ್ಬರಿ ಐದು ಕೋಟಿಗೂ ಅಧಿಕ ಮತಗಳನ್ನು ನೀಡಿ ಬಿಗ್ ಬಾಸ್ ಟ್ರೋಫಿ ಹಿಡಿಯುವಂತೆ ಮಾಡಿದರು.

ಬಿಗ್ ಬಾಸ್‌ಗೆ ವಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ ಬಂದಿದ್ದ ಹನುಮಂತ ಕಿರುತೆರೆ ಶೋಗೆ ಹೊಸಬರೇನಲ್ಲಾ, ಸರಿಗಮಪ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದ ಹನುಮಂತ ಬಳಿಕ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಸದಾ ಲುಂಗಿಯುಟ್ಟುಕೊಳ್ಳುತ್ತಿದ್ದ ಹನುಮಂತ ಈ ಭರ್ಜರಿ ಬ್ಯಾಚುಲರ್ಸ್ ಶೋಗಾಗಿ ಕೊಂಚ ಬದಲಾಗಿದ್ದರು. ಸ್ಟೈಲಿಶ್ ಡ್ರೆಸ್, ಸೂಟು ಬೂಟು ತೊಟ್ಟು ಹುಡುಗಿಯರ ಜೊತೆ ರ್ಯಾಂಪ್ ವಾಕ್ ಕೂಡ ಮಾಡಿದ್ದರು.
ಯಾವುದೇ ತೀರ್ಪುಗಾರರು ಎದುರು ಯಾರೇ ಇದ್ದರೂ ಹನುಮಂತ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿ. ಈ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ವೇಷಭೂಷಣ ಬದಲಾದರೂ ಹನುಮಂತ ವ್ಯಕ್ತಿತ್ವ ಹಾಗೇ ಇತ್ತು ಎನ್ನುವುದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೋವೊಂದು ವೈರಲ್ ಆಗುತ್ತಿದೆ.

ಭರ್ಜರಿ ಬ್ಯಾಚುಲರ್ಸ್ ಶೋನ ಒಂದು ಸಂಚಿಕೆಯಲ್ಲಿ ತೀರ್ಪುಗಾರರಾದ ಡಿಂಪಲ್ ಕ್ಷೀನ್ ರಚಿತಾ ರಾಮ್ ವೇದಿಕೆಯಲ್ಲಿ ಸ್ಪರ್ಧಿಗಳ ಬಗ್ಗೆ ಮಾತನಾಡುವಾಗ, ಐಶ್ವರ್ಯ ನೀವು ಬಹಳ ಡಾರ್ಕ್ ಆಗಿ ಕಾಣಿಸುತ್ತಿದ್ದೀರಾ, ಗ್ಲ್ಯಾಮರ್ ಆಗಿರಿ. ಬಹುಶಃ ನಮ್ಮ ಹನುಮಂತ ಅವರ ಬಣ್ಣಕ್ಕೆ ಹೊಂದಿಕೆ ಮಾಡಿಕೊಳ್ಳಲು ಹೀಗೆ ಮಾಡಿರಬಹುದೇನೋ. ಅಲ್ವಾ ಹನುಮಂತ ಎಂದು ರಚಿತಾ ರಾಮ್ ಪ್ರಶ್ನಿಸಿದ್ದಾರೆ. ಇದಕ್ಕೆ ಹನುಮಂತ ಹೌದು ಅಕ್ಕ ಎಂದು ಉತ್ತರಿಸಿದ್ದಾರೆ.
ಬಹುಶಃ ಅವನಿಗೆ ಪ್ರತಿ ಟಾಸ್ಕ್‌ನಲ್ಲಿ ಪೇಮೆಂಟ್ ಇದ್ದರೆ ಸ್ವಲ್ಪ ಗಂಭೀರವಾಗಿ ಮಾಡುತ್ತಾನೆ ಅನಿಸುತ್ತದೆ ಎಂದು ರಚಿತಾ ರಾಮ್ ಹೇಳಿದ್ದು, ಪೇಮೆಂಟ್ ಇದೆ ಆದರೆ ಸೋಲುವ ಟಾಸ್ಕ್ ಅನ್ನೇ ಅವರು ಕೊಡುತ್ತಾರೆ ಎಂದು ಹನುಮಂತ ಉತ್ತರಿಸಿದ್ದಾರೆ.
ಒಂದು ಮೇಕಪ್ ಮಾಡಲು ಆಗಲ್ವಾ ನಿಂಗೆ? ಏನೋ ಒಂದು ಹೇಳುತ್ತಾ ಇರುತ್ತೀಯಾ ಯಾವಾಗಲು ಹನುಮಂತ ನೀನು ಎಂದು ರಚಿತಾ ರಾಮ್ ಹೇಳಿದ್ದು, ಈ ವೇಳೆ ಏನೋ ಒಂದು ಹೇಳಲೆಂದೇ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಎಲ್ಲರ ಮುಂದೆ ರಚಿತಾ ರಾಮ್‌ಗೆ ನೇರವಾಗಿ ಹನುಮಂತ ತಿರುಗೇಟು ನೀಡಿದ್ದಾರೆ. ಹನುಮಂತನ ಉತ್ತರ ಕೇಳಿ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದಾರೆ. ಭರ್ಜರಿ ಬ್ಯಾಚುಲರ್ ಶೋನ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ಹನುಮಂತ ರಾಕ್, ರಚಿತಾ ರಾಮ್ ಶಾಕ್, ನೇರ ನುಡಿ ಹನುಮಂತ, ಎಲ್ಲರ ಬಣ್ಣ ಬಯಲು ಮಾಡ್ತಾನೆ ಹನುಮಂತ ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications