Bigg Boss: ಮೋಕ್ಷಿತಾಗೆ ಒಳ್ಳೆಯ ಫಿಗರ್ ಎಂದ ತ್ರಿವಿಕ್ರಮ್
ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಫ್ಯಾನ್ಸ್ ಬಂದು ಗೆಲುವಿನ ಉತ್ಸಾಹ ಹೆಚ್ಚಿಸಿದ್ದಾರೆ. ಅಭಿಮಾನಿಗಳ ಮುಂದೆ ಸ್ಪರ್ಧಿಗಳು ತಮ್ಮನ್ನು ತಾವು ಕೊಂಡಾಡಿಕೊಂಡಿದ್ದಾರೆ. ಈ ಬಾರಿ ಕಪ್ ನಂದೆ ಎಂದು ಹೇಳಿಕೊಂಡು ಸಂತೋಷ ವ್ಯಕ್ತಪಡಿಸಿದ್ದು ಕಂಡು ಬಂತು. ಅಲ್ಲದೆ ತಮ್ಮ ಜೊತೆಗಿರುವ ಸ್ಪರ್ಧಿಗಳ ಬಗ್ಗೆ ಕೂಡ ಕೆಲವರು ಮಾತನಾಡಿದ್ದು ವಿಶೇಷವಾಗಿ ತ್ರಿವಿಕ್ರಮ್ ಮೋಕ್ಷಿತಾ ಅವರನ್ನು ಫಿಗರ್ ಎಂದು ಕರೆದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಹೌದು... ತ್ರಿವಿಕ್ರಮ್ ಭ್ಯವಾ ಗೌಡ ಅವರನ್ನು ಪ್ರೀತಿಸುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ಬಿಗ್‌ಬಾಸ್ ಮನೆಗೆ ಬಂದಿದ್ದ ಭವ್ಯಾ ಪೋಷಕರು ಹಾಗೂ ತ್ರಿವಿಕ್ರಮ್ ಪೋಷಕರಿಂದಲೂ ಇವಿರಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಇವರಿಬ್ಬರು ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಮದುವೆ ಮಾಡಿಕೊಳ್ಳುತ್ತಾರೆ ಎನ್ನುವ ಗುಮಾನಿ ಕೂಡ ಹಬ್ಬಿದೆ. ಹೀಗಿರುವಾಗ ತ್ರಿವಿಕ್ರಮ್ ಮೋಕ್ಷಿತಾ ಅವರಿಗೂ ಲೈನ್ ಹೊಡೆದಿದ್ದಾರೆ.

ಮೋಕ್ಷಿತಾಗೆ ಒಳ್ಳೆಯ ಫಿಗರ್ ಎಂದ ತ್ರಿವಿಕ್ರಮ್
ಬಿಗ್‌ಬಾಸ್ ಮನೆಗೆ ಅಭಿಮಾನಿಗಳು ಬಂದ ಸಂದರ್ಭದಲ್ಲಿ ತ್ರಿವಿಕ್ರಮ್ ಅವರು ಮೋಕ್ಷಿತಾ ಬಗ್ಗೆ ಮಾತನಾಡುವಾಗ, 'ನನ್ನ ಧಾರವಾಹಿಯೊಂದಿಗೆ ಮೋಕ್ಷಿತಾ ಅವರ ಧಾರವಾಹಿ ಕೂಡ ಬರುತ್ತಿತ್ತು. ಏನ್ ಬರ್ತಾಯಿದೆ ಅಂತ ನೋಡೋಣ ಅಂತ ನೋಡಿದ್ರೆ ಒಳ್ಳೆ ಫಿಗರ್ ಬರ್ತಾಯಿತ್ತು' ಎಂದು ಹೇಳಿದ್ದಾರೆ.
ಇದನ್ನು ಕೇಳಿ ಅವರ ಫ್ಯಾನ್ಸ್ ಶಿಳ್ಳೆ ಹೊಡೆದು ಘೋಷಣೆಗಳನ್ನು ಕೂಗಿದ್ದಾರೆ. ಇನ್ನೂ ಬಿಗ್‌ಬಾಸ್ ಟ್ರೋಫಿ ಗೆಲ್ಲುವ ರೇಸ್‌ನಲ್ಲಿ ತ್ರಿವಿಕ್ರಮ್ ಮುಂಚುಣಿಯಲ್ಲಿದ್ದು ಅಭಿಮಾನಿಗಳು 'ವಿನ್ನರ್.. ವಿನ್ನರ್..' ಎಂದು ಕೂಗಿದ್ದಾರೆ. ಈ ಘೋಷಣೆಗಳನ್ನು ಕೇಳಿದ ತ್ರಿವಿಕ್ರಮ್‌ಗೆ ಭಾರೀ ಖುಷಿ ಆಗಿದೆ. ಹೀಗಾಗಿ ಸಿಕ್ಕಾಪಟ್ಟೆ ಸಿನಿಮಾ ರೀತಿಯ ಡೈಲಾಗ್‌ಗಳನ್ನು ಹೊಡೆದಿದ್ದಾರೆ. ಇದೇ ವೇಳೆ ಬಿಗ್‌ಬಾಸ್ ಮನೆಗೆ ಆಗಮಿಸಿದ ಅಭಿಮಾನಿಗಳಿಗೆ ಓಟ್ ಮಾಡಿ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.
ತ್ರಿವಿಕ್ರಮ್‌ರನ್ನ ಕೊಂಡಾಡಿದ ಬಿಗ್‌ಬಾಸ್
ಈ ಹಿಂದೆ ಬಿಗ್‌ಬಾಸ್‌ಗೆ ತ್ರಿವಿಕ್ರಮ್ ಅಪ್ಪನ ಸ್ಥಾನದಲ್ಲಿ ನಿಂತುಕೊಂಡು ಒಂದು ಪತ್ರ ಬರೆಯಿರಿ ಎಂದು ಮನವಿ ಮಾಡಿದ್ದರು. ಕಳೆದ ದಿನ ಆ ಪತ್ರವನ್ನು ತ್ರಿವಿಕ್ರಮ್ ತಮ್ಮ ಅಭಿಮಾನಿಗಳ ಮುಂದೆ ಓದಿದರು. ಪತ್ರದಲ್ಲಿ ಬಿಗ್‌ಬಾಸ್ ತ್ರಿವಿಕ್ರಮ್ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ.
ಈ ಪತ್ರದಲ್ಲಿ ಬಿಗ್‌ಬಾಸ್, 'ತ್ರಿವಿಕ್ರಮ್ ತನ್ನವರ ಗೆಲುವಿಗಾಗಿ ನಿಸ್ವಾರ್ಥವಾಗಿ ಆಡಿದ್ದಾರೆ' ಎಂದಿದ್ದಾರೆ. ಆದರೆ ಈ ಹಿಂದೆ ತ್ರಿವಿಕ್ರಮ್ ಮಂಜು ಜೊತೆಗೆ ಡೀಲ್ ಮಾಡಿಕೊಂಡು ಭವ್ಯಾ ಅವರನ್ನು ಹೀನಾಯವಾಗಿ ಸೋಲಿಸಿದ್ದರು. ಹೀಗಾಗಿ ಬಿಗ್‌ಬಾಸ್ ಪತ್ರದಲ್ಲಿ ತ್ರಿವಿಕ್ರಮ್ ಬಗ್ಗೆ ಹೆಚ್ಚಾಗಿ ಹೊಗಳಿದ್ರಾ ಎನ್ನುವ ಪ್ರಶ್ನೆ ಮೂಡಿದೆ.
ಗ್ರ್ಯಾಂಡ್ ಫಿನಾಲೆಗೆ ಒಂದೇ ದಿನ ಬಾಕಿ
ಇನ್ನೂ ಗ್ರ್ಯಾಂಡ್ ಫಿನಾಲೆಗೆ ಒಂದೇ ದಿನ ಬಾಕಿ ಇದ್ದು ನಾಳೆ ಅಂದರೆ ಶನಿವಾರ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಸ್ಪರ್ಧಿಗಳು ಇದಕ್ಕಾಗಿ ಸಜ್ಜಾಗುತ್ತಿದ್ದರೆ, ಇತ್ತ ಅಭಿಮಾನಿಗಳಿಂದ ವಿಡಿಯೋಗಳು ರೀಲ್ಸ್‌ಗಳು ಹೆಚ್ಚಾಗುತ್ತಿವೆ. ಈ ಬಾರಿ ವಿನ್ನರ್ ಯಾರು ಎನ್ನುವ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹನುಮಂತ ಹಾಗೂ ತ್ರಿವಿಕ್ರಮ್ ಪರ ಕ್ಯಾಂಪೇನ್ ಶುರುವಾಗಿದ್ದು ಅಭಿಮಾನಿಗಳು ಮತ ಹಾಕಲು ಮನವಿ ಮಾಡುತ್ತಿದ್ದಾರೆ. ಒಂದೆಡೆ ಕಿರುತೆರೆ ಧಾರವಾಹಿಯ ತಾರೆಯರೂ ಕೂಡ ಮತಯಾಚನೆ ಶುರು ಮಾಡಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications