Bigg Boss: ಮನೆಗೆ ಹೋಗಲು ಸಿದ್ದ ಗೌತಮಿ ಜೊತೆ ಮಾತ್ರ ಆಡಲ್ಲ ಎಂದ ಮೋಕ್ಷಿತಾ: ಒಂದಾಗ್ತಾರಾ ಕುಚುಕು ಗೆಳತಿಯರು?
ಬಿಗ್‌ಬಾಸ್ ಮನೆಯ ಎರಡು ತಂಡಗಳಲ್ಲಿ ಧನ್‌ರಾಜ್ ಟೀಂ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದೆ. ಗೆದ್ದ ತಂಡ ಎದುರಾಳಿ ತಂಡದ ಒಬ್ಬರ ಸಹಾಯ ತೆಗೆದುಕೊಂಡು ಕ್ಯಾಪ್ಟನ್ಸಿ ಆಟವನ್ನು ಆಡಬೇಕು. ಇದಕ್ಕಾಗಿ ಎಲ್ಲರೂ ಎದುರಾಳಿ ತಂಡದ ಒಬ್ಬೊಬ್ಬ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೋಕ್ಷಿತಾಗೆ ಉಳಿದಿರುವುದು ಗೌತಮಿ ಮಾತ್ರ. ಆದರೆ ಮೋಕ್ಷಿತಾ ಗೌತಮಿಯನ್ನು ಆಯ್ಕೆ ಮಾಡಲು ಸಿದ್ದರಿಲ್ಲ. ನಾನು ಮನೆಯಿಂದ ಇವತ್ತೇ ಹೊರಗಡೆ ಹೋಗಲು ರೆಡಿ ಆದರೆ ಗೌತಮಿ ಜೊತೆ ಮಾತ್ರ ಕ್ಯಾಪ್ಟನ್ಸಿ ಆಟ ಆಡಲ್ಲ ಎಂದು ಹಠ ಹಿಡಿದಿದ್ದಾರೆ. ಇಂದಿನ ಸಂಚಿಕೆಯ ಪ್ರೋಮೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು.... ಕಳೆದ ದಿನ ಗೆದ್ದ ತಂಡದ ರಜತ್ ಸೋತ ತಂಡದ ತ್ರಿವಿಕ್ರಮ್ ಅವರ ಬಳಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಸಹಾಯ ಪಡೆದುಕೊಂಡಿದ್ದಾರೆ. ಹಾಗೇ ಶಿಶಿರ್-ಭವ್ಯಾ, ಹನುಮಂತ-ಮಂಜು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದಿರುವುದು ಗೌತಮಿ ಹಾಗೂ ಮೋಕ್ಷಿತಾ ಮಾತ್ರ. ಕೆಲ ದಿನಗಳ ಹಿಂದೆ ಒಂದಾಗಿದ್ದ ಮಂಜು, ಮೋಕ್ಷಿತಾ ಹಾಗೂ ಗೌತಮಿ ಮಹಾರಾಜಾ ಟಾಸ್ಕ್‌ನಲ್ಲಿ ದೂರವಾಗಿದ್ದಾರೆ. ಹೀಗಾಗಿ ಮೋಕ್ಷಿತಾ ಗೌತಮಿ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಲು ಸಿದ್ದರಿಲ್ಲ.

ಗೌತಮಿ ಜೊತೆ ಆಡಲ್ಲ ನಾಳೆ ಮನೆಗೆ ಹೋಗೋಕೆ ರೆಡಿ ಎಂದ ಮೋಕ್ಷಿತಾ
ಮೋಕ್ಷಿತಾ ಮಾತ್ರ ಗೌತಮಿ ಬಳಿ ಹೋಗಿ ನಾನು ಮಾತನಾಡಲ್ಲ ಎಂದು ಹೇಳುತ್ತಿದ್ದಾರೆ. ಫಸ್ಟ್ ಟೈಮ್ ನಾನು ಕ್ಯಾಪ್ಟನ್ ಆಡ್ತಾಯಿದಿನಿ ಅದ್ರಲ್ಲೂ ನಾನು ಗೌತಮಿ ಸಹಾಯ ತೆಗೆದುಕೊಂಡು ಕ್ಯಾಪ್ಟನ್ ಆದರೆ ನನಗೆ ಅದು ಇಷ್ಟ ಆಗಲ್ಲ ಎಂದು ಮೋಕ್ಷಿತಾ ಹೇಳುತ್ತಿದ್ದಾರೆ.
ಮನೆಯ ಪ್ರತಿಯೊಬ್ಬ ಸದಸ್ಯರು ಒಬ್ಬೊಬ್ಬರನ್ನು ಆಯ್ಕೆ ಮಾಡಿಕೊಂಡು ಆಗಿದೆ. ಈಗ ಉಳಿದ ವ್ಯಕ್ತಿ ಅಂದರೆ ಗೌತಮಿ ಮಾತ್ರ. ಆದರೆ ಮೋಕ್ಷಿತಾ ಮಾತ್ರ ಗೌತಮಿಯವರೊಂದಿಗೆ ಆಡಲು ಸಿದ್ದರಿಲ್ಲ. ಜೊತೆಗೆ ಮೋಕ್ಷಿತಾ ಅವರ ಜೊತೆಗೆ ಆಡುವ ಸದಸ್ಯರನ್ನು ಯಾರೂ ಕೂಡ ಬಿಟ್ಟು ಕೊಟ್ಟು ಗೌತಮಿಯವರನ್ನು ತಮ್ಮೊಂದಿಗೆ ಆಡಲು ಕರೆದುಕೊಳ್ಳುತ್ತಿಲ್ಲ. ಹೀಗಾಗಿ ಮೋಕ್ಷಿತಾ ಜೋಡಿ ಸೆಲೆಕ್ಟ್ ಮಾಡುವವರೆಗೂ ಕ್ಯಾಪ್ಟನ್ಸಿ ಆಟ ನಡೆಯುವುದಿಲ್ಲ ಎಂದು ಕಾಣಿಸುತ್ತಿದೆ.

ಮೋಕ್ಷಿತಾಗೆ ಬಿಗ್ ಶಾಕ್ ಕೊಟ್ಟ ಬಿಗ್‌ಬಾಸ್
ಅಲ್ಲದೆ ಮೋಕ್ಷಿತಾ ಅವರಿಗೆ ಬಿಗ್‌ಬಾಸ್ ನಿಮ್ಮ ನಿರ್ಧಾರದಿಂದ ದೊಡ್ಡ ಬೆಲೆ ಕಟ್ಟಬೇಕಾಗುತ್ತದೆ ಎಂದು ಕೂಡ ಹೇಳಿ ಟ್ವಿಸ್ಟ್ ಬೇರೆ ಕೊಟ್ಟಿದ್ದಾರೆ. ಮೋಕ್ಷಿತಾ ಅವರ ನಿರ್ಧಾರ ಒಂದು ರೀತಿ ಸರಿಯಾಗೇ ಇದೆ. ಯಾಕೆಂದರೆ ಗೌತಮಿ ಹಾಗೂ ಮಂಜು ಜೊತೆಗೆ ಮೋಕ್ಷಿತಾ ಇದ್ದಾಗ ಇಂಡಿಪೆಂಡೆನ್ಸ್ ಆಟ ಆಡಲು ಮೋಕ್ಷಿತಾ ಆ ತಂಡದಿಂದ ಹೊರ ಬಂದಿದ್ದಾರೆ. ಈಗ ಕ್ಯಾಪ್ಟನ್ ಟಾಸ್ಕ್ ಅಲ್ಲಿ ಗೌತಮಿ ಜೊತೆ ಆಡುವುದು ಮತ್ತೆ ತಂಡದಲ್ಲಿ ಹೋಗಿ ಸೇರಿಕೊಂಡಂತಾಗುತ್ತದೆ.
ಒಂದು ವೇಳೆ ಮೋಕ್ಷಿತಾ ಈ ಟಾಸ್ಕ್ ಅಲ್ಲಿ ಗೆದ್ದರೆ ಗುಂಪುಗಾರಿಕೆಯಿಂದ ಹೊರಬಂದು ಆಡಿದ್ದಕ್ಕೆ ನಾನು ಗೆದ್ದೆ ಎಂದು ಹೇಳಲು ಆಗೋದೇ ಇಲ್ಲ. ಹೀಗಾಗಿ ಇಂದಿನ ಪ್ರೋಮೋ ಮಾತ್ರ ತುಂಬಾ ಇನ್‌ಟ್ರಸ್ಟಿಂಗ್ ಆಗಿದೆ. ಮೋಕ್ಷಿತಾ ಗೌತಮಿ ಜೊತೆಗೆ ಆಡ್ತಾರಾ ಅಥವಾ ಇಲ್ವಾ ಅನ್ನೋ ಕೂತೂಹಲ ಮೂಡಿದೆ. ಅಥವಾ ಬೇರೆ ಸ್ಪರ್ಧಿಗಳು ತಮ್ಮೊಂದಿಗೆ ಆಡುವ ಎದುರಾಳಿ ತಂಡದ ಸದಸ್ಯರನ್ನು ಚೇಂಜ್ ಮಾಡಿಕೊಳ್ತಾರಾ ಕಾದು ನೋಡಬೇಕಿದೆ.












Click it and Unblock the Notifications