Bigg Boss: ಫಸ್ಟ್ ಟೈಮ್ ಅಡುಗೆ ಮಾಡಿದ ಲಾಯರ್ ಜಗದೀಶ್: ತಿಂದವರಿಗೆ ಏನಾಯ್ತು?

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ಲಾಯರ್ ಜಗದೀಶ್ ಅವರು ಫಸ್ಟ್ ಟೈಮ್ ಅಡುಗೆ ಮಾಡಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯ ಸವಿರುಚಿ ಕಾರ್ಯಕ್ರಮದಲ್ಲಿ ಜಾನವಿ ಜೊತೆಗೆ ಜಗದೀಶ್ ಅಡುಗೆ ತಯಾರಿಸಿದ್ದಾರೆ. ಆ ವಿಶೇಷ ಖಾದ್ಯದ ಹೆಸರು 'ಜಗ್ಗು ಆಂಡ್ ಜಾನ್ಸ್ ಬದನೆಕಾಯಿ ಗೊಜ್ಜು'.

ಸವಿರುಚಿ ಕಾರ್ಯಕ್ರಮದಲ್ಲಿ ಜಾನವಿ ನಿರೂಪಕಿ. ಆದರೆ ಇಂದಿನ ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ಅವರೇ ನಿರೂಪಕರಾಗಿ ಜಾನವಿ ಕೈಯಲ್ಲಿ ಅಡುಗೆ ಮಾಡಿಸಿದ್ದಾರೆ. ಅದಕ್ಕೆ ಜಾನ್ವಿ ಈ ವಿಶೇಷ ಖಾದ್ಯಕ್ಕೆ ಜಗ್ಗು ಆಂಡ್ ಜಾನ್ಸ್ ಬದನೆಕಾಯಿ ಗೊಜ್ಜು ಎಂದು ಹೆಸರು ಇಟ್ಟರು. ಹಾಗಾದರೆ ಜಾನವಿ ಹಾಗೂ ಜಗದೀಶ್ ತಯಾರಿಸಿದ ಬದನೆಕಾಯಿ ಗೊಜ್ಜು ಹೇಗಿತ್ತು ಅಂತ ತಿಳಿಯೋಣ.

Bigg Boss Lawyer Jagadish cooked for the first time

ಬೇಕಾಗುವ ಪದಾರ್ಥಗಳು:-

ಮೆಣಸಿನಕಾಯಿ 10

ಬೆಂಡೆಕಾಯಿ 5

ಬದನೆಕಾಯಿ 8

ಈರುಳ್ಳಿ 2

ಟೊಮೆಟೊ 2

ನಿಂಬೆಹಣ್ಣು 1

ಎಣ್ಣೆ

ಬೆಳ್ಳುಳ್ಳಿ 5 ಎಸಳು

ಹುಣುಸೆ ಹಣ್ಣು ಸ್ವಲ್ಪ

ತಯಾರಿಸುವ ವಿಧಾನ:-

* ಮೊದಲಿಗೆ ಒಂದು ಬಾಣಲೆಯಲ್ಲಿ ಹಸಿ ಮೆಣಸಿನಕಾಯಿ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಬೆಂಡೆಕಾಯಿ ಹಾಕಿ, ಬೆಳ್ಳುಳ್ಳಿ, ಹುಣುಸೆ ಹಣ್ಣು, ಟೊಮೆಟೋ ಹಾಕಿ ಹುರಿದುಕೊಳ್ಳಬೇಕು.

* ಬಳಿಕ ಬದನೆಕಾಯಿಯನ್ನು ಇದಕ್ಕೆ ಹಾಕಿ ಹುರಿದ ನಂತರ ಅದಕ್ಕೆ ನೀರು ಹಾಕಿ ಒಂದು ಕುದಿ ಬರುವವರೆಗೂ ಬಿಡಬೇಕು.

* ಒಂದು ಕುದಿ ಬಂದ ಬಳಿಕ ಬೆಂದ ಬದನೆಕಾಯಿಯನ್ನು ಕಲ್ಲಿನಲ್ಲಿ ರುಬ್ಬಿಕೊಳ್ಳಬೇಕು.

* ಬಳಿಕ ಬೆಂಡೆಕಾಯಿ, ಟೊಮೆಟೊ, ಮೆಣಸಿನಕಾಯಿ ಎಲ್ಲವನ್ನೂ ಕಲ್ಲಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

* ನಂತರ ಇದಕ್ಕೆ ಒಗ್ಗರಣೆ ಹಾಕಿ. ಒಗ್ಗರಣೆಗಾಗಿ ಎಣ್ಣೆ ಹಾಕಿ ಬಿಸಿ ಆದ ಬಳಿಕ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಗುಂಟೂರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ.

* ಬಳಿಕ ಇದಕ್ಕೆ ಈರುಳ್ಳಿ ಹಾಕಿ, ಖಾರದಪುಡಿ, ಚಿಟಿಕೆ ಅರಿಶಿಣ ಬೆರೆಸಿ.

* ರುಬ್ಬಿದ ಮಿಶ್ರಣವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿದರೆ ಜಗ್ಗಿ ಆಂಡ್‌ ಜಾನ್ಸ್ ಬದನೆಕಾಯಿ ಗೊಜ್ಜು ಸವಿಯಲು ಸಿದ್ಧ.

ಜಗ್ಗು ಆಂಡ್ ಜಾನ್ಸ್ ಬದನೆಕಾಯಿ ಗೊಜ್ಜು ತಯಾರಿಸಿದ ಬಳಿಕ ಜಗದೀಶ್ ಅದರ ರುಚಿಯನ್ನು ನೋಡಿ ಸಖತ್ತಾಗಿದೆ ಜಾನ್ಸ್ ಎಂದು ಜಾನವಿಗೆ ಕಾಮೆಂಟ್ ಮಾಡಿದರು. ಈ ಬದನೆಕಾಯಿ ಗೊಜ್ಜನ್ನು ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ. ಇದರ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+