Lawyer Jagadish Beauty Tips: ಹಂಸ ನನ್ನ ಎದೆ ಮೇಲೆ ಕಾಲಿಟ್ಟ ನಂತರ ನನ್ನ ಮುಖ ಗ್ಲೋ ಆಗಿದೆ.. ನೀವು ಕೂಡ..
ಲಾಯರ್ ಜಗದೀಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಮನೆಯ ಸ್ಪರ್ಧಿಗಳನ್ನು ಮಕಾಡೆ ಮಲಗಿಸಿ ಪ್ರೇಕ್ಷಕರನ್ನ ನಿದ್ದೆಗೆಟ್ಟು ಕಾರ್ಯಕ್ರಮವನ್ನು ನೋಡುವಂತೆ ಮಾಡಿದ ವ್ಯಕ್ತಿ. ಜಗಳ, ಗುದ್ದಾಟ, ಬೈದಾಟ ಹೀಗೆ ಒಂದಾ ಎರಡಾ? ಜಗದೀಶ್ ಇರುವಷ್ಟು ದಿನ ಬಿಗ್‌ಬಾಸ್ ಮನೆ ವಾತಾವರಣವೇ ಬದಲಾಗಿ ಹೋಗಿತ್ತು. ಹೀಗೆ ಬಿಗ್‌ಬಾಸ್ ಮನೆ ಸೇರಿ ಕೆಲವೇ ದಿನಗಳಲ್ಲಿ ಭಾರೀ ಸದ್ದು ಮಾಡಿದ ಜಗದೀಶ್ ಗಂಡಸರಿಗೆ ಒಂದು ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ.
ಹೌದು... ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಯಲ್ಲಿ ಧೂಳೆಬ್ಬಿಸಿ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಬೀಸಿದ ಸ್ಪರ್ಧಿ. ಬಿಗ್‌ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡು ಹೊರ ಬಂದ ಜಗದೀಶ್‌ಗೆ ಅವರ ಫ್ಯಾನ್ಸ್ ಮತ್ತೆ ಬಿಗ್‌ಬಾಸ್‌ಗೆ ಯಾವಾಗಾ ಹೋಗ್ತೀರಾ ಸರ್ ಅಂತ ಬೆನ್ನು ಬಿದ್ದಿದ್ದಾರೆ. ಹಾಗಾದರೆ ಇದಕ್ಕೆಲ್ಲಾ ಜಗದಿಶ್ ಕೊಟ್ಟ ಉತ್ತವೇನು? ಫೇಸ್ ಗ್ಲೋ ಆಗಲು ಏನು ಮಾಡಬೇಕು ಅಂತ ಜಗದೀಶ್ ಟಿಪ್ಸ್ ಕೊಟ್ಟಿದ್ದಾರೆ? ಎಲ್ಲವನ್ನೂ ತಿಳಿಯೋಣ.

ಹಂಸ ನನ್ನ ಎದೆ ಮೇಲೆ ಕಾಲಿಟ್ಟ ನಂತರ ನನ್ನ ಮುಖ ಗ್ಲೋ ಆಗಿದೆ...
ಹಂಸ ನನ್ನ ಎದೆ ಮೇಲೆ ಕಾಲಿಟ್ಟ ನಂತರ ನನ್ನ ಮುಖ ಗ್ಲೋ ಆಗಿದೆ. ಹೀಗಾಗಿ ನೀವು ನಿಮ್ಮ ಮನೆ ಹೆಣ್ಣು ಮಕ್ಕಳ ಕಾಲನ್ನು ಎದೆ ಮೇಲೆ ಇಡಲು ಹೇಳಿ, ಆಗ ನಿಮ್ಮ ಮುಖ ಕೂಡ ಗ್ಲೋ ಆಗುತ್ತೆ ಅಂತ ಲಾಯರ್ ಜಗದೀಶ್ ಅವರು ಪುರುಷರಿಗೆ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಸವಿರುಚಿ ಕಾರ್ಯಕ್ರಮದಲ್ಲಿ ಅಡುಗೆ ಮಾಡಿದ ಲಾಯರ್ ಜಗದೀಶ್ ನಿರೂಪಕಿ ಜಾನವಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಈ ಹೇಳಿಕೆಯನ್ನು ಜಗದೀಶ್ ನೀಡಿದ್ದಾರೆ.
ಅಷ್ಟೇ ಅಲ್ಲ ಲಾಯರ್ ಜಗದೀಶ್ ಅವರಿಗೆ ಹೆಂಡತಿ ಕಂಡರೆ ತುಂಬಾ ಭಯವಂತೆ, ಆದರೂ ರಾತ್ರಿ ಮನೆಗೆ ಹೋಗುತ್ತಾರಂತೆ. ಜಗದೀಶ್ ಪತ್ನಿ ನಾನೂ ಕೂಡ ಹಂಸಳಂತೆ ಎದೆ ಮೇಲೆ ಕಾಲು ಇಡ್ಲಾ ಅಂತ ಕೇಳ್ತಾರಂತೆ. ಆಗ ಜಗದೀಶ್ ಇಡಮ್ಮ ಅಂತ ಹೇಳಿ ಸಮಾಧಾನ ಮಾಡ್ತಾರಂತೆ. ಹೀಗಂತ ಕಾಮಿಡಿ ಮಾಡಿದ್ದಾರೆ ಲಾಯರ್ ಜಗದಿಶ್.
ಬಿಗ್‌ಬಾಸ್ ಮನೆಗೆ ಹೋಗಲು ಕಂಡಿಷನ್ ಹಾಕಿದ ಜಗದೀಶ್
ಇದೇ ವೇಳೆ ಬಿಗ್‌ಬಾಸ್ ಮನೆಗೆ ಮತ್ತೆ ಹೋಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಲಾಯರ್ ಜಗದೀಶ್ ಕೆಲ ಕಂಡೀಷನ್ ಹಾಕಿದ್ದಾರೆ. ತಾವು ಮತ್ತೆ ಬಿಗ್‌ಬಾಸ್ ಮನೆಗೆ ಹೋಗಬೇಕು ಅಂದರೆ ಕ್ರೇನ್ ಅಲ್ಲೇ ಎಂಟ್ರಿ ಕೊಡಬೇಕಂತೆ, ಅದ್ರಲ್ಲೂ ಬ್ಲ್ಯಾಕ್ ಕಲರ್ ಕೋಟ್ ಧರಿಸಿರಬೇಕಂತೆ. ಅಲ್ಲದೆ ಮೈಕಲ್ ಜಾಕ್ಸನ್ ಸ್ಟೆಪ್ ಕೂಡ ಹಾಕಿ ಎಂಟ್ರಿ ಕೊಡ್ತಾರಂತೆ ಜಗದೀಶ್. ಇದಕ್ಕೆ ಬಿಗ್‌ಬಾಸ್ ಒಪ್ಪಬೇಕು, ಕ್ರೇನ್ ತರಿಸಬೇಕು ಅಂತ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲು ಜಗದೀಶ್ ಕಂಡಿಷನ್ ಹಾಕಿದ್ದಾರೆ.

ಬಿಗ್‌ಬಾಸ್ ಮನೆಗೆ ಮತ್ತೆ ಹೋಗ್ತಾರಾ ಜಗದೀಶ್?
ಬಿಗ್‌ಬಾಸ್ ಮನೆಗೆ ಮತ್ತೆ ಹೋಗ್ತಾರಾ ಲಾಯರ್ ಜಗದೀಶ್ ಅನ್ನೋ ಪ್ರಸ್ನೆಗೆ ಉತ್ತರಿಸಿದ ಅವರು, ಇದಕ್ಕೆ ಉತ್ತರ ಬಿಗ್‌ಬಾಸ್ ಕೊಡಬೇಕು.. ಜಾಮೂನು ಕೊಟ್ಟು ತಿನ್ನು ಅಂದ್ರೆ ಬೇಡ ಅನ್ನೋ ದಡ್ಡ ನಾನು ಅಲ್ಲ. ಕೊಡೋ ಮನಸ್ಸು ಅವರಿಗಿದ್ದರೆ ಖಂಡಿತಾ ನಾನು ಅದನ್ನು ಸ್ವೀಕರಿಸುತ್ತೇನೆ ಎಂದಿದ್ದಾರೆ.
ಜಾನವಿಗೆ ಕಾಲೆಳೆದ ಜಗದೀಶ್
ಬಿಗ್‌ಬಾಸ್ ಮನೆಯಲ್ಲಿ ಹಂಸ್‌ಗೆ ಕಾಲೆಳೆದಂತೆ ಸವಿರುಚಿ ಅಡುಗೆ ಕಾರ್ಯಕ್ರಮದಲ್ಲಿ ಜಾನವಿ ಕಾಲೆಳೆದಿದ್ದಾರೆ ಲಾಯರ್ ಜಗದೀಶ್. ಜಾನವಿ ತಯಾರಿಸಿದ ಬದನೆಕಾಯಿ ಗೊಜ್ಜು ಜಾನವಿ ಕೈಯಷ್ಟೇ ರುಚಿಯಾಗಿರುತ್ತೆ ಅಂತ ನನಗೆ ಗೊತ್ತು. ಹೀಗಾಗಿ ನಾನು ಈ ಬದನೆಕಾಯಿ ಗೊಜ್ಜನ್ನು ನಾನು ತಿನ್ನಲ್ಲ ಬದಲಿಗೆ ಜಾನವಿ ಅವರಿಗೇ ಕೊಡುತ್ತೇನೆ ಅಂತ ಕಾಮಿಡಿ ಮಾಡಿದರು.











Click it and Unblock the Notifications