Bigg Boss: ಬಿಗ್‌ ಬಾಸ್‌ ಮನೆಯಲ್ಲಿ ಇವರೇ ನಂಬರ್ 1 ಎಂದ ಕಿಚ್ಚ ಸುದೀಪ್; ಇವ್ರೆನಾ ವಿನ್ನರ್?

Bigg Boss: ಈ ಬಾರಿ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟವರದ್ದೇ ಸೌಂಡ್‌ ಹೆಚ್ಚಾಗಿದೆ. ಈಗಾಗಲೇ ಈ ​ ಸೀಸನ್‌ 14ನೇ ವಾರಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೀಗ ಸದ್ಯ ಬಿಗ್‌​ಬಾಸ್​ ಮನೆಯಲ್ಲಿ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರ ಪೈಕಿ ಓರ್ವ ಸ್ಪರ್ಧಿಯ ಬಗ್ಗೆ ಕಿಚ್ಚ ಸುದೀಪ್​ ಅವರು ಹೆಮ್ಮೆಯ ಮಾತಾಡಿ ಕುತೂಹಲ ಹುಟ್ಟುಹಾಕಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್​ ಅವರು ಬಿಗ್ ಬಾಸ್ ಮನೆಯ ಕೆಲ ಸ್ಪರ್ಧಿಗಳು ಎಲ್ಲಿ ಕಳೆದು ಹೋಗಿದ್ದಾರೆ ಎಂದು ತಿಳಿಸುತ್ತಿದ್ದರು. ಆಗ ರಜತ್ ಹಾಗೂ​ ಹನುಮಂತನ ಬಗ್ಗೆ ಮಾತಾಡಿದ್ದಾರೆ. ಇದೇ ವೇಳೆ ಸುದೀಪ್​ ಹನುಮಂತು ಅವರ ಬಗ್ಗೆ ಏನ್ ರೀ ಮಾತನಾಡುತ್ತೀರ. ನಿಮ್ಮೆಲ್ಲರಿಗಿಂತಲೂ 10 ಹೆಜ್ಜೆ ಮುಂದೆ ಇದ್ದಾರೆ. ನಿಮಗೆ ಯಾರಿಗೂ ಅದು ಗೊತ್ತಾಗುತ್ತಿಲ್ಲ ಅಷ್ಟೇ ಎಂದು ಹೇಳುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.

Bigg Boss Kurigayi Hanumantha Is 10 Steps Ahead Of Other Contestants says Kichcha Sudeep

ಇನ್ನು ಸೂದೀಪ್‌ ಮಾತು ಆಲಿಸಿದ ಎಲ್ಲಾ ಸ್ಪರ್ಧಿಗಳು ಶಾಕ್‌ ಆಗುವ ಮೂಲಕ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡಿದ್ದಾರೆ. ಇನ್ನೂ ಹನುಮಂತು ಅವರು ಬಿಗ್‌ ಬಾಸ್‌ ಮನೆಗೆ ವೈರ್ಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಾಗಿನಿಂದಲೂ ಗೇಮ್‌, ಮಾತುಗಾರಿಕೆಯನ್ನು ಉತ್ತಮ ಪ್ರದರ್ಶನ್‌ ತೋರುವ ಮೂಲಕ ಸಖತ್‌ ಸೌಂಡ್‌ ಮಾಡುತ್ತಲೇ ಇದ್ದಾರೆ. ನಾಮಿನೇಷನ್​ ವಿಚಾರಕ್ಕೆ ಬಂದರೆ ಸರಿಯಾದ ಕಾರಣ​ ಕೂಟ್ಟು ವೀಕ್ಷಕರ ಮೆಚ್ಚುಗೆಯನ್ನು ಗಳಿಸುತ್ತಲೇ ಇದ್ದಾರೆ.

ವೈಲ್ಡ್‌ ಕಾರ್ಟ್‌ ಎಂಟ್ರಿಯಾದ ಮೊದಲ ಕೆಲವು ದಿನಗಳವರೆಗೆ ಹನುಮಂತು ಅಲ್ಲಿನ ಸ್ಪರ್ಧಿಗಳನ್ನು ನೋಡಿ ಆಶ್ಚರ್ಯಕ್ಕೆ ಒಳಗಾಗಿದ್ದರು. ಅಲ್ಲದೆ, ವಾಪಾಸ್‌ ಆಗುವ ಮಾತನ್ನೂ ಕೂಡ ಆಡಿದ್ದರು. ಬಳಿಕ ವಾರ ಕಳೆದಂತೆ ಅವರು ಎಲ್ಲರ ಜೊತೆಗೆ ಬೆರೆಯುತ್ತಾ ಅಲ್ಲಿನ ಆಟ, ಮಾತುಗಾರಿಕೆ ಬಗ್ಗೆ ತಿಳಿದುಕೊಳ್ಳುತ್ತಾರೆ. ಧನರಾಜ್‌ ಜೊತೆ ಉತ್ತಮ ಸ್ನೇಹವನ್ನು ಕೂಡ ಮಾಡುತ್ತಾರೆ.

ಈಗಲೂ ಕೂಡ ಅವರಿಬ್ಬರು ಆಟದ ವಿಚಾರ ಬಿಟ್ಟರೆ, ಬಿಗ್‌ ಬಾಸ್‌ ಮನೆಯಲ್ಲಿ ಪಕ್ಕಾ ಕುಚುಕುಗಳಂತೆ ಇದ್ದಾರೆ. ಇದನ್ನು ನೋಡಿದರೆ, ಕಳೆದ ಸೀಸನ್‌ನ ಸಂತು-ಪಂತು ಸ್ನೇಹ ನೆನಪಿಗೆ ಬರುತ್ತದೆ ಎಂದಯ ನೆಟ್ಟಿಗರು ಹೇಳುತ್ತಿದ್ದಾರೆ. ಈ ಹಿಂದಿನ ಬಿಗ್‌ ಬಾಸ್‌ ಸೀಸನ್‌ನಲ್ಲಿ ಸಂತು-ಪಂತು ಸ್ನೇಹ ಬೆಳೆದಿದ್ದು ಬೀನ್‌ ಬಾಗ್‌ಗಳಿಂದ. ಆ ಬೀನ್‌ ಬ್ಯಾಗ್‌ಗಳು ಅವರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದವು. ಗೇಮ್‌ ಅಂತಾ ಬಂದರೆ ಆಟದ ರೀತಿಯಲ್ಲೇ ಆಡುತ್ತಿದ್ದರು.

ಕಾಂಪ್ರೋಮೈಸ್‌ ಇಲ್ಲವೇ ಇಲ್ಲ. ಸ್ನೇಹ ಏನಿದ್ದರೂ ಆಟದಿಂದ ಹೊರಗೆ ಎನ್ನುವ ಪಾಲಿಸಿಯನ್ನ ಪಾಲನೆ ಮಾಡುತ್ತಿದ್ದವರಾಗಿದ್ದರು. ಹಾಗೆಯೇ ಈ ಸೀಸನ್‌ನಲ್ಲೂ ಕೂಡ ಹನುಮಂತು ಹಾಗೂ ಧನರಾಜ್‌ ಇಬ್ಬರೂ ಕೂಡ ಆಟದ ವಿಚಾರಕ್ಕೆ ಬಂದರೆ ಸ್ನೇಹವನ್ನು ಆಚೆ ಇಡುತ್ತಾರೆ. ಬಳಿಕ ಆ ಸ್ನೇಹಕ್ಕೆ ಬರಳುತ್ತಾರೆ. ಇದೇ ವಿಚಾರದ ಮೂಲಕ ಹನುಮಂತು ವೀಕ್ಷಕರ ಮನ ಗೆಲ್ಲುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಲ್ಲದೆ ಈ ಬಾರಿ ಇವರೇ ಬಿಗ್‌ ಬಾಸ್‌ ಟ್ರೋಪಿ ಎತ್ತುವುದು ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+