Bigg Boss: ಬಿಗ್‌ ಬಾಸ್‌ ಮನೆಯಲ್ಲಿ ಬರೀ ಬೀಪ್‌..ಬೀಪ್‌: ವೈಲ್ಡ್ ಕಾರ್ಡ್ ಎಂಟ್ರಿ ರಜತ್‌ ಔಟ್‌?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ದಿನಕ್ಕೊಂದು ಹೊಸ ಹೊಸ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಇನ್ನೇನು ಅರ್ಧ ಸೀಜನ್‌ ಅಂದರೆ 50ಕ್ಕೂ ಹೆಚ್ಚು ದಿನ ಮುಗಿತು ಎನ್ನುವಷ್ಟರಾಗಲೇ ಇಬ್ಬರು ಸ್ಪಧಿಗಳು ಮತ್ತೆ ವಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಬಿಗ್‌ ಬಾಸ್‌ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದಿದ್ದ ಶೋಭಾ ಶೆಟ್ಟಿ ಹಾಗೂ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್‌ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದಾರೆ.

ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಶೋಭಾ ಶೆಟ್ಟಿ ಮತ್ತು ರಜತ್ ಬಂದ ದಿನದಿಂಲೇ ಅಗ್ರೆಸ್ಸಿವ್ ಆಗಿ ಆಟವಾಡುತ್ತಿದ್ದಾರೆ. ಬಂದ ದಿನದಿಂದಲೇ ಪ್ರತಿಯೊಬ್ಬರೊಂದಿಗೂ ವಾದ-ವಿವಾದ ಜೋರಾಗಿದೆ. ಅತ್ತ ಹೇಳುವ ಪ್ರತಿಯೊಂದು ಮಾತಿಗೂ ಸ್ಟಷ್ಟತೆ ಕೊಡಿ ಎಂದು ಶೋಭಾ ಶೆಟ್ಟಿ ಕಿರುಚಾಡುತ್ತಿದ್ದರೆ, ಇತ್ತ ರಜತ್‌ ಪ್ರತಿಯೊಬ್ಬರ ಜೊತೆಗೂ ಧ್ವನಿ ಏರಿಸೇ ಮಾತನಾಡುತ್ತಿದ್ದಾರೆ. ಇನ್ನೂ ಟಾಸ್ಕ್‌ ವಿಚಾರಕ್ಕೆ ಬಂದರಂತೂ ಪ್ರೇಕ್ಷಕರು ಟಿವಿ ಶಬ್ಧವನ್ನು ಮ್ಯೂಟ್‌ ಮಾಡಬೇಕು ಅಷ್ಟರಮಟ್ಟಿಗೆ ನಿಯಂತ್ರಣ ತಪ್ಪಿ ಮಾತನಾಡುತ್ತಿದ್ದಾರೆ.

Bigg Boss Kannada Wild Card Entry Contestant Rajat Will Leave The Bigg Boss House This Week

ನಿನ್ನೆ ನಡೆದ ಸಂಚಿಕೆಯಲ್ಲಿ ಟಾಸ್ಕ್‌ವೊಂದರಲ್ಲಿ ನೋಡನೋಡುತ್ತಿದ್ದಂತೆ ಗೋಲ್ಡ್‌ ಸುರೇಶ್- ರಜತ್‌ ತಿರುಗಿ ಬಿದ್ದಿದ್ದು, ಈ ವೇಳೆ ರಜತ್‌ ತನ್ನ ರೋಷಾವೇಶ ಪ್ರದರ್ಶಿಸಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ತೆಗೆದುಕೊಂಡು ಹೋಗುವ ಟಾಸ್ಕ್‌ನಲ್ಲಿ ಗೋಲ್ಡ್‌ ಸುರೇಶ್ ಹಾಗೂ ರಜತ್ ಅವರ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ರಜತ್‌ ಗೋಲ್ಡ್‌ ಸುರೇಶ್ ಅವರನ್ನು ಮನಬಂದಂತೆ ಪದಗಳನ್ನು ಬಳಸಿ ಬೈದಿದ್ದಾರೆ. ಹೀಗಾಗಿ ಸಂಚಿಕೆಯಲ್ಲಿ ಹಲವು ಬಾರಿ ಶಬ್ಧಗಳಿಗೆ ಬೀಪ್‌ ಹಾಕಿ ಪ್ರೇಕ್ಷಕರಿಗೆ ತೋರಿಸಲಾಗಿದೆ.

ರಜತ್ ಮಾತುಗಳನ್ನು ಕೇಳಿದ ಗೋಲ್ಡ್‌ ಸುರೇಶ್ ಬಿಗ್ ಬಾಸ್ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದರು. ಅಲ್ಲದೇ ಕುಸಿದು ಹೋಗಿ ಕಣ್ಣೀರಿಟ್ಟರು. ಇತರ ಸ್ಪರ್ಧಿಗಳು ಗೋಲ್ಡ್‌ ಸುರೇಶ್ ಅವರನ್ನು ಸಮಾಧಾನಪಡಿಸಿದ್ದಾರೆ. ಅತ್ತ ಕೆಲವು ಸ್ಪರ್ಧಿಗಳು ರಜತ್‌ಗೆ ಸುಮ್ಮನಿರಲು ಹೇಳಿದರೂ ಸಹ ಕೇಳದ ರಜತ್ ಅವರ ವಿರುದ್ಧವೂ ಮಾತಿನ ಪ್ರಹಾರ ನಡೆಸಿದ್ದಾರೆ.

Bigg Boss Kannada Wild Card Entry Contestant Rajat Will Leave The Bigg Boss House This Week

ಬಿಗ್‌ ಬಾಸ್‌ ಎಂದ ಮೇಲೆ ಗಲಾಟೆ, ಬೈದಾಟ, ಕಾದಾಟ ಸಾಮಾನ್ಯ ಎಂದುಕೊಂಡು ನೋಡುತ್ತಿರುವ ಪ್ರೇಕ್ಷಕರಿಗೆ ಇತ್ತೀಚಿಗೆ ಸ್ಪರ್ಧಿಗಳ ವರ್ತನೆ ತೀರಾ ಮಿತಿ ಮೀರಿದಂತೆ ಅನಿಸುತ್ತಿದೆ. ಒಬ್ಬ ಸ್ಪರ್ಧಿ ನಿನ್ನೊಬ್ಬ ಸ್ಪರ್ಧಿಯ ಮೇಲೆ ಕೆಟ್ಟ ಪದಗಳನ್ನು ನೇರವಾಗಿ ಬಳಸುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರಿಗೂ ಕೂಡ ಇದು ಅತಿ ಅನಿಸುತ್ತಿದೆ.

ಇನ್ನು ಈ ಹಿಂದೆ ಪದ ತಪ್ಪಾಗಿ ಆಡಿದ ಕಾರಣ ಲಾಯರ್‌ ಜಗದೀಶ್‌ ಅವರನ್ನು ನೇರವಾಗಿ ಬಿಗ್‌ ಬಾಸ್‌ ಮನೆಯಿಂದ ಆಚೆ ಕಳುಹಿಸಲಾಯಿತು. ಹೀಗಾಗಿ ನಿನ್ನೆಯ ಸಂಚಿಕೆಯಲ್ಲಿ ಬೀಪ್‌ ಹಾಕಿ ಪ್ರಸಾರ ಮಾಡುವಂತೆ ಮಾತನಾಡಿರುವ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್‌ಗೆ ಏನು ಶಿಕ್ಷೆ ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಕೆಟ್ಟ ಪದಗಳನ್ನು ಬಳಸುವಂತಿಲ್ಲ ಎನ್ನುವುದು ನಿಯಮವಾಗಿದ್ದರೆ ಈ ವಾರ ರಜತ್‌ ಅವರು ಕೂಡ ಮನೆಯಿಂದ ಆಚೆ ಹೋಗುವ ಸಾಧ್ಯತೆ ಎಂದು ಕೆಲ ಪ್ರೇಕ್ಷಕರು ಊಹಿಸಿದ್ದಾರೆ. ಇನ್ನು ಜನ ನೋಡುತ್ತಿದ್ದಾರೆ ಎನ್ನುವ ಪರಿವೇ ಇಲ್ಲದೇ ಮನಬಂದಂತೆ ವರ್ತಿಸುವ ಸ್ಪರ್ಧಿಗಳ ವರ್ತನೆಗೆ ಕಡಿವಾಣ ಹಾಕುವಂತೆ ಪ್ರೇಕ್ಷಕರು ಬಿಗ್‌ ಬಾಸ್‌ ಕನ್ನಡ ತಂಡಕ್ಕೆ ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+