Bigg Boss: ಬಿಗ್ ಬಾಸ್ ಮನೆಗೆ ಬಂದ ಮೊದಲ ವಾರವೇ ರಜತ್ ಜೈಲಿಗೆ
ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದಿದ್ದ ಶೋಭಾ ಶೆಟ್ಟಿ ಹಾಗೂ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್ ಬಿಗ್ ಬಾಸ್ ಕನ್ನಡ ಸೀಜನ್ 11 ಮನೆ ಪ್ರವೇಶಿಸಿದ್ದಾರೆ. ಹೀಗಾಗಿ ಈಗ ಆಟ ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತಿದ್ದು, ಸ್ಪರ್ಧಿಗಳ ನಡುವಿನ ಸ್ಪರ್ಧೆ ಹೆಚ್ಚಾಗಿದೆ. ಜೊತೆಗೆ ಜಗಳ, ಕೂಗಾಟ, ಗಲಾಟೆಗಳು ಕೂಡ ಹೆಚ್ಚಾಗಿದೆ.
ಬಂದ ದಿನದಿಂದಲೂ ಅಗ್ರೇಸಿವ್ ಆಗಿ ಆಟ ಆಡುತ್ತಿರುವ ರಜತ್ ಆಟಗಳ ಮಧ್ಯ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಮಾತುಗಳೇ ಈಗ ಅವರನ್ನು ಜೈಲಿಗೆ ಕಳುಹಿಸಿದೆ. ಹೌದು, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್‌ಗೆ ಬಂದ ಮೊದಲ ವಾರವೇ ಕಳಪೆ ಪಡೆದು ರಜತ್ ಬಿಗ್ ಬಾಸ್ ಮನೆಯ ಜೈಲಿಗೆ ಹೋಗಿದ್ದಾರೆ.

ಈ ವಾರದ ಕಳಪೆಯಾಗಿ ರಜತ್ ಅವರ ಹೆಸರನ್ನು ಬಹುತೇಕ ಸ್ಪರ್ಧಿಗಳು ತೆಗೆದುಕೊಳ್ಳುತ್ತಾರೆ. ಇದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡುತ್ತಾರೆ. ಶೋಭಾ ಶೆಟ್ಟಿ ಈ ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಪದಗಳನ್ನು ಬಳಸಬಾರದಿತ್ತು ಎಂದು ಕಾರಣ ನೀದರೆ, ನಟಿ ಐಶ್ವರ್ಯಾ ನೀವು ಆಡಿರುವ ಮಾತುಗಳು ನಮಗೆ ತೆಗೆದುಕೊಳ್ಳಲು ಆಗಲಿಲ್ಲ ಎಂದು ಕಾರಣ ನೀಡಿದರು.
ಇನ್ನು ನಾನು ಮಾತನಾಡುವುದೇ ಹೀಗೆ ಅಂತಾ ಹೇಳಿದಿರಿ ಅದು ಈ ಮನಗೆ ಸೂಕ್ತ ಅಲ್ಲ ಎಂದು ನಟ ಶಿಶಿರ್ ಹೇಳಿದ್ದು, ರಜತ್ ವೈಯಕ್ತಿಕವಾಗಿ ಹೇಳಿದ ಮಾತುಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಗೋಲ್ಡ್ ಸುರೇಶ್ ಕಳಪೆಗೆ ಕಾರಣ ಕೊಟ್ಟಿದ್ದಾರೆ. ಈ ವಾರದ ಕಳಪೆ ಬಟ್ಟೆ ಸ್ವೀಕರಿಸಿ ರಜತ್ ಎಲ್ಲರೂ ಕೊಟ್ಟ ಕಾರಣಗಳನ್ನು ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಡುಗಿಯ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭ ಅಲ್ಲ ಬಿಗ್ ಬಾಸ್ ಗೆಲ್ಲುವುದು. ಇಂತವರನ್ನೆಲ್ಲಾ ಕಳುಹಿಸಿನೇ ನಾನು ಮನೆಗೆ ಹೋಗುವುದು. ಹುಟ್ಟುದಾಗಿನಿಂದಲೂ ಹೀಗೆ ಇದ್ದೇನೆ. ಈಗಲೂ ಹೀಗೆ ಇದ್ದೇನೆ. ಇನ್ನು ಮುಂದೆ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ನಾನೇನು ಎಂದು ತೋರಿಸುತ್ತೇನೆ. ಇನ್ನು ಮುಂದೆ ನಿಜವಾದ ಆಟ ಶುರು ಎಂದು ರಜತ್ ಖಡಕ್ ಆಗಿ ಇತರ ಸ್ಪರ್ಧಿಗಳಿಗೆ ಉತ್ತರ ಕೊಟ್ಟು ಜೈಲಿಗೆ ಹೋಗಿದ್ದಾರೆ. ಈ ವೀಕೆಂಡ್ ಸಂಚಿಕೆಗಾಗಿ ಪ್ರೇಕ್ಷಕರು ಕಾಯುತ್ತಿದ್ದು, ರಜತ್ ಆಡಿರುವ ಮಾತುಗಳಿಗೆ ಸುದೀಪ್ ಏನು ಹೇಳಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.












Click it and Unblock the Notifications