Dharma Keerthiraj: ಧರ್ಮ ಕೀರ್ತಿರಾಜ್ ಇನ್ನೂ ಮದುವೆಯಾಗಿಲ್ಲ ಯಾಕೆ..?
ಕನ್ನಡ ಚಿತ್ರರಂಗದ ಕ್ಯಾಡ್ಬರೀಸ್ ಅಂತಾನೇ ಫೇಮಸ್ ಆಗಿರುವ ಧರ್ಮ ಕೀರ್ತಿರಾಜ್ ಸದ್ಯ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಯಾಗಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದ ಕೀರ್ತಿರಾಜ್ ಅವರ ಪುತ್ರನಾಗಿರುವ ಧರ್ಮ ಕೀರ್ತಿರಾಜ್, ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಧರ್ಮ ಕೀರ್ತಿರಾಜ್ ಬಗ್ಗೆ ವೈಯಕ್ತಿಕ ಬಗ್ಗೆ ಅನೇಕ ಪ್ರಶ್ನೆ ಪ್ರೇಕ್ಷರಲ್ಲಿದೆ.
ಈ ಪೈಕಿ ಧರ್ಮ ಕೀರ್ತಿರಾಜ್ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ. ಈ ಬಗ್ಗೆ ಸ್ವತಃ ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ.' ನವಗ್ರಹ ಬಂದಾಗ 2008ರಲ್ಲಿ ನನಗೆ 24 ವರ್ಷ. ಎಲ್ಲರೂ ಕೇಳುತ್ತಾರೆ ಯಾಕೆ ಇನ್ನೂ ಮದುವೆಯಾಗಿಲ್ಲ ಅಂತಾ. ಆಗಬೇಕಿತ್ತು, ಆದರೆ ಇನ್ನೂ ಆಗಿಲ್ಲ. ಈ ಕೆಲಸ ಅಂತಾ ಬಂದಾಗ ಮುಂದಿನ ವರ್ಷ ಮದುವೆ ಆಗೋಣ ಅಂತಾ ಹೇಳಿ ಹೇಳಿ ಮುಂದೆ ಹಾಕಿದೆ. ಇನ್ನು ಸ್ವಲ್ಪ ಸೆಟೆಲ್ ಆಗೋಣ ಜೀವನದಲ್ಲಿ ಅಂತಾ ಮುಂದೂಡಿ ಮುಂದೂಡಿ ಲೇಟ್ ಆಗುತ್ತಿದೆ. ಖಂಡಿತಾ ಆಗುತ್ತೇನೆ' ಎಂದರು.

'ನಾನು ನೋಡಿದ ಹಾಗೆ ಮನುಷ್ಯನ ಕಾಲ ಚಕ್ರ ಅನ್ನುತ್ತಾರಲ್ಲ ಅದರಂತೆ ಈಗ ನನ್ನ ಜೀವನದಲ್ಲಿ ಈಗ ಬದಲಾವಣೆ ಕಾಣುತ್ತಿದ್ದೇನೆ. ಹೀಗಾಗಿ ಮದುವೆ ಕೂಡ ಆಗುತ್ತದೆ. ಸಿನಿಮಾ ಜೊತೆಯಲ್ಲೇ ಒಂದು ಒಳ್ಳೆ ಹುಡುಗಿ ಸಿಕ್ಕಿದರೆ ನೂರಕ್ಕೆ ನೂರು ಆಗುತ್ತೇನೆ. ಎಲ್ಲರೂ ಕೋವಿಡ್ ಸಮಯದಲ್ಲಿ ಯಾರನ್ನಾದರೂ ಲವ್ ಮಾಡಿ ಮದುವೆ ಆಗು ಎಂದರು'.
'ನಮ್ಮ ಮನೆಯಲ್ಲಿ ಹೇಳಿದ್ದಾರೆ ನಮ್ಮ ಕೈಯಲ್ಲಿ ಆಗಲ್ಲ. ಈಗ ಹುಡುಗಿ ಹುಡುಕಿಕೊಂಡು ಜಾತಕ ನೋಡಿ ಸೆಲೆಕ್ಟ್ ಮಾಡಲು ನಮ್ಮ ಕೈಯಲ್ಲಿ ಆಗುವುದಿಲ್ಲ. ನಿನಗೆ ಯಾರು ಸರಿ ಎನಿಸುತ್ತದೆಯೋ, ನೀನು ಯಾರನ್ನು ಕರೆದುಕೊಂಡು ಬರುತ್ತೀಯೋ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತಾ ನಿನಗೆ ಅನಿಸಿದರೆ ಅಷ್ಟಿದ್ದರೆ ಸಾಕು ನಮಗೆ. ಅಂತಹ ಹುಡುಗಿ ಬಂದರೆ ನೂರಕ್ಕೆ ನೂರು ಮದುವೆ ಆಗಬಹುದು ಎಂದಿದ್ದಾರೆ. ನನ್ನ ಮೇಲೆ ಆ ಜವಾಬ್ದಾರಿ ಬಿಟ್ಟಿದ್ದಾರೆ. ನೋಡುತ್ತೇನೆ ಮುಂದಿನ ವರ್ಷ' ಎಂದಿದ್ದ ಧರ್ಮ ಕೀರ್ತಿರಾಜ್ ಸದ್ಯ ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ.












Click it and Unblock the Notifications