Bigg Boss: ಯಾರೂ ಊಹಿಸದ ಸ್ಪರ್ಧಿಗೆ ಈ ಬಾರಿ ವಿನ್ನರ್ ಪಟ್ಟ

ಬಿಗ್‌ಬಾಸ್ ಬಹುನಿರೀಕ್ಷಿತ ಫಿನಾಲೆ ಆರಂಭವಾಗಿದೆ. ಕನ್ನಡದ ಟಾಪ್ ಒನ್ ರಿಯಾಲಿಟಿ ಶೋ ಆದ ಬಿಗ್‌ಬಾಸ್ 120 ದಿನಗಳನ್ನು ಕಳೆದು ಗ್ರ್ಯಾಂಡ್ ಫಿನಾಲೆ ತಲುಪಿದೆ. ಈಗ ವಿನ್ನರ್ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದ ಸ್ಪರ್ಧಿ ವಿನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಆ ಸ್ಪರ್ಧಿ ಯಾರು?

ಬಿಗ್‌ಬಾಸ್‌ ಮನೆಯಿಂದ ಈಗಾಗಲೇ ಭವ್ಯಾ ಗೌಡ ಔಟ್ ಆಗಿದ್ದಾರೆ. ಇವರ ಬಳಿಕ ರಜತ್‌ ಕೂಡ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ರಜತ್ ಅವರು ಹೊರ ಬಂದ ಬಳಿಕ ಮಂಜು ಅವರು ಕೂಡ ಎಲಿಮಿನೇಟ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಮತಗಳ ಪ್ರಕಾರ ಒಬ್ಬೊಬ್ಬರಾಗಿ ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಾರೆ. ಉಳಿದವರಲ್ಲಿ ಮೋಕ್ಷಿತಾ ಅವರು ವಿನ್ ಆಗಲಿದ್ದು, ಇನ್ನೂ ರನ್ನರ್ ಅಪ್ ಆಗಿ ತ್ರಿವಿಕ್ರಮ್ ಹಾಗೂ ಹನುಮಂತ ಅವರಿಗೆ ಮೂರನೇ ಸ್ಥಾನ ಸಿಗಲಿದೆ ಎನ್ನುವ ಸುದ್ದಿ ಬಂದಿದೆ.

Bigg boss kannada this time the winner was a contestant no one expected

ಕಳೆದ ಎರಡು ಮೂರು ವಾರಗಳ ಹಿಂದೆ ಮೋಕ್ಷಿತ ವಿನ್ನರ ರೇಸ್‌ನಲ್ಲಿ ಇರಲೇ ಇಲ್ಲ. ಮೋಕ್ಷಿತಾ ಅವರ ಆಟದಲ್ಲಿ ಒಂದು ವಾರದಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ವೈಯಕ್ತಿಕವಾಗಿ ಕೆಲ ವಿಚಾರದಲ್ಲಿ ಮೋಕ್ಷಿತಾ ಬದಲಾದರು. ಹೀಗಾಗಿ ಅವರಿಗೆ ವಿನ್ನರ್ ಪಟ್ಟ ಸಿಗುವುದು ಪಕ್ಕಾ ಎಂದು ಅವರ ಅಭಿಮಾನಿ ಬಳಗ ಹೇಳಿಕೊಳ್ಳುತ್ತಿದೆ.

ಮೋಕ್ಷಿತಾ ಪೈ ಆರಂಭದಿಂದಲೂ ಹೆಚ್ಚು ಜನರ ಪ್ರೀತಿ ಗಳಿಸಿದ ಸ್ಪರ್ಧಿ. ಇದರ ಬಗ್ಗೆ ಎರಡು ಮಾತಿಲ್ಲ. ಆದರೆ ಮೋಕ್ಷಿತಾ ಗುಂಪಿನಲ್ಲಿ ಆಟ ಆಡಿಕೊಂಡು ಬಂದರು ಎನ್ನುವುದು ಸೀಸನ್ ಆರಂಭದಿಂದ ನೋಡಿದವರಿಗೆ ಅರ್ಥವಾಗುತ್ತದೆ. ಕಳೆದ ಎರಡು ವಾರದಲ್ಲಿ ಮಾತ್ರ ಮೋಕ್ಷಿತಾ ಅವರಲ್ಲಿ ಬದಲಾವಣೆ ಕಂಡು ಬಂದಿದೆ. ಅವರು ಏಕಾಂಗಿಯಾಗಿ ಆಡಲು ಶುರು ಮಾಡಿ ಕೊನೆಯಲ್ಲಿ ಉತ್ತಮ ಆಟ ಆಡಿದರು.

ಇದು ಬಿಗ್‌ಬಾಸ್‌ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ಬಿಗ್‌ಬಾಸ್‌ ಕೊನೆಯ ವಾರದಲ್ಲಿ ಮೋಕ್ಷಿತಾ ಪೈ ಅವರಿಗೆ ಹೆಚ್ಚು ಓಟ್ ಬಂದಿವೆ ಎಂದು ಅಭಿಮಾನಿ ಬಳಗ ಹೇಳಿಕೊಳ್ಳುತ್ತಿದೆ. ಇನ್ನೂ ಕಿರಿತೆರೆಯ ತಾರೆಯರೂ ಕೂಡ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಮಹಿಳೆಯೇ ವಿನ್ ಆಗಬೇಕು. ಹೀಗಾಗಿ ಮಹಿಳೆಗೆ ಓಟ್ ಮಾಡಿ ಗೆಲ್ಲಿಸಿ ಎಂದು ಹೇಳುವ ಮೂಲಕ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಭವ್ಯಾ ಗೌಡ ಹೋದ ಬಳಿಕ ಉಳಿದಿರುವುದು ಮೋಕ್ಷಿತಾ ಮಾತ್ರ. ಹೀಗಾಗಿ ಈ ಬಾರಿ ವಿನ್ ಆಗುವ ಮಹಿಳೆ ಅಂದರೆ ಮೋಕ್ಷಿತಾ ಅವರೇ ಎಂದು ಕೆಲ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಬಹುತೇಕ ಸಮೀಕ್ಷೆಗಳ ಪ್ರಕಾರ ಹನುಮಂತ ವಿನ್ ಆಗುತ್ತಾರೆ ಹಾಗೂ ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಮೋಕ್ಷಿತಾ ಅಥವಾ ಮಂಜು ಮೂರನೇ ಸ್ಥಾನದಲ್ಲಿ ಉಳಿಯಲಿದ್ದಾರೆ ಎಂದಿದೆ. ಇಂದು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದು ಬಿಗ್‌ಬಾಸ್‌ ಕೊನೆಯ ಸಂಚಿಕೆಯಾಗಿದ್ದು ಈ ದಿನ ಕೊನೆಯಲ್ಲಿ ಹೊರ ಬರುವ ಸ್ಪರ್ಧಿಯ ಕೈಗೆ ಟ್ರೋಫಿ ಸಿಗಲಿದೆ. ಇಂದಿನ ಗ್ರ್ಯಾಂಡ್ ಫಿನಾಲೆ ಆರಂಭಕ್ಕೆ ಕೌಂಟಡೌನ್ ಶುರುವಾಗಿದ್ದು ಕೆಲ ಗಂಟೆಗಳಲ್ಲಿ ಟ್ರೋಫಿ ಯಾರ ಕೈ ಸೇರಲಿದೆ ಎಂದು ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+