ಸಖತ್ ಟ್ವಿಸ್ಟ್..ಬಿಗ್ ಬಾಸ್ ಮನೆಗೆ ಶೀಘ್ರದಲ್ಲೇ ಹೊಸ ಎಂಟ್ರಿ: ಇನ್ನುಂದೆ ಫುಲ್ ಜಾಲಿ..ಜಾಲಿ
ಬಿಗ್ ಬಾಸ್ ಕನ್ನಡ ಸೀಜನ್ 11 ದಿನಕ್ಕೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಈ ಸೀಜನ್‌ನಲ್ಲಿ ಈಗಾಗಲೇ ಬಾರಿ ಮೂರು ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ವಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಹಾಡುಗಾರ ಹನುಮಂತ ವಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರೆ, ಇನ್ನೇನು ಅರ್ಧ ಸೀಜನ್‌ಮುಗಿತು ಎನ್ನುವಷ್ಟರಾಗಲೇ ಇಬ್ಬರು ಸ್ಪಧಿಗಳು ಮತ್ತೆ ವಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದಿದ್ದ ಶೋಭಾ ಶೆಟ್ಟಿ ಹಾಗೂ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಶೋಭಾ ಶೆಟ್ಟಿ ಹಾಗೂ ರಜತ್ ಮನೆಯೊಳಗೆ ಬಂದು ಎರಡು ವಾರ ಕಳೆದಿದೆ.

ಈಗ ಆಟ ರೋಚಕ ಹಂತಕ್ಕೆ ತಲುಪಿದ್ದು, ಮನೆಯಲ್ಲಿ ಉಳಿಯುವರ್ಯಾರು ಹೊರಗೆ ಹೋಗುವವರು ಯಾರು ಎನ್ನುವುದು ಲೆಕ್ಕಾಚಾರ ಹಾಕುವುದೇ ಪ್ರೇಕ್ಷಕರಿಗೆ ಕಷ್ಟವಾಗುತ್ತಿದೆ. ಆಟ, ಹೋರಾಟ, ಜಗಳ, ಮನಸ್ಥಾಪ, ವಾಗ್ವಾದಗಳ ನಡುವೆ ಸಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಜನ್ 11 ರಲ್ಲಿ ಸದ್ಯದಲ್ಲಿ ಮತ್ತೊಂದು ರೋಚಕ ಟ್ವಿಸ್ಟ್ ಇದೆ.
ಹೌದು ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾದ ನಟ ಜಾಲಿ..ಜಾಲಿ ಖ್ಯಾತಿಯ ಜಾಲಿ ಜಾಕ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ಜಾಲಿ ಜಾಕ್ ಫಿಲ್ಮೀಬೀಟ್ ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿದ ಅವರು, 'ಬಿಗ್ ಬಾಸ್ ಕನ್ನಡ ಸೀಜನ್ 11ಕ್ಕೆ ಕರೆದಿದ್ದಾರೆ. ಬಿಗ್ ಬಾಸ್ ಮನೆಯಿಂದ ಕೂಡ ಕರೆದಿದ್ದಾರೆ. ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬರಲು ಹೇಳಿದ್ದಾರೆ. ಈ ಸೀಸನ್‌ಗೆ ಬರಲು ಹೇಳಿದ್ದಾರೆ. ಸದ್ಯದಲ್ಲೇ ಹೋಗೆ ಹೋಗುತ್ತೇನೆ. ಅವರು ಯಾವಾಗ ಕರೆಯುತ್ತಾರೋ ಗೊತ್ತಿಲ್ಲ. ಈಗಾಗಲೇ ನನ್ನ ಬಗ್ಗೆ ಎಲ್ಲಾ ಮಾಹಿತಿ ತೆಗೆದುಕೊಂಡಿದ್ದಾರೆ' ಎಂದರು.
'ಅಲ್ಲಿನೂ ಫುಲ್ ಜಾಲಿ..ಜಾಲಿ..ನಮ್ಮನ್ನು ಕರೆಯೋದೆ ಅಲ್ಲಿ ಫುಲ್ ಜಾಲಿ..ಜಾಲಿ ಮಾಡೋಕೆ. ಇಡಿ ಕರ್ನಾಟಕನೇ ನನ್ನ ನೋಡಿದ ತಕ್ಷಣ ಒಂದು ನಗು ಕೊಡುತ್ತಾರೆ. ಯಾರೇ ಆಗಲಿ ನನ್ನ ನೋಡಿ ಜಾಲಿ..ಜಾಲಿ ಅಂತಾ ಖುಷಿ ಪಡುತ್ತಾರೆ. ನಮ್ಮನ್ನು ನೋಡಿ ಅವರು ಖುಷಿ ಪಡುತ್ತಾರೆ ಎನ್ನುವುದೇ ನಮಗೆ ಸಂತೋಷ. ಜನ ಜಾಲಿಯಾಗಿದ್ದಾರಲ್ಲಾ ಅಂತಾ ಖುಷಿ ಆಗುತ್ತದೆ' ಎಂದು ಜಾಲಿ ಜಾಕ್ ಹೇಳಿದ್ದಾರೆ.
ಅಲ್ಲದೇ ಇಂತಹವೊಂದು ಅವಕಾಶವನ್ನು ದೇವರು ಯಾರಿಗೂ ಕೊಡಲ್ಲ. ಯಾರೋ ಒಬ್ಬರಿಗೆ ಮಾತ್ರ ಕೊಡುವುದು. ಆ ಭಾಗ್ಯ ನಮಗೆ ಬಂದಿದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು ಎಂದು ಜಾಲಿ ಜಾಕ್ ತಮ್ಮ ಖುಷಿಯನ್ನು ಫಿಲ್ಮೀಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.












Click it and Unblock the Notifications