Bigg Boss: ಬಿಗ್‌ ಬಾಸ್‌ ಮನೆಯಿಂದ ಇಂದೇ ಮೂವರು ಔಟ್‌: ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ

ಕಿರುತೆರೆ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಕಳೆದೊಂದು ವಾರದಿಂದ ಕೌಂಟ್‌ಡೌನ್ ಶುರು ಮಾಡಿದ್ದ ಪ್ರೇಕ್ಷಕರು ನಿರೀಕ್ಷಿಸಿದ ದಿನ ಕೊನೆಗೂ ಬಂದಿದೆ. ಹೌದು ಇಂದು ಹಾಗೂ ನಾಳೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಕಾರ್ಯಕ್ರಮ ಆರಂಭವಾಗಲಿದೆ.

ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್‌ ಬಾಸ್‌ ಸ್ಪರ್ಧಿಗಳು ಈಗ ಫಿನಾಲೆಗೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ. ರಜತ್‌, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಫಿನಾಲೆ ವಾರವನ್ನು ಸಖತ್‌ ಎಂಜಾಯ್‌ ಮಾಡಿದ್ದಾರೆ. ಜೊತೆಗೆ ಸೋಲು-ಗೆಲುವಿನ ಲೆಕ್ಕಚಾರ ಸ್ಪರ್ಧಿಗಳ ನಿದ್ದೆಗೆಡಿಸಿದೆ.

Bigg Boss Kannada Season 11 Grand Finale Update

ಇತ್ತ ಹೊರಗಡೆ ಪ್ರೇಕ್ಷಕರ ಕಾತುರ, ಕುತೂಹಲ ಕೂಡ ಹೆಚ್ಚಾಗಿದ್ದು, ಈ ಬಾರಿ ವಿನ್ನರ್‌ ಯಾರಾಗಬಹುದು ಎನ್ನುವುದು ಊಹಿಸುವುದು ಕೂಡ ಕಷ್ಟವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮ ಆರಂಭವಾಗಲಿದ್ದು, ಯಾರ ಪಾಲಿಗೆ ಅದೃಷ್ಟ ಒಲಿಯಲಿದೆ ಎನ್ನುವುದು ಬಹಿರಂಗವಾಗಲಿದೆ. ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮ ಇಂದು ಹಾಗೂ ನಾಳೆ ಪ್ರಸಾರವಾಗಲಿದ್ದು, ಇಂದಿನ ಸಂಚಿಕೆಯಲ್ಲಿ ಕೆಲ ಸ್ಪರ್ಧಿಗಳು ಮನೆಯಿಂದ ಹೊರ ಹೋಗಲಿದ್ದಾರೆ.

ಸದ್ಯ ಮನೆಯಲ್ಲಿರುವ ಆರು ಫಿನಾಲೆ ಸ್ಪರ್ಧಿಗಳ ಪೈಕಿ ಇಂದು ಮೂರು ಜನರು ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವ ಸಾಧ್ಯತೆಯಿದ್ದು, ನಾಳೆ ಮೂವರು ಗ್ರ್ಯಾಂಡ್‌ ಫಿನಾಲೆ ವೇದಿಕೆಗೆ ಬರಲಿದ್ದಾರೆ. ಇಂದು ಮನೆಯಿಂದ ಹೊರ ಬರುವವರ್ಯಾರು? ರು ಗ್ರ್ಯಾಂಡ್‌ ಫಿನಾಲೆ ವೇದಿಕೆಗೆ ಬರುವವರ್ಯಾರು? ಎನ್ನುವ ಕ್ಷಣ ಕ್ಷಣದ ಬಿಗ್ ಬಾಸ್ ಎಕ್ಸ್‌ಕ್ಲ್ಯೂಸಿವ್ (Exclusive) ಸುದ್ದಿಗಳು ಒನ್‌ ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಲಿದ್ದು, ಮಿಸ್‌ ಮಾಡದೇ ಓದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+