ಬಿಗ್ ಬಾಸ್ ಮನೆಗೆ ಬೆಂಕಿ ಹಚ್ಚುತ್ತೇನೆ: ದೊಡ್ಮನೆ ಮುಂದೆ ಯುವಕನ ಹುಚ್ಚಾಟ
ಬಿಗ್ ಬಾಸ್ ಕನ್ನಡ ಸೀಜನ್ 11 ಒಂಬತ್ತು ವಾರಗಳನ್ನು ಯಶಸ್ವಿಯಾಗಿ ಮುಗಿಸಿ ಮುಂದಿನ ವಾರದತ್ತ ಹೆಜ್ಜೆ ಇಡುತ್ತಿದೆ. ಮೊದ ಮೊದಲು ಬರೀ ಜಗಳ, ಜಂಜಾಟ, ಗಲಾಟೆ ಎಂದೆಲ್ಲಾ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದ ಬಿಗ್ ಬಾಸ್ ಕನ್ನಡ ಸೀಜನ್ 11 ಈಗೀಗ ಇಂಟ್ರಸ್ಟಿಂಗ್ ಎನಿಸುತ್ತಿದೆ. ಮೊದಲು ಬಂದ ಸ್ಪರ್ಧಿಗಳಲ್ಲದೇ ಈಗಾಗಲೇ ಮೂವರು ಸ್ಪರ್ಧಿಗಳು ವಲ್ಡ್ ಕಾರ್ಡ್ ಎಂಟ್ರಿ ಕೂಡ ಪಡೆದಿದ್ದಾರೆ.
ಇದೆಲ್ಲಾ ಮನೆಯೊಳಗಿನ ಬೆಳವಣಿಗೆಯಾದರೆ, ಬಿಗ್ ಬಾಸ್ ಮನೆಯ ಹೊರಗೆ ಯುವಕನೊಬ್ಬ ಬಿಗ್ ಬಾಸ್ ಮನೆಗೆ ಬೆಂಕಿ ಹುಚ್ಚುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಕನೊಬ್ಬ ಹಲವು ದಿನಗಳಿಂದ ಬಿಗ್ ಬಾಸ್ ಮನೆಯ ಹೊರಗಿನ ಗೇಟ್ ಬಳಿ ವಿಡಿಯೋ ಮಾಡಿ ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದ.

ಈಗ ಇದೇ ಯುವಕ ಬಿಗ್ ಬಾಸ್ ಈಗ ಮನೆ ಮುಂದೆ ಪಟಾಕಿ ಹಚ್ಚಿದ್ದೇನೆ ಮುಂದಿನ ಸೀಜನ್‌ನಲ್ಲಿ ನನ್ನನ್ನು ಮನೆಯೊಳಗೆ ಕರೆದಿಲ್ಲ ಎಂದರೆ ಬಿಗ್ ಬಾಸ್ ಮನೆಗೆ ಬೆಂಕಿ ಹಚ್ಚುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. mummy_ashok16 ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ತಲೆ ಇಲ್ಲ ಎಂದುಕೊಂಡಿದ್ದೆ, ನೋಡಿದರೆ ಬಿಗ್ ಬಾಸ್‌ಗೆ ತಲೆ ಇಲ್ಲ. ಯಾರನ್ನ ಮನೆಯೊಳಗೆ ಕರೆಯಬೇಕು ಯಾರನ್ನು ಕರೆಯಬಾರದು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದಿರುವ ಈ ಯುವಕ ಪ್ರತಿ ಬಾರಿಯೂ ಬಿಗ್ ಬಾಸ್ ಮನೆ ಮುಂದೆ ನಿಂತು ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಅದಕ್ಕೊಂದು ಹಾಡು ಹಾಕಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ. ಇದಕ್ಕೆ ಕಾರಣ ಕೂಡ ಇದೆ.
ಈ ಬಾರಿ ಬಿಗ್ ಬಾಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರನ್ನು ಸ್ಪರ್ಧಿಗಳಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಹೀಗಾಗಿ ಯುವಕ ಇನ್ಸ್ಟಾಗ್ರಾಮ್‌ನಲ್ಲಿ ಖಾತೆ ಹೊಂದಿದ್ದು ಕೆಲವು ವಿಡಿಯೋಗಳನ್ನು ಮಾಡುತ್ತಿದ್ದ ಅದರಲ್ಲಿ ಕೆಲವು ವೈರಲ್ ಆಗಿದ್ದವು. ಆದರೆ ಈ ಬಾರಿ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಬಿಗ್ ಬಾಸ್ ಮನೆಯ ಮುಂದೆಯೇ ವಿಡಿಯೋ ಮಾಡಿದ್ದು, ತನ್ನನ್ನು ಒಳಗೆ ಕರೆದುಕೊಳ್ಳುವಂತೆ ಬಿಗ್ ಬಾಸ್ ಬಳಿ ಹೇಳುತ್ತಿದ್ದ. ಅಲ್ಲದೇ ಕೆಲವು ಹೈಡ್ರಾಮಗಳನ್ನು ಬಿಗ್ ಬಾಸ್ ಮನೆ ಬಳಿ ಮಾಡುತ್ತಿದ್ದ.

ಆದರೆ ಈ ಬಾರಿ ಬಿಗ್ ಬಾಸ್ ಮನೆಗೆ ಬೆಂಕಿ ಹುಚ್ಚುತ್ತೇನೆ ಎಂದು ಈ ಯುವಕ ಹೇಳಿದ್ದಾನೆ. ಈ ವಿಡಿಯೋ ನೆಟ್ಟಿಗರು ಈತನನ್ನು ತರಾಟೆಗೆ ತೆಗೆದುಕೊಂಡಿದ್ದು, ಹೀಗೆ ಮಾಡಿದರೆ ಮುಂದಿನ ಸೀಜನ್ ಅಷ್ಟರಲ್ಲಿ ನೀನು ಜೈಲಿನಲ್ಲಿ ಇರುತ್ತೀಯಾ ಎಂದಿದ್ದಾರೆ. ಈ ಮೂಲಕ ಈ ರೀತಿಯ ವಿಡಿಯೋಗಳನ್ನು ಮಾಡಿದರೆ ಕಾನೂನು ಕ್ರಮ ಪಕ್ಕಾ ಎಂದು ಪರೋಕ್ಷವಾಗಿ ಯುವಕನಿಗೆ ಅನೇಕರು ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications