Bigg Boss Kannada: ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳು ಇವರೇನಾ?

ಬಿಗ್ ಬಾಸ್ ರಿಯಾಲಿಟಿ ಶೋ ಅಂದ್ರೆ ದೇಶದಲ್ಲಿ ಒಂದು ಗತ್ತು ಇದೆ. ಅದರಲ್ಲೂ ಹಿಂದಿ ಬಿಗ್ ಬಾಸ್ ಶೋ ಬಿಟ್ಟರೆ ಕನ್ನಡದ ಬಿಗ್ ಬಾಸ್ ಸಾಕಷ್ಟು ಹೆಸರು ಮಾಡಿದೆ. ನಟ ಕಿಚ್ಚ ಸುದೀಪ್ ನಿರೂಪಣೆ ಎಲ್ಲರ ಗಮನ ಸೆಳೆಯುತ್ತದೆ. ಇದೀಗ ಬಿಗ್ ಬಾಸ್ ಸೀಸನ್ 10ಗೆ ಸಕಲ ಸಿದ್ಧತೆ ಆರಂಭವಾಗಿದ್ದು, ಸ್ಪರ್ಧಿಗಳ ಪಟ್ಟಿ ಕೂಡ ಸಂಚಲನ ಸೃಷ್ಟಿಸಿದೆ. ಹಾಗಾದರೆ ಈ ಬಾರಿ ಯಾರೆಲ್ಲಾ ಬರ್ತಾರೆ ಬಿಗ್ ಬಾಸ್ ಮನೆಗೆ?

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ಅಸಲಿ ಆಟವು ಇದೇ ಅಕ್ಟೋಬರ್ 8ಕ್ಕೆ ಶುರುವಾಗಲಿದೆ. ಕೇವಲ 4 ದಿನ ಬಾಕಿ ಇದ್ದು, ಬಿಗ್ ಬಾಸ್ ಅಭಿಮಾನಿ ಬಳಗ ಇದಕ್ಕಾಗಿ ಕಾಯುತ್ತಿದೆ. ಹಾಗೇ ಇಡೀ ಶೋ ಕೇಂದ್ರ ಬಿಂದು ಬಿಗ್ ಬಾಸ್ ಮನೆಯ ಅಂತಿಮ ತಯಾರಿ ಕೂಡ ಸಾಗಿದೆ. ಮತ್ತೊಂದು ಕಡೆ ಈ ಬಾರಿ ಸೀಸನ್ ಯಾವ ಯಾವ ಸ್ಪರ್ಧಿಗಳನ್ನ ಬರಮಾಡಿಕೊಳ್ಳುತ್ತೆ? ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ! ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

bigg-boss-kannada-season-10

ಬಿಗ್ ಬಾಸ್ 10 ಸ್ಪರ್ಧಿಗಳು ಇವರೇನಾ?

ಹೌದು, ಅಕ್ಟೋಬರ್ 8ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪ್‌ನಿಂಗ್‌ ನಡೆಯಲಿದೆ. ಹಾಗಾದರೆ ಇಲ್ಲಿ ಒಂದಷ್ಟು ಸ್ಪರ್ಧಿಗಳ ಹೆಸರು ಜೋರಾಗಿ ಓಡಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ಜೋರಾಗಿದೆ. ಹಾಗಾದರೆ ಯಾರು ಆ ಸ್ಪರ್ಧಿಗಳು? ಈ ಬಾರಿ ಬಿಗ್ ಬಾಸ್ ಸೀಸನ್‌ಗೆ ಎಂಟ್ರಿ ಕೊಡುವ ಮುಖಗಳು ಯಾವುವು? ಎಂಬ ಕುತೂಹಲ ದುಪ್ಪಟ್ಟಾಗುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಇ...

ಅಂದಹಾಗೆ ಇಲ್ಲಿ ತನಕ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ಅಂತಿಮವಾಗಿಲ್ಲ, ಆದರೂ ಇಲ್ಲಿ ಕೆಲವರು ಹೆಸರು ಓಡಾಡುತ್ತಿದೆ. ಆ ಪೈಕಿ, ಮೊದಲ ಸ್ಪರ್ಧಿಯಾಗಿ '777 ಚಾರ್ಲಿ' ಎಂಟ್ರಿ ಕೊಡುವ ವಿಚಾರ ಪಕ್ಕಾ ಆಗಿದೆ. '777 ಚಾರ್ಲಿ' ಜತೆ ನಟರಾದ ಸುನೀಲ್ ರಾವ್, ಭವ್ಯಾ ಗೌಡ, ರಘು ಮುಖರ್ಜಿ, ಸಮಾಜ ಸೇವಕಿ ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜನಿ...

ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿ ರಾಜೇಶ್ ಧ್ರುವ ಹಾಗೂ ಮಿಮಿಕ್ರಿ ಗೋಪಿ ಸೇರಿದಂತೆ ಕ್ರಿಕೆಟರ್ ವಿನಯ್ ಕುಮಾರ್ ಹಾಗೆ ಪೋಷಕ ನಟಿ ಸ್ವಾತಿ ಮತ್ತು ರಕ್ಷಕ್ ಬುಲೆಟ್ ಪ್ರಕಾಶ್, ರ‍್ಯಾಪರ್ ಇಶಾನಿ ಸೇರಿ ಹಲವರು ಹೆಸರು ಪಟ್ಟಿಯಲ್ಲಿದೆ. ಹೀಗಾಗಿ ಇವರಲ್ಲಿ ಯಾರೆಲ್ಲಾ ಬರ್ತಾರಪ್ಪಾ? ಅಂತಾ ಬಿಗ್ ಬಾಸ್ ಫ್ಯಾನ್ಸ್ ಕಾಯುತ್ತಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಇನ್ನು ಕೆಲವೇ ದಿನದಲ್ಲಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+