Bhavya Gowda: ಪ್ರೀತಿಯಲ್ಲಿ ಬಿದ್ರಾ ಬಿಗ್‌ಬಾಸ್‌ ಭವ್ಯ ಗೌಡ: ಹುಡುಗ ಯಾರು..?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಇನ್ನೇನು ಅರ್ಧ ಸೀಜನ್‌ ಮುಗಿತು ಎನ್ನುವಷ್ಟರಾಗಲೇ ಇಬ್ಬರು ಸ್ಪಧಿಗಳು ಮತ್ತೆ ವಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ಹನುಮಂತನ ಬಳಿಕ ರಜತ್‌ ಹಾಗೂ ಶೋಭಾ ಶೆಟ್ಟಿ ಕನ್ನಡ ಬಿಗ್‌ ಬಾಸ್‌ ಸೀಜನ್‌ 11ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಇನ್ನಷ್ಟು ರೋಚಕವಾಗುವ ಸಾಧ್ಯತೆ ಇದೆ.

ಇತ್ತ ಇಷ್ಟು ದಿನಗಳ ಕಾಲ ಮನೆಯೊಳಗಿದ್ದ ಸ್ಪರ್ಧಿಗಳು ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಈ ಪೈಕಿ ಭವ್ಯ ಗೌಡ ಕೂಡ ಒಬ್ಬರು. ಗೀತಾ ಧಾರಾವಾಹಿ ಮೂಲಕ ಕಿರುತೆರೆ ಪ್ರಯಾಣ ಆರಂಭಿಸಿದ ಭವ್ಯ ಗೌಡ ಈ ಬಾರಿಯ ಬಿಗ್‌ ಬಾಸ್‌ನ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಮೊದಮೊದಲು ಓವರ್‌ ಆ್ಯಕ್ಟಿಂಗ್‌ ಅಂತೆಲ್ಲಾ ಟ್ರೋಲ್‌ ಆಗುತ್ತಿದ್ದ ಭವ್ಯ ಗೌಡ ಇದೀಗ ಪ್ರಬಲ ಸ್ಪರ್ಧಿಯಾಗಿ ಮನೆಯ ಕ್ಯಾಪ್ಟನ್‌ ಕೂಡ ಆಗಿದ್ದಾರೆ.

Bigg Boss Kannada Contestants Bhavya Gowda Statement Regarding Love Goes Viral

ಭವ್ಯ ಗೌಡ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೂ ಕೂಡ ಇಷ್ಟವಾಗುತ್ತಿದ್ದು, ಆಟ, ಮನೋರಂಜನೆ ಜೊತೆಗೆ ಎಲ್ಲೆಲ್ಲಿ ತಮ್ಮ ನಿಲುವು ಗಟ್ಟಿ ಮಾಡಿಕೊಳ್ಳಬೇಕು ಅಲ್ಲಲ್ಲಿ ಧ್ವನಿ ಎತ್ತುತ್ತಿದ್ದಾರೆ. ತಮ್ಮ ಬಗ್ಗೆ ಮನಬಂದಂತೆ ಮಾತನಾಡುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ವೀಕೆಂಡ್‌ಗಳಲ್ಲಿ ಅತೀ ಮುದ್ದಾಗಿ ಕಾಣುವ ಭವ್ಯ ಗೌಡ ಮೇಲೆ ಈಗಾಗಲೇ ಅನೇಕರಿಗೆ ಕ್ರಶ್‌ ಆಗಿರಬಹುದು. ಈ ರೀತಿ ಕ್ರಶ್‌ ಆದವರಿಗೆ ನಿರಾಸೆಯಾಗುವಂತಹ ಹೇಳಿಕೊಂದನ್ನು ಇದೀಗ ಭವ್ಯ ಗೌಡ ನೀಡಿದ್ದಾರೆ.

ಪ್ರೀತಿ ಬಗ್ಗೆ ಬಾಯ್ಬಿಟ್ಟ ಭವ್ಯ ಗೌಡ

ಹೌದು, ಈಗಾಗಲೇ ತಾವು ಪ್ರೀತಿಯಲ್ಲಿ ಇರುವ ಬಗ್ಗೆ ಭವ್ಯ ಗೌಡ ಸುಳಿವೊಂದನ್ನು ನೀಡಿದ್ದಾರೆ. ಈ ಬಾರಿಯ ವೀಕೆಂಡ್‌ ಎಪಿಸೋಡ್‌ನಲ್ಲಿ ಉಗ್ರಂ ಮಂಜು ಜೊತೆ ವಾಗ್ವಾದಕ್ಕಿಳಿದ ಭವ್ಯ, ನನ್ನ ಮತ್ತು ತ್ರಿವಿಕ್ರಮ್‌ ಹೆಸರು ಜೊತೆಯಾಗಿ ಹೇಳಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉಗ್ರಂ ಮಂಜು ಹೌದು ಎಂದು ಉತ್ತರ ಕೊಟ್ಟಿದ್ದಾರೆ. ಮಂಜು ಉತ್ತರಕ್ಕೆ ಕೆಂಡಾಮಂಡಲ ಆದ ಭವ್ಯ ಗೌಡ, ಸ್ವಲ್ಪ ಬೇಸಿಕ್‌ ಸೆನ್ಸ್‌ ಇಟ್ಟುಕೊಂಡು ಮಾತನಾಡಿ ಎಂದು ಕಿಡಿಕಾರಿದ್ದಾರೆ.

Bigg Boss Kannada Contestants Bhavya Gowda Statement Regarding Love Goes Viral

'ನಿಮಗೆ ಹೇಗೆ ಹೊರಗಡೆ ಕುಟುಂಬ ಇದೆಯೋ..? ನನಗೂ ಹಾಗೇ ಹೊರಗಡೆ ನನ್ನ ಕುಟುಂಬ ಇದೆ. ಅರ್ಥ ಮಾಡಿಕೊಳ್ಳಿ. ವಾರ ವಾರಕ್ಕೂ ನೋಡುತ್ತಿದ್ದೇನೆ. ತ್ರಿವಿಕ್ರಮ್‌ ಅಂದರೆ ಭವ್ಯ, ಭವ್ಯ ಅಂದರೆ ತ್ರಿವಿಕ್ರಮ್‌ ಮಾಡೋಕೆ ಬೇರೆ ಕೆಲಸ ಇಲ್ವಾ ನಿಮಗೆ..? ಹಂಗಿದ್ದರೆ ನಿಮ್ಮ ಇಬ್ಬರ ಗೆಳತನದ ಬಗ್ಗೆ ನಾನು ಮಾತನಾಡಲಾ..? ನಿಮ್ಮಷ್ಟು ಚೀಪ್‌ ಮೆಂಟಾಲಿಟಿ ನನಗೆ ಇಲ್ಲ.

ನಿಮ್ಮ ಊಹಾಪೋಹಗಳಿಗೆ ಯಾರು ಇಲ್ಲಿ ಬದ್ಧರಾಗಿಲ್ಲ. ಹೇಳಿಕೆ ಕೊಡುವಾಗ ಸರಿಯಾಗಿ ಕೊಡಿ. ನನ್ನನ್ನು ಇಷ್ಟಪಡುವ ವ್ಯಕ್ತಿ ಹೊರಗಡೆ ಇದ್ದಾರೆ. ನಿಮ್ಮ ಸ್ಟೇಟ್‌ಮೆಂಟ್‌ಗಳಿಂದ ನನ್ನನ್ನು ನೋಡುವ ರೀತಿ ಬೇರೆ ಆಗುತ್ತದೆ. ಎಲ್ಲವನ್ನೂ ನೀವು ಅರ್ಥ ಮಾಡಿಕೊಳ್ಳಿ' ಎನ್ನುವುದರ ಮೂಲಕ ತಮ್ಮ ಹೆಸರನ್ನು ಬೇರೆಯವರ ಹೆಸರಿನ ಜೊತೆ ತಳುಕು ಹಾಕದಂತೆ ಭವ್ಯ ಗೌಡ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಭವ್ಯ ಗೌಡ ಈ ಹೇಳಿಕೆ ಈಗ ವೈರಲ್‌ ಆಗುತ್ತಿದ್ದು, ಅವರನ್ನು ಇಷ್ಟಪಡುತ್ತಿರುವ ವ್ಯಕ್ತಿ ಹೊರಗಡೆ ಇದ್ದಾರೆ. ಅಂದರೆ ಭವ್ಯ ಗೌಡ ಇಷ್ಟಪಡುತ್ತಿರುವ ವ್ಯಕ್ತಿ ಅವರಿರಬಹುದು ಎಂದು ಕೆಲವು ಪ್ರೇಕ್ಷಕರು ಅಂದಾಜಿಸುತ್ತಿದ್ದಾರೆ. ಈ ಗೊಂದಲ ಹಾಗೂ ಕುತೂಹಲಕ್ಕೆ ಭವ್ಯ ಗೌಡ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲಷ್ಟೇ ಉತ್ತರ ಸಿಗುವ ಸಾಧ್ಯತೆ ಇದೆ. ಅದೇನೇ ಇರಲಿ. ಈಗೀಗ ಭವ್ಯ ಗೌಡ ಆಟ ನೋಡಿದ ಪ್ರೇಕ್ಷಕರು ಇವರು ಪಕ್ಕಾ ಫೈನಲಿಸ್ಟ್ ಎಂದು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+