'ಅಂಕಲ್-ಆಂಟಿ ಲವ್‌ ಸ್ಟೋರಿ' ಟ್ರೋಲ್‌: ಗೌತಮಿ ಕುಟುಂಬಸ್ಥರ ರಿಯ್ಯಾಕ್ಷನ್‌ ಹೇಗಿತ್ತು?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರಲ್ಲಿ ಸ್ಪರ್ಧಿಗಳ ನಡುವೆ ಲವ್‌ ಸ್ಟೋರಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಸುಂದರವಾದ ಗೆಳೆತನ ಇದ್ದಿದ್ದಂತೂ ಸತ್ಯ. ಗೌತಮಿ ಜಾದವ್‌, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವೆ ಕಾರ್ಯಕ್ರಮ ಆರಂಭದಲ್ಲೇ ಒಂದೊಳ್ಳೆ ಸ್ನೇಹ ಬಾಂಧವ್ಯ ಬೆಳೆದುಕೊಂಡಿತ್ತು.

ಅದೇನಾಯ್ತೋ ಗೊತ್ತಿಲ್ಲ ಮೋಕ್ಷಿತಾ ಕೆಲ ದಿನಗಳ ನಂತರ ಇವರಿಬ್ಬರ ಸ್ನೇಹದಿಂದ ಅಂತರ ಕಾಯ್ದುಕೊಂಡರು. ಆದರೆ ಗೌತಮಿ ಜಾದವ್‌ ಮತ್ತು ಉಗ್ರಂ ಮಂಜು, ಗೌತಮಿ ಮನೆಯಿಂದ ಹೊರ ಹೋಗುವ ಕೊನೆ ದಿನದ ವರೆಗೂ ಉತ್ತಮ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹದ ಬಗ್ಗೆ ಹೊರಗಡೆ ಕೆಲವು ನೆಗೆಟಿವ್‌ ಟ್ರೋಲ್‌ಗಳು ಹರಿದಾಡುತ್ತಿದ್ದವು. ಅದರಲ್ಲೂ ಅಂಕಲ್-ಆಂಟಿ ಲವ್‌ ಸ್ಟೋರಿ ಎನ್ನುವ ಟ್ರೋಲ್‌ ಸಖತ್‌ ವೈರಲ್‌ ಆಗಿತ್ತು. ಈ ಬಗ್ಗೆ ಇದೀಗ ಸ್ವತಃ ಗೌತಮಿ ಜಾದವ್‌ ಪ್ರತಿಕ್ರಿಯಿಸಿದ್ದು, ಇಂತಹ ಟ್ರೋಲ್‌ಗಳನ್ನು ತಮ್ಮ ಕುಟುಂಬಸ್ಥರು ಹೇಗೆ ಸ್ವೀಕರಿಸಿದರು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

Bigg Boss Kannada Contestant Gauthami Jadav Responds To Uncle Aunt Love Story Trolls

'ದೇವರಿಗೆ ಧನ್ಯವಾದ ಹೇಳಬೇಕು. ನನ್ನ ಕುಟುಂಬಸ್ಥರು ಟ್ರೋಲ್‌ಗಳನ್ನು ಸ್ಪೋಟಿವ್‌ ಆಗಿ ತೆಗೆದುಕೊಂಡರು. ಈ ಟ್ರೋಲ್‌ಗಳೆಲ್ಲಾ ನನಗೆ ಹೊಸತು. ಆದರೆ ನನ್ನ ಫ್ಯಾಮಿಲಿ ಅವರು ಇದನೆಲ್ಲಾ ಎರಡು ಮೂರು ತಿಂಗಳಿನಿಂದ ನೋಡಿದ್ದಾರೆ. ತುಂಬಾ ಸ್ಪೋಟಿವ್‌ ಆಗಿ ತೆಗೆದುಕೊಂಡಿದ್ದಾರೆ. ಯಾಕೆಂದರೆ ಅವರಿಗೆ ನಾನೇನು ಎನ್ನುವುದು ಗೊತ್ತು. ಅದರ ಬಗ್ಗೆ ನನಗೆ ಖುಷಿ ಇದೆ' ಎಂದರು.

'ಈಗ ಈ ರೀತಿಯಲ್ಲಿ ಟ್ರೋಲ್‌ ಮಾಡುತ್ತಿರುವವರಿಗೆ ನಾನು ಹೇಗೆ ಏನು ಎನ್ನುವುದು ಗೊತ್ತಿಲ್ಲ. ಅಲ್ಲಿ ಆಟದಲ್ಲಿ ನೋಡಿದ್ದಾರೆ ಅಷ್ಟೇ. ನನ್ನ ಬಗ್ಗೆ ಅವರಿಗೆ ಗೊತ್ತಿದ್ದರೆ ಖಂಡಿತಾ ಮಾಡುತ್ತಿರಲಿಲ್ಲ. ಈಗ ನಾನೇನು ಹೇಳಬಹುದು ಎಂದರೆ ಈ ಅಂಕಲ್-ಆಂಟಿ ಲವ್‌ ಸ್ಟೋರಿ ಎನ್ನುವಂತಹದೆನೆಲ್ಲಾ ಇರಲಿಲ್ಲ. ಅಂಕಲ್-ಆಂಟಿ ಲವ್‌ ಸ್ಟೋರಿಯಲ್ಲಿ ಈ ಲವ್‌ ಸ್ಟೋರಿ ಎನ್ನುವುದೇ ಇರಲಿಲ್ಲ' ಎಂದು ಗೌತಮಿ ಜೋರಾಗಿ ನಕ್ಕಿದ್ದಾರೆ.

'ಅಂಕಲ್-ಆಂಟಿ ಎನ್ನುವುದು ಪ್ರೀತಿ. ಯಾರು ಯಾರನ್ನ ಬೇಕಾದರೂ ಅಂಕಲ್-ಆಂಟಿ ಅಂತಾ ಕರೆಯಬಹುದು. ಅದರ ಬಗ್ಗೆ ನನಗೇನೂ ಆಕ್ಷೇಪ ಇಲ್ಲ. ಜೊತೆಗೆ ಲವ್‌ ಸ್ಟೋರಿ ಕೂಡ ಇರಲಿಲ್ಲ. ನನ್ನ ಮತ್ತು ಮಂಜು ಅವರ ನಡುವೆ ಒಂದೊಳ್ಳೆ ಗೆಳೆತನ ಇತ್ತು ಎನ್ನುವ ಸ್ಪಷ್ಟನೆಯನ್ನು ನಾನು ಕೊಡಬಹುದು. ಇದೊಂದು ಟ್ರೋಲ್‌ ಅಷ್ಟೇ. ಯಾರ ಅಭಿಪ್ರಾಯ ಅಲ್ಲ. ಅಭಿಪ್ರಾಯಕ್ಕೂ ಟ್ರೋಲ್‌ಗೂ ವ್ಯತ್ಯಾಸ ಇದೆ' ಎಂದು ಗೌತಮಿ ಹೇಳಿದರು.

Bigg Boss Kannada Contestant Gauthami Jadav Responds To Uncle Aunt Love Story Trolls

'ನನ್ನ ಕಡೆಯಿಂದ ಜನರಿಗೆ ಒಂದು ಸ್ಪಷ್ಟನೆ ಎಂದರೆ ಅಂತಹದೆತ್ತಾ ಲವ್‌ ಸ್ಟೋರಿ ಇರಲಿಲ್ಲ. ನನ್ನ ಜೀವನದಲ್ಲಿ ಅಭಿಷೇಕ್‌ ಅವರ ಜೊತೆಗೆ ಮಾತ್ರ ಒಂದು ಸುಂದರವಾದ ಲವ್‌ ಸ್ಟೋರಿ ಇರುವುದು. ಅದನ್ನೇ ನಾನು ಏಳೇಳು ಜನ್ಮಕ್ಕೂ ಬೇಕು ಅಂತಾ ಬಯಸುವವಳು. ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆ ಅಂತೂ ಆಗಿಲ್ಲ. ಹೀಗಾಗಿ ಹೊಸ ಲವ್‌ ಸ್ಟೋರಿ ಇಲ್ಲ. ನಮ್ಮ ನಡುವೆ ಲವ್‌ ಸ್ಟೋರಿ ಇಲ್ಲ ಒಂದೊಳ್ಳೆ ಫ್ರೆಂಡ್‌ಶಿಪ್‌ ಸ್ಟೋರಿ ಅಂತೂ ಇದೆ' ಎಂದು ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗೌತಮಿ ಜಾದವ್‌ ಹೇಳಿದ್ದಾರೆ.

Image Credit- Gautami Jadhav Instagram

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+