ಬಿಗ್‌ಬಾಸ್ ಕನ್ನಡ ನಿರೂಪಣೆಗೆ ಕಿಚ್ಚ ಸುದೀಪ್ ನಂತರ ಈ ನಟನ ಭರ್ಜರಿ ಎಂಟ್ರಿ... Bigg Boss
ಕಿಚ್ಚ ಸುದೀಪ್ ಅಂದ್ರೆ ಬಿಗ್‌ಬಾಸ್ & ಬಿಗ್‌ಬಾಸ್‌ಗೆ ಮತ್ತೊಂದು ಬ್ರಾಂಡ್ ಅಂದ್ರೆ ಅದು ಕಿಚ್ಚ ಸುದೀಪ್ ಅಂತಾ ಕೋಟ್ಯಂತರ ಅಭಿಮಾನಿಗಳು ಹೇಳುತ್ತಾರೆ. ಆದರೆ ದಿಢೀರ್ ಕಿಚ್ಚ ಸುದೀಪ್ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ, ಬಿಗ್‌ಬಾಸ್ ಸೀಸನ್-11 ಮುಗಿದ ನಂತರ ಕಿಚ್ಚನ ಪಂಚಾಯಿತಿ ಇರೋದಿಲ್ಲ. ಅಂದ್ರೆ ಕಿಚ್ಚ ಸುದೀಪ್ ಇವತ್ತೇ ತಮ್ಮ ಬಿಗ್‌ಬಾಸ್ ಜರ್ನಿಯನ್ನ ಮುಗಿಸಿ ಹೋಗುತ್ತಿದ್ದಾರೆ. ಹೀಗಿದ್ದಾಗಲೇ....
ಹೌದು, ಬಿಗ್‌ಬಾಸ್ ಕನ್ನಡ ಭಾರತದ ಅತಿದೊಡ್ಡ ರಿಯಾಲಿಟಿ ಶೋಗಳ ಪೈಕಿ ಒಂದಾಗಿದೆ. ಹಾಗೇ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಬಿಗ್‌ಬಾಸ್ ಕನ್ನಡ ನೋಡುತ್ತಾರೆ ಜನ. ಹೀಗೆ, ಬಿಗ್‌ಬಾಸ್ ಕನ್ನಡ ಜಗತ್ತಿನಾದ್ಯಂತ ಕನ್ನಡದ ಕಂಪು ಹರಡುತ್ತಿದೆ. ಆದರೆ ದಿಢೀರ್ ಅಂತಾ ಕಿಚ್ಚ ಸುದೀಪ್ ಅವರು ನಿವೃತ್ತಿ ಪಡೆದು ಹೋಗುತ್ತಿರುವ ಹಿನ್ನೆಲೆ ಮುಂದೆ ಯಾರು ಆಂಕರ್ ಆಗ್ತಾರೆ? ಕಿಚ್ಚ ಸುದೀಪ್ ಅವರ ನಂತರ ಯಾರು ಬಿಗ್‌ಬಾಸ್ ಕನ್ನಡ ನಿರೂಪಣೆ ಮಾಡ್ತಾರೆ? ಅಂತಾ ಕಾಯುತ್ತಿದ್ದರು ಕೋಟ್ಯಂತರ ಕನ್ನಡಿಗರು. ಇಂತಹ ಸಮಯದಲ್ಲೇ, ಕೋಟ್ಯಂತರ ಜನರ ಪ್ರಶ್ನೆಗೆ ಉತ್ತರ....

ಬಿಗ್‌ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ನಂತರ...
ಅಂದಹಾಗೆ ಬಿಗ್‌ಬಾಸ್ ಕನ್ನಡ ಶುರುವಾಗಿ 11 ಸೀಸನ್ ಅತ್ಯಂತ ಯಶಸ್ವಿಯಾಗಿ ನಡೆಸಲು ಕಾರಣ ಆಗಿರುವ ಪ್ರಮುಖ ವಿಚಾರಗಳಲ್ಲಿ, ಕಿಚ್ಚ ಸುದೀಪ್ ಅವರ ನಿರೂಪಣೆ ಕೂಡ ಒಂದು ಎನ್ನಬಹುದು. ಯಾಕಂದ್ರೆ ಕಿಚ್ಚ ಸುದೀಪ್ ಅವರು ಅಷ್ಟು ಅಚ್ಚುಕಟ್ಟಾಗಿ ನಿರೂಪಣೆ ಮಾಡ್ತಾ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಜಾಗದಲ್ಲಿ, ಬಿಗ್‌ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ನಂತರ ಕನ್ನಡದ ಈ ಲೆಜೆಂಡ್ ನಟನ ಭರ್ಜರಿ ಎಂಟ್ರಿ....
ಕನ್ನಡದ ಬಿಗ್‌ಬಾಸ್ ನಿರೂಪಣೆ ಮಾಡಲು...
ಬಿಗ್‌ಬಾಸ್ ಕನ್ನಡ ನಿರೂಪಣೆ ಮಾಡುವ ಮುಂದಿನ ಸ್ಟಾರ್ ಯಾರು ಎಂಬ ಕೋಟಿ ರೂಪಾಯಿ ಪ್ರಶ್ನೆ ಇದೀಗ ಕನ್ನಡಿಗರನ್ನ ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಂತೆಯೇ ಆಗುತ್ತಿದೆ. ಕನ್ನಡ ರಿಯಾಲಿಟಿ ಶೋಗಳ ಅಖಾಡದಲ್ಲಿ ಈ ಹಿಂದಿನಿಂದ ಕೂಡ ಹವಾ ಇಟ್ಟಿರುವ ಸ್ಟಾರ್ ಒಬ್ಬರು, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮವನ್ನು ಮುಂದೆ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಹೌದು, ನಟ ರಮೇಶ್ ಅರವಿಂದ್ ಅವರೇ ಕಿಚ್ಚ ಸುದೀಪ್ ಅವರ ಜಾಗಕ್ಕೆ ಬಂದು ಬಿಗ್‌ಬಾಸ್ ಕನ್ನಡ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಹೊರ ಬಿದ್ದಿಲ್ಲ, ಹೀಗಾಗಿ ಅಧಿಕೃತ ಹೇಳಿಕೆಗಾಗಿ ಕಾದು ನೋಡಬೇಕಿದೆ. ರಮೇಶ್ ಅರವಿಂದ್ ಅವರ ಹೆಸರು ಕೇಳಿ ಅಭಿಮಾನಿಗಳು ಕೂಡ ಪುಳಕಿತರಾಗಿದ್ದು, ಅಧಿಕೃತ ಮಾಹಿಗಾಗಿ ಎಲ್ಲ ಕಾಯುತ್ತಿದ್ದಾರೆ.












Click it and Unblock the Notifications