ದುಬಾರಿ ಕಾರು ಖರೀದಿಸಿ ಎಲ್ಲರ ಹುಬ್ಬೇರಿಸಿದ ಐಶ್ವರ್ಯಾ ಸಿಂಧೋಗಿ

ಬಿಗ್‌ಬಾಸ್‌ ಬಳಿಕ ನಟಿ ಐಶ್ವರ್ಯಾ ಸಿಂಧೋಗಿ ಒಂದಿಲ್ಲೊಂದು ಸರ್‌ಪ್ರೈಸ್‌ ಕೊಡುತ್ತಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಐಶ್ವರ್ಯಾ ಹಲವು ಧಾರಾವಾಹಿಗಳಲ್ಲಿ ತಮ್ಮ ಪಾತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣದಿಂದಲೇ ಅವರು ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿಯಾಗಿಯೂ ಮಿಂಚಿದರು. ಇದೀಗ ಐಶ್ವರ್ಯಾ ಮತ್ತೊಂದು ಸರ್‌ಪ್ರೈಸ್‌ ನೀಡಿ, ಖುಷಿಯ ವಿಚಾರ ಹಂಚಿಕೊಂಡಿದ್ದಾರೆ. ದುಬಾರಿ ಬೆಲೆ ಕಾರನ್ನು ಖರೀದಿಸುವ ಮೂಲಕ ನಟಿ ಎಲ್ಲರ ಹುಬ್ಬೇರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಐಶ್ವರ್ಯಾ ಸಿಂಧೋಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರತಿಷ್ಠಿತ ಮೋರಿಸ್‌ ಗ್ಯಾರೇಜ್‌ ಕಂಪನಿಯ ಹೆಕ್ಟರ್‌ (Hector) ಕಾರನ್ನು ಖರೀದಿಸಿದ್ದಾರೆ. ಬಿಳಿ ಬಣ್ಣದ ತಮ್ಮ ಹೊಸ ಕಾರಿನೊಂದಿಗೆ ನಿಂತು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಐಶ್ವರ್ಯಾ ಸಿಂಧೋಗಿ ಜೊತೆಗೆ ಬಿಗ್‌ಬಾಸ್‌ ಸ್ಪರ್ಧಿಗಳಾದ ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ ಕೂಡ ಶೋರೂಂಗೆ ತೆರಳಿ ಐಶ್ವರ್ಯಾಗೆ ಶುಭಕೋರಿದ್ದಾರೆ.

Bigg Boss Kannada Aishwarya Sindhogi Buys MG Hector Luxury SUV Car

ಸಿಂಧೋಗಿ ಅವರು ಎಂಜಿ ಹೆಕ್ಟರ್ ಪ್ಲಸ್ ಕಾರನ್ನು ಖರೀದಿಸಿದ್ದು, ಇದರ ಬೆಲೆಯೂ ಭಾರತದಲ್ಲಿ ಸುಮಾರು 17 ಲಕ್ಷ ರೂಪಾಯಿಯಿಂದ 23.67 ಲಕ್ಷ ರೂಪಾಯಿ ಎನ್ನಲಾಗಿದೆ. ಬಿಗ್‌ಬಾಸ್‌ ಬಳಿಕ ಫುಲ್‌ ಜಾಲಿ ಮೂಡ್‌ಗೆ ಜಾರಿರುವ ನಟಿ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಶೋರೂಂನಲ್ಲಿ ಕೇಕ್‌ ಕಟ್‌ ಮಾಡಿ, ಕಾರು ಖರೀದಿಸಿದ ಸಂಭ್ರಮವನ್ನು ಸೆಲೆಬ್ರೇಟ್‌ ಮಾಡಿದ್ದಾರೆ.

ಐಶ್ವರ್ಯಾ, ಶಿಶಿರ್‌ ಶಾಸ್ತ್ರಿ, ಮೋಕ್ಷಿತಾ ಪೈ ಬಿಗ್‌ಬಾಸ್ ಸೀಸನ್‌ 11ರಲ್ಲಿ ಸ್ಪರ್ಧಿಗಳಾಗಿದ್ದರು. ಶೋ ಮುಗಿದ ಮೇಲೂ ಈ ಮೂವರು ಸಖತ್‌ ಎಂಜಾಯ್‌ ಮಾಡ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಶುರುವಾದ ಈ ಮೂವರ ಸ್ನೇಹ ಈಗಲೂ ಮುಂದುವರಿದಿದೆ. ಇತ್ತೀಚೆಗೆ ಕರ್ನಾಟಕದ ಪ್ರಮುಖ ಜಾಗಗಳಿಗೆ ಪ್ರವಾಸ ಕೈಗೊಂಡಿದ್ದ ಈ ಗ್ಯಾಂಗ್‌, ವಿದೇಶಕ್ಕೂ ಹೋಗಿ ಬಂದಿದ್ದರು.

Bigg Boss Kannada Aishwarya Sindhogi Buys MG Hector Luxury SUV Car

ಬಾಕು ಕೊಲ್ಲಿಯ ವಿಶಾಲವಾದ ಪ್ರದೇಶಗಳಲ್ಲಿ ಈ ಮೂವರೂ ಸುತ್ತಾಡಿರುವ ಫೋಟೋಗಳನ್ನು ಶೇರ್‌ ಮಾಡಿದ್ದರು. ಅಲ್ಲದೆ ಪ್ರಪಂಚದ ಅತಿದೊಡ್ಡ ಒಳನಾಡಿನ ಜಲರಾಶಿಯಾಗಿರುವ ಕ್ಯಾಸ್ಪಿಯನ್ ಸಮುದ್ರಕ್ಕೂ ಭೇಟಿ ನೀಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಇದರ ಫೋಟೋ ಹಂಚಿಕೊಳ್ಳುವ ಮೂಲಕ ಚಿಲ್‌ ಮಾಡಿದ್ದರು.

ಬಿಗ್‌ಬಾಸ್‌ನಲ್ಲಿ ಐಶ್ವರ್ಯಾ ಹಾಗೂ ಶಿಶಿರ್‌ ಕ್ಲೋಸ್‌ ಆಗಿದ್ದರು. ಎಲ್ಲರೂ ಇವರನ್ನು ಮುಂದಿನ ಜೋಡಿ ಎಂದೇ ಭಾವಿಸಿದ್ದರು. ಆದರೆ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದು, ಇತ್ತೀಚೆಗೆ ಎಲ್ಲೆಡೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ಹಳೇ ವದಂತಿಗೆ ರೆಕ್ಕೆಪುಕ್ಕ ಕಟ್ಟಿದ್ದಾರೆ. ಬಿಗ್‌ಬಾಸ್‌ನಿಂದ ಬಂದ ಬಳಿಕ ಸಿಹಿಸುದ್ದಿ ನೀಡಿದ್ದ ಇಬ್ಬರೂ ಬಿಸಿನೆಸ್‌ ಪಾರ್ಟ್‌ನರ್‌ಗಳು ಎಂದು ಹೇಳಿಕೊಂಡಿದ್ದರು.

ರಾಮನವಮಿಯಂದು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಹಂಚಿಕೊಂಡಿದ್ದರು. ಶಿಶಿರ್‌ ಹಾಗೂ ಐಶ್ವರ್ಯಾ ಸೇರಿ ಜೊತೆಯಾಗಿ ಒಂದು ಪ್ರೊಡಕ್ಷನ್ಸ್ ಹೌಸ್‌ನ ಶುರು ಮಾಡುವುದಾಗಿ ಘೋಷಿಸಿದ್ದರು. ಇದಕ್ಕೆ ಹರ ಸ್ಟುಡಿಯೋಸ್‌ ಎಂದು ಹೆಸರಿಟ್ಟಿದ್ದಾರೆ. ಹರ ಸ್ಟುಡಿಯೋಸ್‌ಯಿಂದ ಬ್ರಾಂಡ್‌ ಶೂಟ್‌ ಆಗುತ್ತೆ, ಕಂಟೆಂಟ್‌ ಶೂಟ್‌, ಪ್ರೀ-ವೆಡ್ಡಿಂಗ್‌ ಶೂಟ್‌, ಜೊತೆಗೆ ಜಾಹಿರಾತುಗಳು ಸೇರಿ ಎಲ್ಲ ರೀತಿಯ ಶೂಟ್‌ಗಳನ್ನು ಹರ ಸ್ಟುಡಿಯೋಸ್‌ ಕಡೆಯಿಂದ ಮಾಡುತ್ತೇವೆ. ಇದರಲ್ಲೇ ಮೇಕಪ್ ಆರ್ಟಿಸ್ಟ್, ಹೇರ್‌ ಸ್ಟೈಲಿಸ್ಟ್‌, ಕೊರಿಯೋಗ್ರಾಫರ್‌, ಬರಹಗಾರರು, ನಿರ್ದೇಶಕರು ಎಲ್ಲರೂ ಒಂದೇ ಕಡೆಯಲ್ಲಿ ಸಿಗುತ್ತಾರೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+