Bigg Boss Kannada 13: ಲೂಟಿಕೋರರು–ರಕ್ಷಕರ ಟಾಸ್ಕ್‌ ತಮಿಳು ಬಿಗ್‌ಬಾಸ್‌ನಿಂದ ಕಾಪಿಯೇ? ನೆಟ್ಟಿಗರು ಏನಂದ್ರು

Bigg Boss Kannada 13: ಬಿಗ್‌ಬಾಸ್ ಕನ್ನಡದಲ್ಲಿ ಲೂಟಿಕೋರರು ರಕ್ಷಕರು ಎನ್ನುವ ಟಾಸ್ಕ್‌ ಕೊಡಲಾಗಿದೆ. ಆದರೆ, ಇದು ತಮಿಳು ಬಿಗ್‌ಬಾಸ್‌ನ ಕಾಪಿ ಎಂದು ಕನ್ನಡಿಗರು ಹೇಳಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಕೊಡಲಾಗಿರುವ ಟಾಸ್ಕ್‌ ಏನು ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕನ್ನಡ ಬಿಗ್‌ಬಾಸ್‌ನಲ್ಲಿ ಹೊಸದೊಂದು ಟಾಸ್ಕ್‌ ಕೊಡಲಾಗಿದೆ. ಇದರಲ್ಲಿ ಕಾರಾಗೃಹದಲ್ಲಿ ಇರುವವರು ಈ ಬಹು ಅಮೂಲ್ಯ ವಸ್ತುಗಳ ಲೂಟಿಕೋರರನ್ನಾಗಿ ನೇಮಿಸಲಾಗಿದೆ. ರಕ್ಷಕರು ಮ್ಯೂಸಿಯಂನಿಂದ ವಸ್ತುಗಳು ಯಾವಾಗ ಕಳುವಾಗುತ್ತದೆಯೋ ಅಂತ ಹಗಲು - ರಾತ್ರಿ ಭಯದಿಂದಲೇ ಇರಬೇಕು ಅಂತ ಟಾಸ್ಕ್‌ ಕೊಡಲಾಗಿದೆ. ಈ ಟಾಸ್ಕ್‌ ರೋಚಕವಾಗಿದೆ. ಲೂಟಿಕೋರರ ತಂಡದಲ್ಲಿ ಇರುವವರು ಲೂಟಿ ಮಾಡಲು ಪ್ರಯತ್ನಿಸಿದರೆ, ರಕ್ಷಕರು ಇದನ್ನು ತಡಯಲು ಪ್ರಯತ್ನಿಸಿದ್ದಾರೆ.

Bigg Boss Kannada 13 Looters vs Guards Task Sparks Copy Controversy What Are Viewers Saying

Bigg Boss Kannada 13: ತಮಿಳುಬಿಗ್‌ಬಾಸ್‌ನಿಂದ ಕಾಪಿ ಎಂದ ಕನ್ನಡಿಗರು

ಇನ್ನು ಲೂಟಿಕೋರರು ಡೈಮಂಡ್ ಕಳ್ಳತನ ಮಾಡುವುದು ಹಾಗೂ ರಕ್ಷಕರು ಅದನ್ನು ತಡೆಯುವುದು ಬಿಗ್‌ಬಾಸ್ ತಮಿಳಿನಲ್ಲಿ ಈಚೆಗೆ ಪ್ರಸಾರವಾಗಿದೆ. ಇದು ಅಲ್ಲಿನ ಕಾನ್ಸೆಪ್ಟ್‌ ಕಾಪಿ ಮಾಡಲಾಗಿದೆ ಎಂದು ಕನ್ನಡಿಗರು, ವೀಕ್ಷಕರು ದೂರಿದ್ದಾರೆ. ಟಾಸ್ಕ್‌ ಕೃಪೆ ತಮಿಳು ಬಿಗ್‌ಬಾಸ್ ಅಂತಲೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ಈ ಗೇಮ್ ತುಂಬಾ ಚೆನ್ನಾಗಿದೆ. ಆದರೆ ಸ್ಪರ್ಧಿಗಳು ಈ ಆಟವನ್ನು ಇನ್ನಷ್ಟು ಚೆನ್ನಾಗಿ ಆಡುವ ಅವಕಾಶವಿತ್ತು ಅಂತಲೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ತಮಿಳು ಬಿಗ್‌ಬಾಸ್‌ ಕಾನ್ಸೆಪ್ಟ್‌ ಕಾಪಿ ಮಾಡುವ ಅವಶ್ಯಕತೆ ಇರಲಿಲ್ಲ. ಅವರು ಹೋದವಾರ ಮಾಡಿದ್ದಾರೆ. ಅದನ್ನೇ ಇಲ್ಲಿ ಬಳಸುವ ಅವಶ್ಯಕತೆ ಇರಲಿಲ್ಲ ಹೊಸದಾಗಿ ಪ್ರಯತ್ನಿಸಿರಬಹುದಿತ್ತು ಅಂತಲೂ ಹಲವು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. Copy ಆದರೂ ಚೆನ್ನಾಗಿದ್ದರೆ ಸಾಕು, ಇಷ್ಟರವರೆಗೆ ಆಡಿದ ಯಾವ ಟಾಸ್ಕ್ ಸಹ ಚೆನ್ನಾಗಿರಲಿಲ್ಲ ಅಂತಲೂ ಕೆಲವರು ಹೇಳಿದ್ದಾರೆ.

ಬಿಗ್‌ಬಾಸ್ ಕನ್ನಡದಲ್ಲಿ ಈಚೆಗೆ ನೀಡಿದ ಟಾಸ್ಕ್‌ ಸಹ ಸ್ಪರ್ಧಿಗಳ ನಡುವೆ ವೈಮನಸ್ಸು ಮೂಡಿತ್ತು. ಪರಸ್ಪರ ಸರ್ಧಿಗಳು ಮತ್ತೊಬ್ಬರ ಫೋಟೋ ಹಾಕಿಕೊಂಡು ಮಾಡುವ ಟಾಸ್ಕ್‌ ಕೊಡಲಾಗಿತ್ತು.

Bigg Boss Kannada 13: ಬಿಗ್‌ಬಾಸ್‌ನಿಂದ ಅವಕಾಶ ಕೈ ತಪ್ಪಿತು

ಬಿಗ್‌ಬಾಸ್‌ನಿಂದ ಅವಕಾಶಗಳು ಕೈತಪ್ಪಿತು ಎಂದು ನಟಿ ಸುಧಾರಾಣಿ ಅವರು ಹೇಳಿಕೊಂಡಿದ್ದಾರೆ. ಪ್ರತಿ ಬಾರಿಯೂ ಬಿಗ್‌ಬಾಸ್ ಶುರುವಾಗುವಾಗ ಸಹಜವಾಗಿಯೇ ಈ ಬಾರಿ ಯಾರು ಬಿಗ್‌ಬಾಸ್‌ಗೆ ಹೋಗಲಿದ್ದಾರೆ ಎನ್ನುವ ವಿಚಾರವು ಚರ್ಚೆ ಆಗುತ್ತದೆ. ಬಿಗ್‌ಬಾಸ್‌ಗೆ ಹೋಗುವವರ ಹೆಸರಿನಲ್ಲಿ ನಟಿ ಸುಧಾರಾಣಿ ಅವರ ಹೆಸರು ಸಹ ಕೇಳಿ ಬಂದಿತ್ತು. ಇದರಿಂದ ಸಿನಿಮಾದ ಅವಕಾಶಗಳು ಕೈ ತಪ್ಪಿತು ಎಂದು ನಟಿ ಸುಧಾರಾಣಿ ಅವರು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಈ ರೀತಿಯ ಸುಳ್ಳು ಸುದ್ದಿಯಿಂದ ನಿರ್ಮಾಪಕರು ಅವರಿಗೆ ನೀಡಿದ್ದ 3-4 ಸಿನಿಮಾ ಅವಕಾಶಗಳನ್ನು ಕೈಬಿಟ್ಟಿದ್ದರು ಅಂತ ನಟಿ ಸುಧಾರಾಣಿ ಅವರು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+