Bigg Boss Kannada 13: ಜಗದೀಶ್ ಮಾತಿಗೆ ಮೌನಕ್ಕೆ ಜಾರಿದ ಕಿರಣ್ ಶಾಸ್ತ್ರಿ, ನೆಟ್ಟಿಗರು ಕೊಟ್ಟರು ಸಾಥ್!
Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮೂವರು ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿಯ ನಂತರ ಮನೆಯಲ್ಲಿ ಹೊಸ ಹವಾ ಶುರುವಾಗಿದೆ. ಇದರ ನಡುವೆ ಜಗದೀಶ ನೇರ ಮಾತಿಗೆ ಕಿರಣ್ ಶಾಸ್ತ್ರಿ ಅವರು Silent ಆದ್ರಾ ಅಂತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಹೆಚ್ಚು ಮಾತನಾಡದ, ಕೋಪ ಮಾಡಿಕೊಳ್ಳದ ಜಗ್ಗಿ ಅವರು ಸಹ ಮಾತನಾಡಿದ್ದಾರೆ. ಜಗದೀಶ್ ಅವರ ಮಾತಿಗೆ ಹಲವರು ಸಾಥ್ ನೀಡಿದ್ದಾರೆ. ಹೊಸ ಪ್ರೋಮೋ ಭಾರೀ ವೈರಲ್ ಆಗುತ್ತಿದೆ.
ಕಿರಣ್ ಶಾಸ್ತ್ರಿ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಜಗದೀಶ್ ಅವರು ವಿವರಿಸಿದ್ದಾರೆ. ಕಿರಣ್ ಶಾಸ್ತ್ರಿ ಅವರನ್ನು ಎರಡು ದಿನಗಳ ಕಾಲ ಜೈಲಿಗೆ ಹಾಕಿದ್ದರು. ತರಕಾರಿಯನ್ನು ಕಟ್ಟು ಮಾಡಿಕೊಡಿ ಅಂತ ಅವರಿಗೆ ಕೊಟ್ಟರೆ, ಹಸುಗಳಿಗೆ ಕಟ್ ಮಾಡುವ ರೀತಿಯಲ್ಲಿ ದೊಡ್ಡ ದೊಡ್ಡದಾಗಿ ಕಟ್ ಮಾಡಿಕೊಟ್ಟಿದ್ದರು. ಅದು ಯಾವಾಗಲೂ ಇರಬಾರದು. ತುಂಬಾ ಬೇಜವಾಬ್ದಾರಿಯಿಂದ ಕಟ್ ಮಾಡುತ್ತಿದ್ದರು, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದರು ಅಂತ ಜಗ್ಗಿ ಅವರು ಹೇಳಿದ್ದಾರೆ. ಮುಂದುವರಿದು ಅವರಿಗೆ ಏನೆಂದರೆ ನನ್ನ ಜೈಲಿಗೆ ಹಾಕಿ ಬಿಟ್ಟಿದ್ದಾರೆ. ನಾನು ಗಂಜಿ ಕುಡಿಯುತ್ತಿದ್ದೇನೆ ಅಂತ ಭಾವನೆ ಅವರಲ್ಲಿತ್ತು. ಹೊಟ್ಟೆ ಉರಿ... ನಾನು ಇಷ್ಟು ಊಟ ಮಾಡ್ತಿದ್ದೀನಲ್ಲ ಅವರು ಊಟ ಮಾಡಬಾರದು ಎನ್ನುವಂತಹ ಭಾವನೆ ಕಿರಣ್ ಶಾಸ್ತ್ರಿ ಅವರಿಗಿತ್ತು ಅಂತ ಹೇಳಿದ್ದಾರೆ.

ಮುಂದುವರಿದು ಇಲ್ಲಿ ಬಿಗ್ ಬಾಸ್ ಮನೆಯಲ್ಲಿಯೇ ಆಗಲಿ ಹೊರಗಡೆಯೇ ಆಗಲಿ. ಈ ರೀತಿಯ ಮನೋಭಾವೆ ಯಾರಿಗೂ ಇರಬಾರದು. ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ರೀತಿ ಮಾಡಿದರೆ ದೇವರು ಎಲ್ಲೋದರೂ ನಮ್ಮನ್ನ ಕಾಪಾಡ್ತಾನೆ ಅಂತ ಜಗ್ಗಿ ಅವರು ಹೇಳಿದ್ದಾರೆ. ಇದಕ್ಕೆ ಕಿರಣ್ ಶಾಸ್ತ್ರಿ ಅವರು ಆಯ್ತಪ್ಪಾ ಆಯ್ತು.. ಅಂತ ಹೇಳಿದ್ದಾರೆ. ಇಲ್ಲವಾದರೆ ಎಲ್ಲೋದರೂ ದೇವರು ಕಾಪಾಡಲ್ಲ ಅಂತ ಜಗದೀಶ್ ಅವರು ಹೇಳಿದ್ದಾರೆ.
ಆಯ್ತು ಜಗದೀಶ್ ಅಣ್ಣ ನಾನು ಅದನ್ನೇ ಹೇಳ್ತಾ ಇರೋದು ಅಂತ ಕಿರಣ್ ಶಾಸ್ತ್ರಿ ಅವರು ಹೇಳಿದ್ದಾರೆ. ಆಗಲೇ ನೀನು ತಮ್ಮ ಎನ್ನುವ ಸಲುಗೆಯಲ್ಲೇ ಸಣ್ಣದಾಗಿ ತರಕಾರಿ ಕಟ್ ಮಾಡಿಕೊಡು ಅಂತ ಹೇಳಿದ್ದರೆ ಸಾಕಾಗಿತ್ತು. ಹಿಂಗೆ ಮಾಡಬಾರದಪ್ಪ ಚಿಕ್ಕದಾಗಿ ಕಟ್ ಮಾಡಿ ಕೊಡು ಅಂತ ಹೇಳಿರಬಹುದಿತ್ತು. ಆ ರೀತಿ ಮಾಡಿದ್ದರೆ ನಾನು ನಿಮ್ಮ ಮಾತು ಒಪ್ಪುತ್ತಿದ್ದೆ ಅಂತಲೂ ಹೇಳಿದ್ದಾರೆ.
ಇದಕ್ಕೆ ಜಗ್ಗಿ ಅವರು ಆಯ್ತು ಚಿನ್ನು ಮರಿ ಇನ್ಮೇಲಿ ಚಿಕ್ಕದಾಗಿ ತರಕಾರಿ ಕಟ್ ಮಾಡಿ ಕೊಡಪ್ಪ ಅಂತ ವ್ಯಂಗ್ಯವಾಗಿ ಹೇಳಿದ್ದಾರೆ. ಜಗದೀಶ್ ಅವರ ಈ ಮಾತಿಗೆ ಮನೆ ಮಂದಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಯಾರಾದರೂ ಎರಡು ಮಾತು ಹೇಳಿದ ತಕ್ಷಣ ಸಪ್ಪಗೆ ಕುಳಿತುಕೊಳ್ಳುತ್ತೀಯಾ ಅಂತಲೂ ಜಗದೀಶ್ ಅವರು ಕಿರಣ್ ಶಾಸ್ತ್ರಿ ಅವರ ಕಾಲೆಳೆದಿದ್ದಾರೆ.
Bigg Boss Kannada 13: ನೆಟ್ಟಿಗರು ಹೇಳಿದ್ದೇನು ?
ಜಗದೀಶ್ ಅವರು ಕಿರಣ್ ಶಾಸ್ತ್ರಿ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದರೂ ನೆಟ್ಟಿಗರು ಕಿರಣ್ ಶಾಸ್ತ್ರಿಗೆ ಈ ವಿಚಾರದಲ್ಲಿ ಬೆಂಬಲ ಸೂಚಿಸಿದ್ದಾರೆ. ಅಲ್ಲಪ್ಪ ಜಗ್ಗಿ, ಕೆಳಗೆ ಬಿದ್ದವನಿಗೆ ನೂರು ಕಲ್ಲು ಅಂತ ನೀನೂ ಕಿರಣ್ ಶಾಸ್ತ್ರಿನ ಟಾರ್ಗೆಟ್ ಮಾಡುತ್ತಿದ್ದೀಯ, ನಾಮಿನೇಷನ್ ಅಂತ ಬಂದ್ರೆ ಇಡೀ ಮನೆ ತೆಗೆದುಕೊಳ್ಳೋದು ಬರೀ ನಾಲ್ಕು ಜನರ ಹೆಸರು, ಕಿರಣ್ ಶಾಸ್ತ್ರಿ, ಲಿಖಿತ್, ಮಂಜ ಮತ್ತು ಧನುಷ್ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ. ಹೊಸಬರು ಬಂದ ತಕ್ಷಣ ಜಗ್ಗಿ ಅವರು ಬದಲಾದರೆ ಅಂತಲೂ ಕೆಲವರು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications
