Bigg Boss Kannada 13: ಕಾಮನ್ ಮ್ಯಾನ್ ಮಾತಿನಿಂದ ಫಜೀತಿ: ಕ್ಯಪಾಸಿಟಿ, ನಾಲಾಯಕ್, ಬಳೆ ಹಾಕಿಕೋ... ಏಕವಚನ ಬಳಕೆ ಜೋರು!
Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮತ್ತೆ ಬಳೆ ಸದ್ದು ಕೇಳಿಸಿದೆ. "ಬಿಗ್ ಬಾಸ್ ಕನ್ನಡ ಸೀಸನ್ 10' ರಿಯಾಲಿಟಿ ಶೋನಲ್ಲಿಯೂ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವೆ "ಬಳೆ ಜಗಳ' ಜೋರಾಗಿತ್ತು. ಬಳೆ ಹಾಕಿಕೊಂಡಿದ್ದೀನಿ ನೋಡು ಅಂತ ಸಂಗೀತಾ ಶೃಂಗೇರಿ ವಿನಯ್ ಗೌಡಗೆ ಹೇಳಿದ್ದರು. ಇದೀಗ ಬಿಗ್‌ಬಾಸ್ ಹೊಸ ಶೋನಲ್ಲಿಯೂ ಬಳೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಕಾಮನ್ ಮ್ಯಾನ್ ಕಿರಣ್ ಶಾಸ್ತ್ರಿ ಮತ್ತೆ ಬಳೆ ವಿಚಾರವನ್ನ ಪ್ರಸ್ತಾಪಿಸಿದ್ದಾರೆ.
ಹೌದು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಮತ್ತೆ ಬಳೆ ಸದ್ದು ಜೋರಾಗಿದೆ. ಇದೇ ಮೊದಲ ಬಾರಿ ಬಿಗ್‌ಬಾಸ್‌ನಲ್ಲಿ ಅಗ್ನಿ ಪರೀಕ್ಷೆಯ ಮೂಲಕ ನಾಲ್ವರು ಕಾಮನ್ ಮ್ಯಾನ್‌ಗಳಿಗೆ ಅವಕಾಶ ಕೊಡಲಾಗಿದೆ. ಆದರೆ ಹಲವು ನೆಟ್ಟಿಗರು ಕಾಮನ್ ಮ್ಯಾನ್‌ಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್‌ನ ಕೆಲವು ವೀಕ್ಷಕರು ಕಾಮನ್ ಮ್ಯಾನ್‌ಗಳಲ್ಲ ಇವರ ಆಟದ ರೀತಿ ಬದಲಾಗಬೇಕು ಎನ್ನುತ್ತಿದ್ದಾರೆ. ಇದೇ ಸಮಯದಲ್ಲಿ ಸೆಲೆಬ್ರಿಟಿಗಳ ವರ್ತನೆಯೂ ಸರಿ ಇಲ್ಲ ಅವರ ಆ ರೀತಿ ಮಾಡಿದ್ದರಿಂದಲೇ ಇವರು ಈ ರೀತಿ ಆಟವಾಡುತ್ತಿದ್ದಾರೆ ಅಂತಿದ್ದಾರೆ. ಈ ನಡುವೆ ಕಿರಣ್ ಶಾಸ್ತ್ರಿ ಹಾಗೂ ಮಂಜು ಅವರ ವರ್ತನೆಯ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ಇದರೊಂದಿಗೆ ಈ ಸೀಸನ್‌ನಲ್ಲೂ ಬಳೆ ವಿಚಾರ ಸದ್ದು ಮಾಡುತ್ತಿದೆ.
Bigg Boss Kannada 13: ಕಿರಣ್ ಶಾಸ್ತ್ರಿ ಆಟದ ವಿಚಾರದಿಂದ ಜಗಳ
ಬಿಗ್‌ಬಾಸ್‌ನಲ್ಲಿ ನೀಡಲಾಗಿದ್ದ ಟಾಸ್ಕ್ ಅನ್ನು ಕಿರಣ್ ಶಾಸ್ತ್ರಿ ಆಡಿದ ವಿವಾದಕ್ಕೆ ವಿರೋಧ ವ್ಯಕ್ತವಾಗಿದೆ. ತಮ್ಮ ವಸ್ತುಗಳನ್ನು ಕಾಪಾಡಿಕೊಳ್ಳಬೇಕು ಎನ್ನುವ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ತಮ್ಮ ಪಂಚೆ ಉಪಯೋಗಿಸಿ ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಇದಕ್ಕೆ ಮಂಜು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾಂಡವ್ ರಾಮ್ ಅವರು ನಿಯಮ ಉಲ್ಲಂಘನೆ ಆಗಿದೆ. ತಾಂಡವ್ ರಾಮ್ ಅವರು, ನಿಯಮ ಉಲ್ಲಂಘನೆಯಾಗಿದೆ. ಎಲ್ಲ ಪಾಯಿಂಟ್ಸ್ ಇಂದ ಅವನನ್ನು ತೆಗೆದು ಹಾಕುತ್ತಿದ್ದೇವೆ ಅಂತ ತಾಂಡವ್ ರಾಮ್ ಹೇಳಿದ್ದಾರೆ. ಇದಕ್ಕೆ ಶಾಸ್ತ್ರಿ ಗರಂ ಆಗಿದ್ದಾರೆ.
ದೊಡ್ಡವನಾ ನೀನು ಟಾಸ್ಕ್ ಅರ್ಥ ಮಾಡಿಕೊಳ್ಳೋವ ಕ್ಯಪಾಸಿಟಿ ಇಲ್ಲ ಬರ್ತಾನೆ. ದೊಡ್ಡವನಾ ನೀನು 50 ಅಲ್ಲ 10 ಪೈಸೆಗೂ ಲಾಯಕ್ಕು ಇಲ್ಲ ನಾಲಾಯಕ್ ಅಂತ ಹೇಳಿದ್ದಾರೆ. ಅಲ್ಲದೆ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಾ.. ಎಂದೇಲ್ಲ ಏಕವಚನ ಬಳಸಿದ್ದಾರೆ. ಇದಕ್ಕೆ ಗಗನ್ ಚಿನ್ನಪ್ಪ ಅವರು ಗರಂ ಆಗಿದ್ದಾರೆ. ಕರೆಕ್ಟ್ ಆಗಿ ಮಾತನಾಡು ಅಂತ ಎಚ್ಚರಿಸಿದ್ದಾರೆ.
Bigg Boss Kannada 13: ಬಳೆ ವಿಚಾರ ಮತ್ತೆ ಸದ್ದು!
ಟೀಮಾ ನೀವು ಬಳೆ ಹಾಕಿಕೊಂಡು ಕೂತುಕೊಂಡು ಬಿಡಿ ಅಂತ ಕಿರಣ್ ಶಾಸ್ತ್ರಿ ಹೇಳಿದ್ದಾರೆ. ಇದಕ್ಕೆ ಗಗನ್ ಗರಂ ಆಗಿದ್ದಾರೆ. ಈ ಸಂದರ್ಭದಲ್ಲಿ ಬಳೆ ಹಾಕಿಕೊಂಡರೆ ಏನು, ಬಳೆ ಹಾಕಿಕೊಂಡರೆ ಏನು ಅಂತ ಕೂಗಿದ್ದಾರೆ. ಹೂ ಹಾಕಿಕೊಳ್ಳಿ ಅಂತ ಶಾಸ್ತ್ರಿ ಹೇಳಿದ್ದಾರೆ.


Click it and Unblock the Notifications
