BBK-12: ನನಗೆ ಯೋಗ್ಯತೆ ಇದೆ, ನಿಖರ ಕಾರಣ ಕೇಳ್ತೀನಿ: ರೊಚ್ಚಿಗೆದ್ದ ರಕ್ಷಿತಾ ಬಿಗ್‌ಬಾಸ್ ಮನೆಗೆ ವಾಪಸ್
ಕರಾವಳಿ ಕನ್ನಡತಿ ಖ್ಯಾತಿಯ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್-12 ಶುರುವಾದ ಒಂದೇ ದಿನಕ್ಕೆ ಎಲಿಮಿನೇಟ್ ಆಗಿದ್ದರು. ಇದು ಪ್ರೇಕ್ಷಕರಿಗೂ ಶಾಕ್ ಆಗಿತ್ತು. ಒಂದೇ ದಿನಕ್ಕೆ ಈ ರೀತಿ ಮಾಡಬಾರದಿತ್ತು ಅಸಮಾಧಾನ ಹೊರಹಾಕಿದ್ದರು. ರಕ್ಷಿತಾ ಶೆಟ್ಟಿ ಕೂಡ ಒಳ್ಳೆಯ ಸ್ಪರ್ಧಿ, ಅವರಿಗೂ ಇನ್ನೂ ಅವಕಾಶ ಕೊಡಬೇಕಿತ್ತು ಎಂದೆಲ್ಲ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಬೇಡಿಕೆ ಇಟ್ಟಿದ್ದರು. ಅದರಂತೆ ಮೊದಲ ವಾರವೇ ರಕ್ಷಿತಾ ಮತ್ತೆ ಬಿಗ್‌ಬಾಸ್ ಮನೆಗೆ ಮತ್ತೆ ವಾಪಸ್ ಆಗುವ ಸೂಚನೆ ಸಿಕ್ಕಿದೆ.
ಹೌದು, ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನ ಪ್ರೋಮೋ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ರಕ್ಷಿತಾ ಪ್ರತ್ಯಕ್ಷ ಆಗಿದ್ದಾರೆ. ಇದೇನು ನಿಮ್ಮ ಉಡುಪಿ ಅನ್ಕೊಂಡ್ರಾ? ಬರೋದು ಹೋಗೋದು ಮಾಡೋಕೆ ಎಂದು ಕಿಚ್ಚ ರಕ್ಷಿತಾಗೆ ಕಾಲೆಳೆದಿದ್ದಾರೆ. ಇದಕ್ಕೆ ರಕ್ಷಿತಾ, ಸರ್ ನನ್ನನ್ನ ಮನೆಯಿಂದ ಹೊರಗೆ ಹಾಕಿಬಿಟ್ಟಿದ್ದಾರೆ ಎಂದಿದ್ದಾರೆ. ಈಗ ನಾವು ಮತ್ತೆ ಬಿಗ್‌ಬಾಸ್ ಮನೆಗೆ ವಾಪಸ್ ಬಿಟ್ಟರೆ ಒಳಗೆ ಹೋಗಿ ಏನು ಮಾಡ್ತೀರಿ? ಎಂದು ಸುದೀಪ್ ರಕ್ಷಿತಾಗೆ ಕೇಳಿದ್ದಾರೆ.

ಹೋಗುವಾಗ ಸಮಾಧಾನ ಮಾಡೋಕೆ ಬಂದ್ರು
ನನ್ನ ಮನೆಯಿಂದ ಹೊರ ಹಾಕಿದ್ದಕ್ಕೆ ನಿಖರ ಕಾರಣ ಕೇಳ್ತೀನಿ. ನಾನು ಹೋಗುವಾಗ ಸಮಾಧಾನ ಮಾಡೋಕೆ ಬಂದಿದ್ರು. ಆದ್ರೆ ಯಾರೂ ನನ್ನ ಪರ ನಿಲ್ಲೋಕೆ ಬರಲಿಲ್ಲ. ಅವರಿಗೆ ನಾನು ಹೇಗೆ ಆಟ ಆಡ್ತೀನಿ ಅನ್ನೋದೆ ಗೊತ್ತಿಲ್ಲ. ಅವರು ಜಸ್ಟ್ ಕವರ್ ನೋಡಿ ನನ್ನ ಜಡ್ಜ್ ಮಾಡಿದ್ರು. ನನ್ನ ಪ್ರಕಾರ ಆ ಯೋಗ್ಯತೆ ನನಗಿದೆ ಎಂದು ರಕ್ಷಿತಾ ಉಳಿದ ಸ್ಪರ್ಧಿಗಳಿಗೆ ಕೌಂಟರ್ ಕೊಟ್ಟಿದ್ದಾರೆ. ಇದಕ್ಕೆ ಸುದೀಪ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ರಕ್ಷಿತಾ ಶೆಟ್ಟಿ ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್ ಮಾಡಿ ಮಾತನಾಡಿಯೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು. ಈ ಬಾರಿ ಬಿಗ್‌ಬಾಸ್ ಮೊದಲೇ ಘೋಷಣೆ ಮಾಡಿದ ಸ್ಪರ್ಧಿಗಳಲ್ಲಿ ರಕ್ಷಿತಾ ಕೂಡ ಒಬ್ಬರು. ರಕ್ಷಿತಾ ಅವರ ಕನ್ನಡ ಕೇಳಿ ಸುದೀಪ್ ವೇದಿಕೆಯಲ್ಲಿ ಬಿದ್ದು ಬಿದ್ದು ನಕ್ಕಿದ್ದರು. ಬಿಗ್‌ಬಾಸ್ ಮನೆಯಲ್ಲೂ ಇದೇ ರೀತಿಯ ಕಾಮಿಡಿ ಮುಂದುವರಿಯುತ್ತೆ ಎಂದು ಕಾದಿದ್ದ ಪ್ರೇಕ್ಷಕರಿಗೆ ಎಲಿಮಿನೇಷನ್‌ನಿಂದ ನಿರೀಕ್ಷೆ ಸುಳ್ಳಾಗಿತ್ತು.
ಬಿಗ್‌ಬಾಸ್ ಕನ್ನಡ ಸೀಸನ್ 12 ಶುರುವಾಗಿ ಕೇವಲ ಒಂದು ದಿನವಷ್ಟೇ ಕಳೆದು ಮೊದಲ ದಿನವೇ ಯಾರೂ ಊಹಿಸಿರದ ಎಲಿಮಿನೇಷನ್ ನಡೆದಿತ್ತು. ಉಳಿದ ಸ್ಪರ್ಧಿಗಳು ರಕ್ಷಿತಾ ಹೆಸರನ್ನು ನಾಮಿನೇಟ್ ಮಾಡಿದ್ದರಿಂದ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ರಕ್ಷಿತಾಗೆ ಈ ರೀತಿ ಅವಮಾನ ಮಾಡಬಾರದಿತ್ತು ಎಂದು ಹಲವರು ಬೆಂಬಲಕ್ಕೆ ನಿಂತಿದ್ದರು. ಕೆಲವರು ಈ ವಾರವೇ ರಕ್ಷಿತಾ ಮತ್ತೆ ವಾಪಸ್ ಆಗ್ತಾರೆ ಎಂದೂ ಹೇಳಿದ್ದರು. ಪ್ರೋಮೋ ನೋಡಿದರೆ, ರಕ್ಷಿತಾ ಎಲಿಮಿನೇಟ್ ಮಾಡಿದ ಉಳಿದ ಸ್ಪರ್ಧಿಗಳ ಮೇಲೆ ಸೇಡು ತೀರಿಸಿಕೊಳ್ಳಲು ರೆಡಿಯಾದಂತಿದೆ.











Click it and Unblock the Notifications