Bigg Boss: ಬಿಗ್‌ ಬಾಸ್‌ ನಿರೂಪಣೆ ಮಾಡಲು ಕಂಡಿಷನ್ಸ್‌ ಹಾಕಿದ ಕಿಚ್ಚ ಸುದೀಪ್; ಏನದು?

ಕನ್ನಡ ಕಿರುತೆರೆಯ ಇತಿಹಾಸದಲ್ಲಿ'ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಗೆ ಮಹತ್ವವಾದ ಸ್ಥಾನವಿದೆ. ಕನ್ನಡದಲ್ಲಿ ಬಿಗ್ ಬಾಸ್ ಜೊತೆಗೆ ಕಿಚ್ಚ ಸುದೀಪ್ ಅವರಿಗೆ ಅವಿನಾಭಾವ ಸಂಬಂಧವಿದೆ. ಕಳೆದ 11 ವರ್ಷಗಳಿಂದ ಈ ರಿಯಾಲಿಟಿ ಶೋವನ್ನು ಸುದೀಪ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಬಿಗ್‌ ಬಾಸ್‌ ರಿಯಾಲಿಟಿ ಶೋ ನಡೆಸಿಕೊಡಲ್ಲ ಎಂದು ಈಗಾಗಲೇ ಕಿಚ್ಚ ಸುದೀಪ್‌ ಅವರು ವಿದಾಯ ಹೇಳಿದ್ದು, ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನ ಮೂಡಿಸಿದೆ.

ಈಗಾಗಳರ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ತಯಾರಿಗೆ ಭರ್ಜರಿ ಸಿದ್ದತೆ ಆರಂಭವಾಗಿವೆ. ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಬಿಗ್ ಬಾಸ್ 12 ಆರಂಭವಾಗುವಾ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ, ಅದಕ್ಕೂ ಮುನ್ನ ನಟ ಕಿಚ್ಚ ಸುದೀಪ್ ಈ ಬಾರಿ ಶೋ ನಡೆಸಿಕೊಡ್ತಾರಾ, ಇಲ್ಲವಾ ಅನ್ನೋ ಚರ್ಚೆ ಶುರುವಾಗಿದೆ. ಆದರೆ ಈ ಬಾರಿ ಕಲರ್ಸ್‌ ಕನ್ನಡ ತಂಡ ಕಿಚ್ಚ ಸುದೀಪ್ ಅವರೇ ಈ ಶೋವನ್ನು ನಡೆಸಿಕೊಡಬೇಕು ಪಟ್ಟು ಹಿಡಿದಿದ್ದು, ಮೂಲಗಳ ಪ್ರಕಾರ ನಟ ಕಿಚ್ಚ ಸುದೀಪ್‌ ಅವರೇ ಬಿಗ್‌ ಬಾಸ್‌ ಕನ್ನಡದ 12 ನೇ ಸೀಸನ್‌ ನಡೆಸಿಕೊಡುತ್ತಾರೆ ಎಂದು ಹೇಳಲಾಗಿದೆ.

bigg boss kannada 12 kiccha sudeep may come back as host

ಕಳೆದ ಬಿಗ್‌ ಬಾಸ್‌ ಶೋ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್‌ ಅವರು ಎಕ್ಸ್‌ ಖಾತೆಯ ಮೂಲಕ ನಿರೂಪಕವಾಗಿ ಇದು ನನ್ನ ಕೊನೆಯ ಬಿಗ್‌ ಬಾಸ್‌ ಬಾಸ್‌ ಶೋ ಎಂದು ಬರೆದುಕೊಂಡಿದ್ದರು. ಈ ಸುದ್ದಿ ಬಿಗ್‌ ಬಾಸ್‌ ವೀಕ್ಷಕರಿಗೆ ಹಾಗೂ ಕಿಚ್ಚ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಕೊಟ್ಟಿತ್ತು. ಕಿಚ್ಚ ಸುದೀಪ್‌ ಅವರ ಈ ಶೋ ವೀಕ್ಷಣೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕಿಚ್ಚ ಸುದೀಪ್‌ ಅವರು ಶೋ ಬಿಟ್ಟರೇ ನಾವು ಯಾರು ಬಿಗ್‌ ಬಾಸ್‌ ಶೋ ನೋಡಲ್ಲ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಕಲರ್ಸ್‌ ಕನ್ನಡ ತಂಡ ಸುದೀಪ್‌ ಅವರನ್ನ ನಿರೂಪಣೆಯಲ್ಲಿ ಮುಂದುವರೆಯುವಂತೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇದೀಗ ಬಿಗ್‌ ಬಾಸ್‌ ಸೀಸನ್‌ 12 ಕ್ಕೆ ನಿರೂಪಕರಾಗಿ ಕಿಚ್ಚ ಸುದೀಪ್‌ ಅವರೇ ಮುಂದುವರೆಯುತ್ತಾರಂತೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್‌ ಬಾಸ್‌ ಆಯೋಚಕರು ಕಿಚ್ಚ ಸುದೀಪ್‌ ಅವರೇ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀಪ್‌ ಅವರು ಕೆಲವು ಕಂಡಿಷನ್ಸ್‌ಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಆ ಕಂಡಿಷನ್ಸ್‌ಗಳನ್ನು ಆಯೋಜಕರು ಒಪ್ಪಿದರೆ ಮಾತ್ರ ಸುದೀಪ್‌ ಅವರೇ ಮುಂದಿನ ಸೀಸನ್‌ಗೆ ಹೋಸ್ಟ್‌ ಆಗಿ ಬರುತ್ತಾರೆ ಎನ್ನಲಾಗುತ್ತಿದೆ.

ಇನ್ನೂ ಬಿಗ್ ಬಾಸ್‌ನಿಂದ ನಟ ಕಿಚ್ಚ ಸುದೀಪ್ ದೂರವಾದರೆ ಕಲರ್ಸ್ ಕನ್ನಡ ವಾಹಿನಿಗೆ ಅದೊಂದು ದೊಡ್ಡ ಸವಾಲಾಗಲಿದೆ. ಏಕೆಂದರೆ, ಕಿಚ್ಚ ಸುದೀಪ್‌ ಅವರಿಗಾಗಿ ಹಲವು ಅಭಿಮಾನಿಗಳು ಬಿಗ್‌ ಬಾಸ್‌ ರಿಯಾಲಿಟಿ ಶೋವನ್ನ ವೀಕ್ಷಿಸುತ್ತಾರೆ. ಸುದೀಪ್‌ ಅವರು ಹೋಸ್ಟ್‌ ಮಾಡಲಿಲ್ಲ ಎಂದರೆ ಬಿಗ್ ಬಾಸ್ ನ ಟಿಆರ್‌ಪಿ ಮೇಲು ಸಹ ತೀವ್ರ ಪರಿಣಾಯ ಬೀರಲಿದೆ. ವಾರಾಂತ್ಯದಲ್ಲಿ ಸುದೀಪ್ ನಡೆಸಿಕೊಡುವ 'ಪಂಚಾಯಿತಿ' ನೋಡಲು ದೊಡ್ಡ ವೀಕ್ಷಕರ ಬಳಗವೇ ಇದೆ. ಸುದೀಪ್‌ ತೆಗೆದುಕೊಳ್ಳುವ ಕ್ಲಾಸ್‌ ನೋಡೋಕಂತಲೇ ದೊಡ್ಡ ವೀಕ್ಷಕರ ಬಳಗ ಇದೆ. ಹೀಗಾಗಿ, ದೊಡ್ಡ ಫ್ಯಾನ್ಸ್ ಫಾಲೋಯಿಂಗ್ ಇರುವ ಕಿಚ್ಚ ಸುದೀಪ್‌ ಅವರನ್ನು ಬಿಟ್ಟುಕೊಡಲು ಕಲರ್ಸ್ ಕನ್ನಡ ವಾಹಿನಿ ರೆಡಿ ಇಲ್ಲ, ಹೀಗಾಗಿ ಕಿಚ್ಚ ಸುದೀಪ್‌ ಅವರನ್ನ ತಂಡ ಒಪ್ಪಿಸಿದೆ ಎನ್ನಲಾಗಿದೆ.

ಕಂಡಿಪನ್ಸ್‌ ಏನು ಗೊತ್ತಾ?

ಬಿಗ್‌ ಬಾಸ್‌ 12 ಸೀಸನ್‌ ಮನೆಯು ಸಕತ್‌ ಕಲರ್‌ ಫುಲ್‌ ಆಗಿರಬೇಕು. ಅಲ್ಲದೇ ಕನ್ನಡಕ್ಕೆ ಮೊದಲ ಆದ್ಯತೆಯನ್ನ ಕೊಡ್ಬೇಕು, ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಹೆಚ್ಚಾಗೊ ಕನ್ನಡವನ್ನೇ ಮಾತನಾಡಬೇಕು. ಕನ್ನಡವೇ ವೇದಘೋಷ ಆಗಬೇಕು. ಅಲ್ಲದೇ ಒಳ್ಳೆಯ ಲೀಗಲ್‌ ಟೀಮ್‌ ಇರಬೇಕು. ಇನ್ನೂ ವಿವಾದಿತ ಸ್ಪರ್ಧಿಗಳನ್ನು ಆರಿಸಬಾರದು ಎಂದು ಕಿಚ್ಚ ಸುದೀಪ್‌ ಅವರು ಕಂಡಿಷನ್ಸ್‌ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಹೋಸ್ಟ್‌ ಮಾಡುತ್ತಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+