Bigg Boss: ಗ್ರ್ಯಾಂಡ್‌ ಫಿನಾಲೆಗೆ ಇನ್ನೊಂದೇ ದಿನ ಬಾಕಿ, ಪ್ರೇಕ್ಷಕರ ಪ್ರಕಾರ ಈ ಬಾರಿ ಬಿಗ್‌ ಬಾಸ್ ವಿನ್ನರ್ ಯಾರು?

Bigg Boss 11: ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಗ್ರ್ಯಾಂಡ್‌ ಫಿನಾಲಗೆ ಇನ್ನೂ ಕೇವಲ ಒಂದೇ ದಿನವಷ್ಟೇ ಬಾಕಿಯಿದೆ. ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳು ಇದ್ದು, ಈ ಪೈಕಿ ವಿನ್ನರ್ ಯಾರಾಗಲಿದ್ದಾರೆ ಎಂದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಸ್ಪರ್ಧಿಗಳಿಗೂ ಕೂಡ ಢವಢವ ಶುರುವಾಗಿದೆ. ಈ ನಡುವೆಯೇ ಫೈನಲಿಸ್ಟ್‌ ಯಾರಾಗಲಿದ್ದಾರೆ ಎನ್ನುವ ಚರ್ಚೆಯೂ ಕೂಡ ಜೋರಾಗಿ ನಡೆಯುತ್ತಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ವಿನ್ನರ್ ಯಾರಾಗಲಿದ್ದಾರೆ ಎನ್ನುವ ವರ್ಚೆ ಜೋರಾಗಿ ನಡೆಯುತ್ತಿದೆ. ಅಷ್ಟೇ ಅಲ್ಲದೆ ಯಾರ ಬಾಯಲ್ಲೂ ಕೇಳಿದರೂ ಬಿಗ್‌ ಬಾಸ್‌​ ಫೈನಲಿಸ್ಟ್‌ಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಗ್ರ್ಯಾಂಡ್‌ ಫಿನಾಲೆ ಕುತೂಹಲ ಸೃಷ್ಟಿಸಿದೆ.

Bigg Boss Kannada 11 Season Only One Day Left for Grand Finale Who is winner

ಈಗಾಗಲೇ ಬಿಗ್‌ಬಾಸ್‌​ ಕನ್ನಡ 11 ಸೀಸನ್ ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಭರ್ಜರಿ​ ತಯಾರಿ ನಡೆಯುತ್ತಿದೆ. ಒಂದೇ ದಿನದಲ್ಲಿ ಬಿಗ್‌ಬಾಸ್‌​ ಸೀಸನ್ 11ರ ಗ್ರ್ಯಾಂಡ್​ ನಡೆಯಲಿದೆ. ಆದ್ದರಿಂದ ಸ್ಪರ್ಧಿಗಳಲ್ಲಿ ಢವಢವ ಶುವಾಗಿದೆ. ದೊಡ್ಮನೆಯಲ್ಲು​ 6 ಸ್ಪರ್ಧಿಗಳು ಉಳಿದುಕೊಂಡಿದ್ದು, ಈಗ ಆ ಸ್ಪರ್ಧಿಗಳಗೆ ಯಾವ ಟಾಸ್ಕ್‌ಗಳೂ ಇಲ್ಲ. ಈಗ ಏನಿದ್ದರೂ ಸ್ಪರ್ಧಿಗಳ ಗಮನ ಬಿಗ್‌ ಬಾಸ್‌​ ಟ್ರೋಫಿಯತ್ತ ನೆಟ್ಟಿದೆ.

ಇದೇ ಸಮಯದಲ್ಲಿ ನಿನ್ನೆ ನಡೆದ ಎಫಿಸೋಡ್‌ನಲ್ಲಿ ಸ್ಪರ್ಧಿಗಳ ಅಭಿಮಾನಿಗಳು ಬಿಗ್‌ ಬಾಸ್‌ ಮನೆಗೆ ಪ್ರವೇಶ ಮಾಡಿದ್ದರು. ಈ ವೇಳೆ ಅವರವರ ಸ್ಪರ್ಧಿಗಳ ಪರ ಘೋಷಣೆಗಳನ್ನು ಕೂಗಿ ಅವರಲ್ಲಿದ್ದ ಭಯವನ್ನು ಸ್ವಲ್ಪ ಮಟ್ಟಿಗೆ ಹೋಗುವಂತೆ ಮಾಡಿದ್ದಾರೆ. ಇನ್ನು ಬಿಗ್‌ ಬಾಸ್‌ ಮನೆಗೆ ಬಂದ ಪ್ರೇಕ್ಷಕರನ್ನ ಕಂಡ ಅಲ್ಲಿನ ಸ್ಪರ್ಧಿಗಳು ಫುಲ್​ ಖುಷ್‌ ಆಗಿದ್ದಾರೆ. ಅಲ್ಲದೆ, ಇದೇ ವೇಳೆ ತಮ್ಮ ಅಭಿಮಾನಿಗಳ ಬಳಗದ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಘಟನೆ ನಡೆಯಿತು.

ಮೊದಲಿಗೆ ಡೈರೆಕ್ಟ್‌ ಟಿಕೆಟ್‌ ಟು ಫಿನಾಲೆ ವಾರಕ್ಕೆ ಹನುಮಂತು ಎಂಟ್ರಿ ಕೊಟ್ಟಿದ್ದರು. ಬಳಿಕ ಮೋಕ್ಷಿತಾ, ತ್ರಿವಿಕ್ರಮ್​ ಆಯ್ಕೆಯಾದರು. ಇನ್ನು ಕಳೆದ ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಎಫಿಸೋಡ್‌ನಲ್ಲಿ ನಾಮಿನೇಷನ್​ ಸ್ಥಾನದಲ್ಲಿದ್ದ ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್​ ಸೇಫ್​ ಆಗಿ ನೇರ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಮತ್ತೊಂದೆಡೆ ಬಿಗ್ ಬಾಸ್ ಶೋ ನೋಡುತ್ತಿರುವ ವೀಕ್ಷಕರು ಈ 6 ಸ್ಪರ್ಧಿಗಳಲ್ಲಿ ಯಾರು ಗೆಲ್ಲಬೇಕು ಅನ್ನುವುದನ್ನ ವೋಟ್ ಮಾಡಬಹುದಾಗಿದೆ.

ಪ್ರೇಕ್ಷಕರು ನಿಮ್ಮ ನೆಚ್ಚಿನ ಸ್ಪರ್ಧಿಯನ್ನ ಗೆಲ್ಲಿಸಲು ವೋಟಿಂಗ್ ಲೈನ್ಸ್ ಇದೇ ಶನಿವಾರ ಅಂದರೆ ಜನವರಿ 25ರ ಬೆಳಗ್ಗೆ 11ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಮಯದೊಳಗೆ ಜಿಯೋ ಸಿನಿಮಾ ಆ್ಯಪ್ ಡೌನ್‌ಲೋಡ್ ಮಾಡಿ, ವೋಟಿಂಗ್‌ಗೆ ಅವಕಾಶ ನೀಡಲಾಗಿದೆ. ಇನ್ನು ಭಾನುವಾರ (ಜನವರಿ 26) ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಎನ್ನುವುದನ್ನು ಘೋಷಣೆ ಮಾಡಲಾಗುತ್ತಿದೆ. ಆದ್ದರಿಂದ ಇದೀಗ ವೀಕ್ಷಕರ ಗಮನ ಟ್ರೋಪಿ ಯಾರ ಮುಡಿಗೆ ಸೇರಲಿದೆ ಎನ್ನುವುದರತ್ತ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+